ಕುಮಾರಣ್ಣನ ಸರ್ಕಾರಕ್ಕೆ ಒಂದು ವರುಷ ಕನ್ನಡಿಗರ ಮುಖದಲ್ಲಿ ಹರುಷ…!

” ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ ಎಂಬ ಹೆಸರಿನ ನಾನು, ಕಾನೂನಿನ ಮೂಲಕ ಸ್ಥಾಪಿತವಾದ, ಭಾರತದ ಸಂವಿಧಾನದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆ ಎಂದು ನಾನು ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುತ್ತೇನೆಂದು ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಶ್ರದ್ದಾಪೂರ್ವಗವಾಗಿ ಹಾಗು ಅಂತಃಕರಣಪೂರಕವಾಗಿ ಪೂರೈಸುತ್ತೇನೆಂದು, ಭಯ ಅಥವಾ ಪಕ್ಷಪಾತವಿಲ್ಲದೆ, ರಾಗ ದ್ವೇಷವಿಲ್ಲದೆ ಎಲ್ಲ ಬಗೆಯ ಜನರಿಗೆ ಅನುಸಾರವಾಗಿ, ನ್ಯಾಯವಾದುದ್ದನ್ನೇ ಮಾಡುತ್ತೇನೆಂದು ದೇವರ ಹೆಸರಿನಲ್ಲಿ ಹಾಗು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ…. ” ಎಂದು ಇದೇ ದಿನದಂದು(ಮೇ 23) ಹಿಂದಿನ ವರುಷ ದೇಶದಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ತೆರೆ ಬಿದ್ದು ಜನರ ಅಚ್ಚು ಮೆಚ್ಚಿನ ನಾಯಕ ಹೆಚ್. ಡಿ ಕುಮಾರಸ್ವಾಮಿ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪುನಃ ದೇವರು ಹಾಗು ಕರ್ನಾಟಕ ಜನತೆಯ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕುಮಾರಸ್ವಾಮಿ ಅವರು ಪ್ರಮಾಣ ಮಾಡಿದಂತೆ ಅಕ್ಷರಶಃ ಕರ್ನಾಟಕ ಜನತೆಯ ಸೇವೆ ಸಲ್ಲಿಸಿದ್ದಾರೆ. ಹಲವಾರು ಜನಪರ ಯೋಜನೆಗಳು, ರಾಜ್ಯದಲ್ಲಿ ತಗ್ಗಿದ ಅಪರಾಧ ಪ್ರಮಾಣ, ದಿವಂಗತರಾದ ಗಣ್ಯರ ಅಂತ್ಯಕಾರ್ಯ ನಡೆಸಿಕೊಟ್ಟ ಹಾಗು ಮಡಿಕೇರಿ ಪ್ರವಾಹವನ್ನು ನಿರ್ವಹಿಸಿದ ರೀತಿ ಹೀಗೆ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿ ಕಂಡುಬಂದಿದ್ದು, ಈ ಹುದ್ದೆಗೆ ಕುಮಾರಸ್ವಾಮಿ ಅವರಿಗಿಂತ ಉತ್ತಮ ಆಯ್ಕೆ ಇಲ್ಲ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.

ಕುಮಾರಸ್ವಾಮಿ ಅವರಿಗೆ ಅಧಿಕಾರ ಸ್ವೀಕರಿಸಿದ ತಕ್ಷಣವೇ ಎದುರಾದ ಮೊದಲ ಸವಾಲು ಕೊಡಗು ಪ್ರವಾಹ. ಇದನ್ನು ಅತ್ಯಂತ ನಿಪುಣವಾಗಿ ನಿರ್ವಹಿಸಿದರು. ಕೊಡಗು ಜಿಲ್ಲೆ ಸಂತ್ರಸ್ತರಿಗೆ ಅವರು ಮಾತು ಕೊಟ್ಟಂತೆ ಒಂದು ವರ್ಷದ ಒಳಗೆ ಹೊಸ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ.

