ಕನ್ನಡಿಗರ ಸ್ವಯಂ ಉದ್ಯೋಗದ ಕನಸಿಗೆ ಆಸರೆಯಾದ ಸಿಎಂ ಕುಮಾರಸ್ವಾಮಿ…!

ದೇಶದಲ್ಲಿ ಅತ್ಯಂತ ಕಡಿಮೆ ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಪ್ರಸಕ್ತ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಮೇಲೆ ಕರ್ನಾಟಕ ಈ ವರ್ಷ ಒಂದನೇ ಸ್ಥಾನದಲ್ಲಿ ಹೆಮ್ಮೆಯಿಂದ ರಾರಾಜಿಸುತ್ತಿದ. ರಾಜ್ಯದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಕನಸನ್ನು ಹೊತ್ತಿರುವ ಕುಮಾರಣ್ಣನ ಕನಸು ಅಧಿಕಾರಕ್ಕೆ ಬಂದ ಒಂದು ವರುಷದಲ್ಲೇ ‘ಉದ್ಯೋಗ ಮೇಳ’, ‘ಜನತಾ ದರ್ಶನ’ ದಂತಹ ಹಲವಾರು ಜನಪರ ಕಾರ್ಯಕ್ರಮಗಳಿಂದ ಈಗಾಗಲೇ ಬಹುತೇಕ ಸಫಲವಾಗಿದೆ.

ಈಗ ಹೆಚ್ಡಿಕೆ ಮತ್ತೆ ಬಡವರ ಉದ್ಯೋಗದ ಕನಸಿಗೆ ಒಂದು ವಿಶಿಷ್ಟ ಯೋಜನೆಯ ಮೂಲಕ ಆಸರೆಯಾಗಿದ್ದಾರೆ. ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸುವ ಸಲುವಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಅನ್ವಯ ರಾಜ್ಯದ ಮೂರು ನಗರದಲ್ಲಿ ಹೊಸ ಟ್ಯಾಕ್ಸಿ ಸೇವೆ ಆರಂಭಿಸಲಾಗುತ್ತದೆ. ಸುಮಾರು 225 ಕೋಟಿ ವೆಚ್ಚದಲ್ಲಿ ಯೋಜನೆ ಅನ್ವಯ 4,500 ಕಾರುಗಳನ್ನು ಖರೀದಿ ಮಾಡಲಾಗುತ್ತಿದ್ದು, ಮೂರು ನಗರದಲ್ಲಿ ಟ್ಯಾಕ್ಸಿಗಳು ಸಂಚಾರ ನಡೆಸಲಿವೆ.

‘ಐರಾವತ ಯೋಜನೆಯಡಿ’ ಇಂದು(ಗುರುವಾರ) ಹೆಚ್ ಡಿ ಕುಮಾರಸ್ವಾಮಿ ಅವರು ಫಲಾನುಭವಿಗಳಿಗೆ ವಿಧಾನಸೌಧದಲ್ಲಿ ವಾಹನಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮುಖ್ಯಮಂತ್ರಿ ಎಚ್‍ ಡಿ ಕುಮಾರಸ್ವಾಮಿ ಮಾತನಾಡಿ, ಫಲಾನುಭವಿಗಳಿಗೆ ವಾಹನ ವಿತರಣೆ ಸೇರಿದಂತೆ ಎಲ್ಲಾ ರೀತಿಯ ಸರ್ಕಾರದಿಂದ ಸೌಲಭ್ಯ ಸಿಗಲಿದೆ. ರಾಜ್ಯದಲ್ಲಿ 4500 ಕುಟುಂಬಗಳಿಗೆ ಈ ಯೋಜನೆಯಿಂದ ಅನುಕೂಲ ಆಗಲಿದೆ. ಈ ವಿನೂತನ ಯೋಜನೆಯಿಂದ ಫಲಾನುಭವಿಗಳಿಗೆ ವಾಹನ ಕೊಡುವುದಷ್ಟೇ ಅಲ್ಲದೆ, ಅವರ ಪ್ರಗತಿ ಮತ್ತು ಅನುಕೂಲಗಳ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಮಹಿಳೆಯರಿಗೆ ಆದ್ಯತೆಯೂ ನೀಡಲಾಗಿದೆ. 

ಎಲ್ಲರೂ ಜೀವನವನ್ನು ಸವಾಲಾಗಿ ಸ್ವೀಕರಿಸಿ, ಪ್ರಾಮಾಣಿಕವಾಗಿ ಶ್ರಮಿಸಿ ಭವಿಷ್ಯ ರೂಪಿಸಿ. ಈ ಯೋಜನೆಯ ಫಲಾನುಭವಿಗಳು ತಮ್ಮ ಜೀವನವನ್ನು ಸವಾಲಾಗಿ ಸ್ವೀಕರಿಸಿ, ಕುಟುಂಬಗಳು ನೆಮ್ಮದಿಯಾಗಿ ಜೀವಿಸುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಜೀವನದಲ್ಲಿ ಶಿಸ್ತು, ಬದ್ಧತೆಯನ್ನು ಅಳವಡಿಸಿಕೊಳ್ಳಬೇಕು, ಕೆಲಸದಲ್ಲಿ ಪ್ರಾಮಾಣಿಕ ತೋರಬೇಕು. ಹಾಗಾದರೆ ಜೀವನ ಯಶಸ್ವಿಯಾಗಲಿದೆ ಎಂದು ಹೇಳಿ ಎಲ್ಲಾ ಫಲಾನುಭವಿಗಳಿಗೆ ಕುಮಾರಸ್ವಾಮಿ ಶುಭಹಾರೈಸಿದರು.

Leave a Reply