ತಮ್ಮ ರೆಸಾರ್ಟ್ ವಾಸಕ್ಕಾಗಲಿ, ಫೈವ್ ಸ್ಟಾರ್ ಹೋಟೆಲ್ ವಾಸಕ್ಕಾಗಲಿ ಸರ್ಕಾರದ ಒಂದು ರೂಪಾಯಿ ಹಣವನ್ನು ಸಿಎಂ ಉಪಯೋಗಿಸಿಲ್ಲ…!

ಹಲವು ದಿನಗಳಿಂದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ರೆಸಾರ್ಟ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಂಗತಿಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸರ್ಕಾರದ ಖಜಾನೆಯನ್ನು ತಮ್ಮ ಸ್ವಂತದ್ದಾಗಿ ಮಾಡಿಕೊಂಡಿದ್ದಾರೆ ಎಂದು ಟೀಕೆಗಳು ಕೇಳಿಬರುತ್ತಿವೆ. ಇನ್ನು ಸುದ್ದಿ ವಾಹಿನಿಗಳಂತೂ, ರೆಸಾರ್ಟ್ ನ ಐಷಾರಾಮದ ಬಗ್ಗೆ ವಿಶೇಷ ಸಂಚಿಕೆಗಳನ್ನು ಮಾಡಿ ಟಿಆರ್ ಪಿ ಗಾಗಿ ಬಣ್ಣ ಬಣ್ಣದ ಕತೆಗಳನ್ನು ಜನರಿಗೆ ಹೇಳುತ್ತಿದ್ದಾರೆ. ಆದರೆ ಅಸಲಿ ಸಂಗತಿ ಬೇರೇನೇ ಇದೆ.

ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಎಷ್ಟರ ಮಟ್ಟಿಗೆ ಐಷಾರಾಮಿಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ನಮಗೆ ಗೊತ್ತಿಲ್ಲ. “ಹೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗ ಬಹುದು, ನಿಧಾನಿಸಿ ಯೋಚಿಸಿ ನೋಡು, ನಿಜವೂ ತಿಳಿಯುವುದು ಎಂಬ ಗಾಧೆ ಮಾತೆ ಇದೆ. ಹಾಗೆಯೆ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಗಾದೆಯು ಇದೆ. ಆದ್ದರಿಂದ ಟಿವಿಯಲ್ಲಿ ಹೇಳಿದೆಲ್ಲ ನಂಬುವುದು ಎಷ್ಟರ ಮಟ್ಟಿಗೆ ಸರಿ?

ತರ್ಕಬದ್ಧವಾಗಿ ಯೋಚಿಸಿದರೆ, ಯಾವುದೇ ಮುಖ್ಯಮಂತ್ರಿಯೂ ಸರ್ಕಾರದ, ಅಂದರೆ ನಮ್ಮ ದುಡ್ಡನ್ನು ಸ್ವಂತಕ್ಕೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಅದಲ್ಲದೆ ಚುನಾವಣೆ ಫಲಿತಾಂಶ ನೀತಿ ಸಂಹಿತಿ ಜಾರಿಯಲ್ಲಿ ಇರುವ ತನಕ, ಇದನ್ನು ಅರಿಯದೆ ಟೀಕಿಸುವ ಜನರ ಬುದ್ದಿ ಶಕ್ತಿ ಪ್ರಶ್ನಿಸಬೇಕಾದದ್ದೇ.

ಇದರ ಬಗ್ಗೆ ಮಾತನಾಡಿದ ಡಿಸಿಎಂ,’ ಚುನಾವಣೆಗೆ ಸಾಕಷ್ಟು ಓಡಾಡಿ ದಣಿದಿದ್ದಾರೆ. ನೀತಿ ಸಂಹಿತಿ ಇರುವುದರಿಂದ, ಅಷ್ಟಾಗಿ ಕೆಲಸ ಮಾಡುವ ಅವಕಾಶ ಇಲ್ಲ. ಹೀಗಾಗಿ ಒಂದೆರಡು ದಿನ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೇ’. ಎಂದು ಹೇಳಿದ್ದಾರೆ.

2 thoughts on “ತಮ್ಮ ರೆಸಾರ್ಟ್ ವಾಸಕ್ಕಾಗಲಿ, ಫೈವ್ ಸ್ಟಾರ್ ಹೋಟೆಲ್ ವಾಸಕ್ಕಾಗಲಿ ಸರ್ಕಾರದ ಒಂದು ರೂಪಾಯಿ ಹಣವನ್ನು ಸಿಎಂ ಉಪಯೋಗಿಸಿಲ್ಲ…!

  1. Shashikumar says:

    Great cm. We love u anna

Leave a Reply