ಜನರ ದಾರಿ ತಪ್ಪಿಸುತ್ತಿರುವ ಮೂವರು ‘ಚೌಕಿದಾರರ’ ಬಂಧನ…!

ರಾಜ್ಯದ ಮಾನ್ಯ ಮುಕ್ಯಮಂತ್ರ ಹೆಚ್.ಡಿ ಕುಮಾರಸ್ವಾಮಿ ಅವರು ಸತತ ಎರಡು ತಿಂಗಳಿಂದ ನಿರಂತರ ಚುನಾವಣೆ ಕೆಲಸದಿಂದ ದಣಿದಿದ್ದರು. ಹೀಗಾಗಿ ಉಡುಪಿಯ ರೆಸಾರ್ಟ್ ಒಂದರಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿಯನ್ನು ‘ಚೌಕಿದಾರ’ ಎಂದು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡು, ಬಿಜೆಪಿಯಾ ವಿರೋದಿ ಪಕ್ಷಗಳ/ ಪಕ್ಷದ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರ ದಾರಿ ತಪ್ಪಿಸುವುದನ್ನೇ ಪ್ರವೃತ್ತಿ ಮಾಡಿಕೊಂಡವರು, ಕುಮಾರಸ್ವಾಮಿ ಅವರು ರಾಧಿಕಾರ ಕುಮಾರಸ್ವಾಮಿ ಅವರ ಜೊತೆ ರೆಸಾರ್ಟ್ ಗೆ ಹೋಗಿದ್ದಾರೆ ಎಂದು ತಿರುಚಿ ಸುಳ್ಳು ಸುದ್ದಿ ಪ್ರಕಟಿಸಿದ್ದರು.

ಇದು ಜೆಡಿಎಸ್ ಕಾರ್ಯಕರ್ತರ ಗಮನಕ್ಕೆ ಬಂದಿದ್ದು, ತಮ್ಮ ಪಕ್ಷದ ಸಾಧನೆಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುವ ಬದಲು, ಪ್ರತಿಪಕ್ಷದ ನಾಯಕರ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ತೇಜೋವದೆ ಮಾಡುವುದನ್ನೇ ಚಟ ಮಾಡಿಕೊಂಡ ಇವರಿಗೆ ಬಾರಿ ಬುದ್ದಿ ಕಲಿಸಬೇಕೆಂದು ನಿರ್ಧರಿಸಿ, ಪೊಲೀಸ್ ದೂರು ನೀಡಿದ್ದಾರೆ.

ಜನರ ದಾರಿಯನ್ನು ತಪ್ಪಿಸುತ್ತಿರುವ ಸಮಾಜದ ಕ್ರಿಮಿಗಳಾದ ಅಜಿತ್ ಶೆಟ್ಟಿ ಹಿರಂಜಿ ಹಾಗು ಇನ್ನು ಇಬ್ಬರ ಈ ಪ್ರಕರಣವನ್ನು ಪೊಲೀಸ್ ನವರು ಸಹ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಅವರನ್ನು ಬಂಧಿಸಿದ್ದಾರೆ.

Leave a Reply