ಯುವನಾಯಕನ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಜನ…!

ಚುನಾವಣೆಗೂ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಚಂದನವನದಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಉದಯೋನ್ಮುಖ ಯುವ ಪ್ರತಿಭೆಯಾಗಿ, ಹುಡುಗಿಯರ ಹೊಸ ಕ್ರಶ್ ಆಗಿ ಮಿಂಚುತ್ತಿದ್ದರು.

ಜಾಗ್ವಾರ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ನಿಖಿಲ್, ಆಕ್ಷನ್ ಹೀರೋ ಆಗಿ ಯುವಕರ ಮನಗೆದ್ದರು. ನಂತರ ಸುಮಾರು ಒಂದು ವರುಷ ಶ್ರಮಿದ ಫಲವಾಗಿ, ಎ ಹರ್ಷ ನಿರ್ದೇಶನದಲ್ಲಿ ಮೂಡಿಬಂದ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ಚಾಕಲೇಟ್ ಬಾಯ್ ಪಾತ್ರದಲ್ಲಿ ಅಭಿನಯಿಸಿ ಹುಡುಗಿಯರ ಮನ ಕದ್ದಿದ್ದರು.

ಇದಾದ ಬಳಿಕ ಅಭಿಮನ್ಯು ನಿಖಿಲ್ ರನ್ನು ತೆರೆ ಮೇಲೆ ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ದರ್ಶನ್ ನಟನೆಯ ‘ಕುರುಕ್ಷೇತ್ರ’ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದ ನಿಖಿಲ್ ಅನಿರೀಕ್ಷಿತವಾಗಿ ಅಂದುಕೊಂಡಿದ್ದಕ್ಕೂ ಮುನ್ನವೇ ರಾಜಕೀಯಕ್ಕೆ ಎಂಟ್ರಿ ಕೊಡಬೇಕಾಯಿತು.

ಜನತಾ ದಳ ಪಕ್ಷದ ಪರವಾಗಿ ಮಂಡ್ಯ ಲೋಕ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದ ನಿಖಿಲ್, ಸಿನಿಮಾಗಳ ಮೂಲಕ ಕೇವಲ ಯುವಕರ ಪ್ರೀತಿ ಗಳಿಸಿದ್ದರು, ಎಲ್ಲ ರಾಜಕೀಯಕ್ಕೆ ಕಾಲಿಟ್ಟ ನಂತರ ಎಲ್ಲ ವರ್ಗದ/ವಯ್ಯಸ್ಸಿನವರ ಅಭಿಮಾನವನ್ನು ಸಂಪಾದಿಸಿದ್ದಾರೆ.

ನೆನ್ನೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಆಪ್ತ ಕಾರ್ಯದರ್ಶಿ ರಘು ವಿವಾಹದ ಬೀಗರ ಊಟಕ್ಕೆ ಆಗಮಿಸಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಜೊತೆ  ಸೆಲ್ಫಿ ತೆಗೆದುಕೊಳ್ಳಲು  ಯುವತಿಯರು ಮುಗಿಬಿದ್ದರು.

ಮಂಡ್ಯದ  ಮದ್ದೂರಿಗೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ವಧು- ವರರಿಗೆ ಶುಭಕೋರಿದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ  ಸೆಲ್ಫಿ ತೆಗೆದುಕೊಳ್ಳಲು ಯುವಕ ಯುವತಿಯರು ಮುಗಿಬಿದ್ದ ಘಟನೆ ನಡೆದಿದೆ . ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ಇಲ್ಲೇ ಇರ್ತೀನಲ್ಲಾ ಬ್ರದರ್ ಮುಂದೆ ಸಿಗ್ತೀನಿ ಮಾತಾಡ್ತೀನಿ ಬಿಡಿ’ ಎಂದು ಹೇಳಿ  ಬೆಂಗಳೂರಿಗೆ  ತೆರಳಿದರು.

Leave a Reply