ಮೋದಿಯಾ ಸುಳ್ಳಿನ ಕೋಟೆ…!

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಣದ ವ್ಯಾಮೋಹ ಇದೆಯೋ ಇಲ್ಲವೋ ಇನ್ನು ಸರಿಯಾಗಿ ಬಯಲಾಗಿಲ್ಲ, ಆದರೆ ಅಧಿಕಾರದ ವ್ಯಾಮೋಹದಲ್ಲಿ, ಶೋಕಿಯಲ್ಲಿ ಮಾತ್ರ ಎಲ್ಲರನ್ನೂ ಮೀರಿಸುತ್ತಾರೆ. ಮೋದಿ ಬಗ್ಗೆ ಸರಿಯಾಗಿ ತಿಳಿಯದೆ, 2014ರಲ್ಲಿ ಜನರು ಯಾಮಾರಿ ಅವರಿಗೆ ಮತ ಚಲಾಯಿಸಿದ್ದರು. ಖುಷಿಯ ಸಂಗತಿ ಏನಪ್ಪಾ ಅಂದರೆ, ಸುಮಾರು ಶೇ.50ರಷ್ಟು ಜನಕ್ಕೆ ಈಗ ಅವರ ನಿಜ ಬಣ್ಣ ಅರಿವಾಗಿದೆ.

ಅಲ್ಪನಿಗೆ ಐಶ್ವರ್ಯ ಬಂದಂತೆ, ಅದೃಷ್ಟದಿಂದ ಮೋದಿಗೆ ಸಾಕಷ್ಟು ಜನಪ್ರಿಯತೆ ಬಂದಿತ್ತು. ಮೋದಿಗೆ ಬಂದ ಅದೃಷ್ಟ, ದೇಶಕ್ಕೆ ಅಂಟಿದ ದರಿದ್ರ ಎಂದರೆ ತಪ್ಪಾಗುವುದಿಲ್ಲ. ಬಹುಷಃ ‘ಸುಳ್ಳು ನಮ್ಮಲ್ಲಿ ಇಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು’ ಎಂಬ ಹಾಡನ್ನು ಮೋದಿ ನೋಡೇ ಬರಿದಾರಬೇಕು ಎಂದನಿಸುವಷ್ಟು ಸುಳ್ಳು ಹೇಳುವ ವ್ಯಕ್ತಿ ಮೋದಿ. ಅವರು ಹೇಳಿರುವ ಎಲ್ಲಾ ಸುಳ್ಳುಗಳನ್ನು ಆ ದೇವರಿಂದಲೂ ಲೆಕ್ಕಿಸಲು ಸಾಧ್ಯವಾಗುವುದಿಲ್ಲ, ನಮ್ಮ ಶಕ್ತಿಯಾನುಸಾರ ಕೆಲವು ಸುಳ್ಳುಗಳನ್ನು ನಿಮ್ಮ ಮುಂದೆ ತಂದಿದ್ದೇವೆ. ಮುಂದೆ ಓದಿ…

ಮಹಾವಿಷ್ಣು ದಶಾವತಾರ ಎತ್ತುವ ಮೂಲಕ 10 ಬಾರಿ ಜನಿಸಿದರೆ, ನಮ್ಮ ಪ್ರಧಾನಿ ಮೋದಿ, ನಾನು ಯಾರಿಗೆ ಕಮ್ಮಿ ಎಂದು, ಎರಡು ಬಾರಿ ಹುಟ್ಟಿದ್ದಾರೆ! ಮೊದಲ ಬಾರಿಗೆ 29ನೇ ಆಗಸ್ಟ್ 1949ರಲ್ಲಿ ಜನಿಸಿದ ಮೋದಿ, ನಂತರ ಒಂದು ವರ್ಷ ಆದಮೇಲೆ 17ನೇ ಸೆಪ್ಟೆಂಬರ್ 1950ರಂದು ಮತ್ತೆ ಜನಿಸಿದರು. ನಮ್ಮ ಪ್ರಧಾನಿ ಅವತಾರಪುರುಷ…!

