ಸಿಎಂ ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿದ ಇಸ್ರೇಲ್ ದೂತಾವಾಸ ಮುಖ್ಯಸ್ಥೆ ಡಾನಾ ಖುರ್ಷ್…!

ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರವನ್ನು ರೈತ ಪರ ಸರ್ಕಾರವೆಂದು ಕರೆಯುವ ಉದ್ದೇಶ ಈಗಾಗಲೇ ಸಾಕಷ್ಟು ಬಾರಿ ಅವರ ಯೋಜನೆಗಳಿಂದ ನಿರೂಪಿಸಿದ್ದಾರೆ. ರೈತ ನಕ್ಕರೆ ದೇಶ ನಗುತ್ತದೆ ಎಂಬುದನ್ನು ಪ್ರಭಲವಾಗಿ ನಂಬುವ ಹೆಚ್ಡಿಕೆ, ರೈತರ ಬಾಳಲ್ಲಿ ಮತ್ತೆ ಹಸಿರು ಚಿಗುರುವಂತೆ ಮಾಡಲು, ಎಲ್ಲಾ ರೀತಿಯ ಸಿದ್ಧತೆಯನ್ನು ಅಧಿಕಾರಕ್ಕೆ ಬರುವ ಮುನ್ನವೇ ಮಾಡಿಕೊಂಡಿದ್ದರು.

ರೈತರ ಸಾಲ ಮನ್ನಾ ಮಾಡುವ ಮೂಲಕ ಅ ಅವರ ಪ್ರಾಣ ಉಳಿಸಿ ಅವರ ಧ್ಯೇಯದತ್ತ ಮೊದಲ ಹೆಜ್ಜೆ ಇಟ್ಟಿರುವ ಕುಮಾರಸ್ವಾಮಿ ಅವರು ನಂತರ ರೈತರು ಇನ್ನೆಂದಿಗೂ ಸಾಲ ಮಾಡದಂತೆ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಆಸೆ. ಇದು ಸುಲಭದ ಮಾತಲ್ಲ. ರೈತರ ಸಂಕಷ್ಟ ಇತ್ತೀಚೆಗೆ ಶುರುವಾದದ್ದಲ್ಲ. ತಾಳಿದವನು ಬಾಳಿಯಾನು ಎಂದು ಗಾದೆ ಮಾತೆ ಇದೆ. ಆದ್ದರಿಂದ ನಾವು ನಂಬಿ ತಾಳ್ಮೆಯಿಂದ ಕಾಯಬೇಕು.

ಈಗ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರ್ನಾಟಕವೇ ಹೆಮ್ಮೆ ಪಡುವಂತ ಕೆಲಸ ಮಾಡಿದ್ದಾರೆ. ಕೃಷಿ ಹಾಗೂ ನೀರಾವರಿ ಕ್ಷೇತ್ರದಲ್ಲಿ ಇಸ್ರೇಲ್ ನ ತಂತ್ರಜ್ಞಾನ ಔನ್ನತ್ಯವನ್ನು ಕಣ್ಣಾರೆ ಕಂಡಿದ್ದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕರ್ನಾಟಕದಲ್ಲೂ ಅದರ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದಾರೆ.

ಇಂತಹ ನಡೆಗಳು ಮುಂದಿನ ದಿನಗಳಲ್ಲಿ ಭಾರತ ಹಾಗು ಇಸ್ರೇಲ್ ಹಲವಾರು ಕ್ಷೇತ್ರಗಳಲ್ಲಿ ಒಟ್ಟಾಗಿ ಮುನ್ನಡೆಯಲು ದೊಡ್ಡ ಪ್ರೇರಣೆಯಾಗುತ್ತದೆ ಎಂದು ದಕ್ಷಿಣ ಭಾರತದಲ್ಲಿನ ಇಸ್ರೇಲ್ ದೂತಾವಾಸದ ಮುಖ್ಯಸ್ಥೆ ಡಾನಾ ಖುರ್ಷಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಇಸ್ರೇಲ್ ಮಾದರಿ ಕೃಷಿ ಹಾಗೂ ಹನಿ ನೀರಾವರಿಗಾಗಿ ಬಜೆಟ್ ನಲ್ಲಿ 450 ಕೋಟಿ ರು. ನೀಡಿದ್ದಾರೆ. ಈ ಬೆಳವಣಿಗೆ ಕರ್ನಾಟಕದಲ್ಲಿನ ಅವಕಾಶಗಳ ಬಗ್ಗೆ ಮುಕ್ತವಾಗಿ ತೆರೆದುಕೊಳ್ಳಲು ಇಸ್ರೇಲ್ ನ ಕಂಪನಿಗಳಿಗೆ ಒತ್ತಾಸೆ ನೀಡಿದೆ.

Leave a Reply