ಬಿಜೆಪಿ ಪಕ್ಷದವರಿಂದ ದಲಿತ ಮಹಿಳೆಯರ ಮೇಲೆ ದಬ್ಬಾಳಿಕೆ; ವೋಟಿಂಗ್ ಭೂತ್ ನಲ್ಲೇ ಪ್ರಜಾ ಪ್ರಭುತ್ವದ ಕಗ್ಗೊಲೆ…!

ಚುನಾವಣೆಗೆ ಮುನ್ನ ಮತದಾರರಿಗೆ ಹಣ, ಸಾರಿಯಿ, ಸೀರೆ, ಬೆಳ್ಳಿ ಪದಾರ್ಥ ಹೇಗೆ ನಾನಾ ರ್ರೀತಿಯ ಆಮಿಷವೊಡ್ಡಿ ಮತ ಚಲಾಯಿಸುವಂತೆ ಬೇಡುವ ರಾಜಕೀಯ ಪಕ್ಷಗಳ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಆದರೆ ಇಲ್ಲೊಂದು ಪಕ್ಷ, ವೋಟಿಂಗ್ ಭೂತ್ ನಲ್ಲೆ ಏಜೆಂಟ್ ಗಳನ್ನು ಸೆಟ್ ಮಾಡಿಕೊಂಡು ಬರುವ ದಲಿತ ಮತದಾರರ ಮೇಲೆ ದಬ್ಬಾಳಿಕೆ ಮಾಡಿಸಿ, ತಮ್ಮ ಪಕ್ಷಕ್ಕೆ ಭೂತ್ ಏಜೆಂಟ್ ಗಳ ಬಳಿಯೇ ಮತ ಹಾಕಿಸುವ ಮಟ್ಟಕ್ಕೆ ಇಳಿದಿದ್ದಾರೆ.

ಹೆಸರಿಗೆ ರಾಷ್ಟ್ರೀಯ ಪಕ್ಷ. ಅದರಲ್ಲೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ಇಂತಹ ಹೀನಾಯ ಮಟ್ಟಕ್ಕೆ ಇಳಿದಿದೆ ಎಂದರೆ, ತಮಗೆ ಅವಕಾಶ ದೊರೆತ್ತಿದ್ದ ಈ ಐದು ವರ್ಷದಲ್ಲಿ ಎಷ್ಟು ಕಳಪೆ ಮಟ್ಟದ ಆಡಳಿತ ನಡೆಸಿರಬಹುದು ಎಂದು ನೀವೇ ಯೋಚಿಸಿ.

ಮೇ 12ರಂದು ಹರಿಯಾಣದ ಫರೀದಾಬಾದ್ ನಲ್ಲಿ ನಡೆದ ಮತದಾನ ಪ್ರಕ್ರಿಯೆ ವೇಳೆ, ಬಿಜೆಪಿ ಭೂತ್ ಏಜೆಂಟ್ ಗಳನ್ನು ಬುಕ್ ಮಾಡಿಕೊಂಡು, ಮತ ಚಲಾಯಿಸಲು ಬರುವ ದಲಿತ ಮತದಾರರ ಮೇಲೆ ದಬ್ಬಾಳಿಕೆ ನಡೆಸಿ, ಅವರು ಮತ ಚಲಾಯಿಸುವಾಗ ಹೋಗಿ ಕಮಲಾ ಗುರುತಿಗೆ ವೋಟ್ ಹಾಕಿರುವ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಪ್ರಜಾ ಪ್ರಭುತ್ವವನ್ನು ಕೊಲ್ಲುತ್ತಿರುವ ಬಿಜೆಪಿ ಪಕ್ಷದ ವಿರುದ್ಧ ದೇಶದ ಜನ ಛೀಮಾರಿ ಹಾಕುತ್ತಿದ್ದಾರೆ. ಶೋಷಣೆಗೆ ಒಳಗೊಂಡ ಮಹಿಳೆಯರು, ‘ ನಾನು ಮತ ಚಲಾಯಿಸಲು EVM ನ ಬಳಿ ಹೋದಾಗ, ಅಲ್ಲಿ ಕುಳಿತಿದ್ದ ಭೂತ್ ಏಜೆಂಟ್ ಬಂದು ಕಮಲಾ ಗುರುತಿನ ಪಕ್ಕ ಇದ್ದ ಬಟನ್ ಒತ್ತಿದ್ದರು. ಆದರೆ ಇದನ್ನು ಪ್ರಶ್ನಿಸಿದರೆ, ಆಗಬಹುದಾದ ಪರಿಣಾಮಗಳಿಗೆ ಹೆದರಿ, ನಾನು ಸುಮ್ಮನೆ ಬಂದೆ’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Leave a Reply