ಟೀ ಮಾರುತ್ತಿದ್ದ ಮೋದಿ, ಈಗ ಪ್ರಧಾನಿಯಾಗಿದ್ದಾರೆ ಎಂದು ಬಿಲ್ಡ್ ಅಪ್ ತೆಗೆದುಕೊಳ್ಳುವ ಭಕ್ತರಿಗೆ ಈ ವಿಷಯ ತಿಳಿದಿರಲು ಸಾಧ್ಯವಲ್ಲ. ನಮ್ಮ ಪ್ರಧಾನಿ ಮೋದಿಯವರು 2014ರ ಚುನಾವಣೆಯ ಪ್ರಚಾರದ ವೇಳೆ ನನಗೆ ಆರು ವರ್ಷ ಇದ್ದಾಗ ಸಂಘದ ಆಫೀಸ್ ಮುಂದೆ ಟೀ ಮಾರುತ್ತಿದ್ದೆ ಎಂದು ಹೇಳಿದ್ದರು. ಆದರೆ ಚುನಾವಣೆ ಮುಗಿದ ನಂತರ ಜಾಗವೇ ಬದಲಾಗಿ ಹೋಯಿತು! ಚುನಾವಣೆ ಆದ ಬಳಿಕ ಮೋದಿ ನಾನು ವಾದನಗರ್ ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ಎಂದು ಹೇಳಿಕೊಂಡಿದ್ದಾರೆ. ನಡೆದು ಹೋಗಿರುವ ಘಟನೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದವರು ಯಾರು?

ಮೋದಿ ಹುಟ್ಟಿದ್ದು 1950(ಅಂತ ಅಂದುಕೊಂಡಿದ್ದೇವೆ, ಮತ್ತೆ ಬದಲಾದರೆ ನಾವು ಹೊಣೆಯಲ್ಲ)ರಲ್ಲಿ, ಹಾಗು ಟೀ ಮಾರುತ್ತಿದಿದ್ದು ವದನಗರ್ ರೈಲು ನಿಲ್ದಾಣದಲ್ಲಿ ಎಂದು ಹೇಳಿಕೊಂಡಿದ್ದಾರೆ. ಆದರೆ ವಾದನಗರ್ ರೈಲು ನಿಲ್ದಾಣ ನಿರ್ಮಾಣವಾದದ್ದು 1973ರಲ್ಲಿ. ಅಂದರೆ ಮೋದಿಗೆ 23 ವರುಷವಾಗಿದ್ದಾಗ. ಆದರೆ ಅವರು 18 ವರುಷದವರಾಗಿದ್ದಾಗ ಮಾಡುವೆ ಆಗಿತ್ತಲವೇ? ನಂತರ ಅವರೇ ಹೇಳಿದ ಹಾಗೆ ಹೆಂಡತಿ ಬಿಟ್ಟು ಹಿಮಾಲಯಕ್ಕೆ ಪರಾರಿಯಾಗಿದ್ದರು. ಹಾಗಾದರೆ ಅವರು ಟೀ ಮರಿದ್ದಾದರೂ ಎಲ್ಲಿ, ಮತ್ತು ಯಾವಾಗ?

ಎಲ್ಲ ಸರಿ, ಆದರೆ ತಾನು ಮಾಡುವೆಯಾಗಿರುವ ವಿಷಯವನ್ನು ಮೋದಿ ಯಾಕೆ ಮುಚ್ಚಿಟ್ಟಿದ್ದರು ಎಂಬ ವಿಷಯ ಇಲ್ಲಿಯ ತನಕ ಯಾರಿಗೂ ಗೊತ್ತಾಗಲಿಲ್ಲ. 2014ರಲ್ಲಿ ಮೋದಿ ತಮ್ಮ ಚುನಾವಣಾ ಅಫಿಡವಿಟ್ ನಲ್ಲಿ ಅವಿವಾಹಿತ ಎಂದು ಬರೆದುಕೊಂಡಿದ್ದರು. ಆದರೆ ಈ ಚುನಾವಣೆ ಅಫಿಡವಿಟ್ ನಲ್ಲಿ ನಿಜ ಬರೆದಿದ್ದಾರೆ.

