ದೇಶದ ಇಪ್ಪತ್ತು ಪ್ರಭಾವಿ ಪತ್ರಿಕೆಗಳಲ್ಲಿ ಸ್ಥಾನ ಪಡೆದ ವಿಜಯ ಕರ್ನಾಟಕ ಪತ್ರಿಕೆಗೆ ಅಭಿನಂದಿಸಿದ ದೇವೇಗೌಡರು…!

ಮಾಧ್ಯಮಗಳು ರಾಜಕಾರಣಿಗಳಿಗೆ, ಸಿನಿಮಾ ತಾರೆಯರಿಗೆ ರಾಕ್ಷಸನು ಆಗಿರುತ್ತದೆ, ಕೆಲವೊಮ್ಮೆ ರಕ್ಷಕನು ಆಗಿರುತ್ತದೆ. ಆದರೂ ರಾಜಕಾರಣಿಗಳಿಗೆ ಮಾಧ್ಯಮಗಳೆಂದರೆ ಕೊಂಚ ಅಪ್ರೀತಿ ಎಂದರೆ ತಪ್ಪಾಗುವುದಿಲ್ಲ. ಆದರೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಒಂದು ವಿಶಿಷ್ಟ ಗುಣವೆಂದರೆ, ಅವರು ಮೊದಲಿಂದಲೂ ಮಾಧ್ಯಮಗಳೊಂದಿಗೆ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ತಮ್ಮ ಬಗ್ಗೆ ತಪ್ಪು ಸುದ್ದಿ ಪ್ರಕಟಿಸಿದರು, ಅವರು ಅದರ ಬಗ್ಗೆ ಮುನಿಸಿಕೊಳ್ಳದೆ, ಕಾಲವೇ ಅದಕ್ಕೆ ಉತ್ತರ ನೀಡುತ್ತದೆ ಎಂಬ ನಂಬಿಕೆಯಿಂದ ಕಾಯುತ್ತಾರೆ. ಇದು ಒಬ್ಬ ರಾಜಕಾರಣಿಗೆ ಬಹಳ ಅಪರೂಪ ಗುಣ.

ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರು, ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ದೇವೇಗೌಡರ ಈ ಗುಣದ ಬಗ್ಗೆ ಹಾಡಿ ಹಗಳಿದ್ದರು. ‘ ಅವರು ಎಂದು ಸಹ, ಹೀಗೇಕೆ ನನ್ನ ಬಗ್ಗೆ ಬರೆದಿದ್ದೀಯ ಎಂದು ಪ್ರಶ್ನೆ ಮಾಡಿಲ್ಲ. ಹಿಂದಿನ ದಿನ ನಾನು ಅವರ ವಿರುದ್ಧ ಒಂದು ಸುದ್ದಿ ಪ್ರಕಟಿಸಿದ್ದರು, ಮರು ದಿನ ಅವರನ್ನು ಭೇಟಿಯಾದಾಗ ಮಂದಹಾಸದೊಂದಿಗೆ ಮಾತನಾಡಿಸುವ ಏಕೈಕ ರಾಜಕಾರ ನಮ್ಮ ಗೌಡ್ರು. ಬಹುಷಃ ಇಂತಹ ಸಜ್ಜನ ರಾಜಕಾರಣಿಯನ್ನು ನಾನು ಎಂದು ಕಂಡಿಲ್ಲ ” ಎಂದು ಹೇಳಿದರು.

ಕರ್ನಾಟಕದ ಮೂಲೆ ಮೂಲೆಯಲ್ಲೂ ಹೆಸರು ಮಾಡಿರುವ ‘ವಿಜಯ ಕರ್ನಾಟಕ’ ಪತ್ರಿಕೆ, ದೇಶದ 20 ಅತ್ಯಂತ ಪ್ರಭಾವಿ ಪತ್ರಿಕೆಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಈ ವಿಷಯ ತಿಳಿದು ದೇವೇಗೌಡರು, ಮನಃಪೂರಕವಾಗಿ ಅವರಿಗೆ ಅಭಿನಂದಿಸಿದ್ದಾರೆ. “ದೇಶದ ಇಪ್ಪತ್ತು ಪ್ರಭಾವಿ ಪತ್ರಿಕೆಗಳಲ್ಲಿ ವಿಜಯ ಕರ್ನಾಟಕ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ಕನ್ನಡಿಗರಾಗಿ ನಾವೆಲ್ಲಾ ಹೆಮ್ಮೆ ಪಡಬೇಕಾದ ಸಂಗತಿ ಇದು. ಜನಪರವಾದ ವಿಕ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ಟೈಮ್ಸ್ ಬಳಗಕ್ಕೆ ಅಭಿನಂದನೆ” ಎಂದು ಹೇಳಿದ್ದಾರೆ.

Leave a Reply