ಆ ನಂತರ ಕಿಂಚಿತ್ತೂ ಸಾಮಾನ್ಯ ಜ್ಞಾನವಿಲ್ಲದ ವಿರೋಧ ಪಕ್ಷದಿಂದ ಸಾಕಷ್ಟು ಟೀಕೆ ಎದುರಿಸಿದ ಕುಮಾರಸ್ವಾಮಿ ಅವರ ರೈತರ ಬೆಳೆ ಸಾಲ ಮನ್ನಾ ಯೋಜನೆ ಕೂಡ ಕೊನೆ ಹಂತದಲ್ಲಿದೆ.
ಇಡೀ ದೇಶವೇ ಮೂಗಿನ ಮೇಲೆ ಬೆರಳಿಡುವಂತೆ ಒಂದು ರಾಜ್ಯ ಸರ್ಕಾರ 48 ಸಾವಿರ ಕೋಟಿ ರೈತರ ಬೆಳೆ ಸಾಲ ಮನ್ನಾ ಮಾಡುವ ಮೂಲಕ ಕುಮಾರಸ್ವಾಮಿ ಅವರು ಇತಿಹಾಸ ನಿರ್ಮಿಸಿದ್ದಾರೆ. ಇದರ ಪರಿಣಾಮವಾಗಿ ದಶಕಗಳಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಶೇ.40 ರಷ್ಟು ಇಳಿಕೆ ಕಂಡಿದೆ.

ಅಲ್ಲದೆ ಬಡವರ ಬಂಧು, ರೋಷಣಿ ಯೋಜನೆ, ಜನತಾ ದರ್ಶನ, ಮುಖ್ಯಮಂತ್ರಿ ಮಾತೃಶ್ರೀ ಯೋಜನೆ , ಅರೋಗ್ಯ ಕರ್ನಾಟಕ, ಸಾರಥಿ ಸೂರು, ಕೈಗಾರಿಕಾ ಘಟಕಗಳ ನಿರ್ಮಾಣ, ಸಂಧ್ಯಾ ಸುರಕ್ಷಾ ಯೋಜನೆ, ಇಸ್ರೇಲ್ ಮಾದರಿ ಕೃಷಿ ಹೀಗೆ ಸಾಲು ಸಾಲು ಪರಿಣಾಮಕಾರಿ ಯೋಜನೆಗಳ ಜಾರಿಗೆ ತರುವ ಮೂಲಕ ಯಶಸ್ವಿ ಆಡಳಿತ ನೀಡುತ್ತಾ, ಬೇರೆ ರಾಜ್ಯದ ಆಡಳಿತ ಸರ್ಕಾರಗಳಿಗೆ ಮಾದರಿಯಾಗಿದ್ದಾರೆ.

ಹಾಗು ಕುಮಾರಸ್ವಾಮಿ ಅವರ ಆಡಳಿತ ಅವಧಿಯಲ್ಲಿ, ಕರ್ನಾಟಕದ ಅಪರಾಧ ಪ್ರಮಾಣ ಕೂಡ ಕಮ್ಮಿ ಆಗಿದೆ. ಇದಕ್ಕೆ ಸಾಕ್ಷಿ, ಯಾವುದೇ ಅವಘಡಗಳು ಉಂಟಾಗದೇ ಸುಗಮವಾಗಿ ನಡೆದ ಹೊಸ ವರ್ಷ ಸಂಭ್ರಮಾಚರಣೆ. ಅದಲ್ಲದೆ ಬಡ್ಡಿ ದಂಧೆಕೋರರ ಹೆಡೆಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿ ಅವರ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಕನಸು ಕೂಡ ಈಡೇರುತ್ತಿದೆ. ಇತ್ತೀಚೆಗೆ ನಡೆದ ಒಂದು ಸಮೀಕ್ಷೆ ಪ್ರಕಾರ ಕರ್ನಾಟಕ ರಾಜ್ಯ, ಅತ್ಯಂತ ಉದ್ಯೋಗ ಕಲ್ಪಿಸಿರುವ ಹಾಗು ಅತ್ಯಂತ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯವಾಗಿರುವುದು.

ವಿರೋಧ ಪಕ್ಷದ ಕುತಂತ್ರಗಳ ನಡುವೆಯೂ, ದಿನಕ್ಕೆ 18 ಘಂಟೆಗಳ ಕಾಲ ನಮ್ಮ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರ ಸರ್ಕಾರ ಹೀಗೆ ಯಶಸ್ವಿಯಾಗಿ ಮುನ್ನುಗ್ಗಲಿ ಎಂದು ಹಾರೈಸೋಣ.

2 thoughts on “ಕುಮಾರಣ್ಣನ ಸರ್ಕಾರಕ್ಕೆ ಒಂದು ವರುಷ ಕನ್ನಡಿಗರ ಮುಖದಲ್ಲಿ ಹರುಷ…!

Leave a Reply