ಮೋದಿ ಆದ್ಯಾತ್ಮದ ಕಡೆ ಒಲವಿನಿಂದ ಮನೆ ಬಿಟ್ಟು ಹೋದರು ಎಂದು ಬಣ್ಣ ಬಣ್ಣದ ಕತೆಗಳನ್ನು ಹೇಳುವ ಮೋದಿ ಅಭಿಮಾನಿಗಳು, ಸ್ವತಃ ಮೋದಿ ಅವರ ಸಹೋದರ ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳಬೇಕು. ಪ್ರಹಲಾದ್ ಮೋದಿ ಅವರು ಹೇಳುವಂತೆ, ಮೋದಿ ಮನೆಯಲ್ಲಿ ಒಡವೆ ಕದ್ದು ಮನೆಯಿಂದ ಓದಿ ಹೋದರು, ಅದು ಅವರ ತಂದೆಗೆ ತಿಳಿದು ಆಘಾತದಿಂದ ಮರಣ ಹೊಂದಿದರು. ಇದರ ಬಗ್ಗೆ ದೂರು ಇನ್ನು ವದನಗರ ಪೊಲೀಸ್ ಠಾಣೆಯಲ್ಲಿ ಇದೆ.

ಇನ್ನು ಮೋದಿ ವಿದ್ಯಾಭ್ಯಾಸವಂತೂ ‘ಅನಂತನ ಅವಾಂತರ’. ಅವರು ಪ್ರಪಂಚದಲ್ಲಿ ಇರುವ ಎಲ್ಲ ಪದವಿಯನ್ನು ಪಡೆದಿದ್ದಾರೆ. ಹಾಗು ಯಾರು ಕಂಡು ಕೇಳರಿಯದಂತ ಪದವಿಗಳನ್ನು ಸಂಪಾದಿಸಿದ್ದಾರೆ.

ಅಲ್ಲದೆ ಮೋದಿ ಬಹಳ ಬುದ್ದಿ ಜೀವಿ ಎಂದು ಹಲವಾರು ಮಂದಿ ನಂಬಿದ್ದರು. ಆದರೆ ಅವರು ಇತ್ತೀಚೆಗೆ ನೀಡಿದ ಎರಡು ಸಂದರ್ಶನದಲ್ಲಿ, ರೇಡಾರ್ ಹಾಗು ಡಿಜಿಟಲ್ ಕ್ಯಾಮೆರಾ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿದರೆ ಎಂತಹ ಮೂರ್ಖನಿಗೂ ಈ ವ್ಯಕ್ತಿಯ ಬಂಡವಾಳ ಸುಲಭವಾಗಿ ಗೊತ್ತಾಗುತ್ತದೆ. ಹಾಗು ಮೋದಿ ಯಾಕೆ ಇಷ್ಟು ವರುಷ ಒಂದೇ ಒಂದು ಸಂದರ್ಶನ ನೀಡಿಲ್ಲ ಎಂಬುದು ಈಗ ಅರಿವಾಗಿದೆ. ತನ್ನ ಮೌಢ್ಯತೆ ಎಲ್ಲಿ ಬಯಲಾಗಿ ಹೋಗುತ್ತದೋ ಎಂಬ ಭಯದಿಂದ ಮೋದಿ ತೆರೆಮರೆಯಲ್ಲೇ, ಹಿಂದಿನ ಚುನಾವಣೆಯಲ್ಲಿ ಪ್ರಚಾರಕ್ಕೆ ಹಣ ನೀಡಿದ್ದ, ಉದ್ಯಮಿಗಳ ಜೋಬು ತುಂಬಿಸುವ ಕೆಲಸಗಳನ್ನು ಮಾಡಿದ್ದಾರೆ.

ತನ್ನ ಬಗ್ಗೆಯೇ ಇಷ್ಟು ಸುಳ್ಳು ಹೇಳಿರುವ ಈ ವ್ಯಕ್ತಿ, ಇನ್ನು ಪಾರದರ್ಶಕತೆಯೇ ಮುಖ್ಯವಾಗಿರುವ ಪ್ರಜಾಪ್ರಭುತ್ವವನ್ನು ಹೇಗೆ ಕಾಪಾಡುತ್ತಾರೆ. ಇಂತಹ ವ್ಯಕ್ತಿಯನ್ನು ಮತ್ತೆ ಪ್ರಧಾನಿಯನ್ನಾಗಿ ನೋಡಬಯಸುವಿರಾ?


Leave a Reply