ವಿದ್ಯಾರ್ಥಿಗಳಿಗೆ ವಿಶೇಷ ಸೂಚನೆ : ಸಿಎಂ ಕುಮಾರಸ್ವಾಮಿ ಅವರು ವಿತರಿಸುತ್ತಿರುವ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳುವುದು ಹೇಗೆ ಗೊತ್ತಾ…?!

ರಾಜ್ಯದ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದಾಗಲಿನಿಂದಲೂ ಸಾಲು ಸಾಲು ಜನಪರ, ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿ ಸಾಮಾನ್ಯ ಜನರ ಜೀವನ ಶೈಲಿಯನ್ನು ವೃದ್ಧಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ರೈತರ ಬಾಳು ಬಂಗಾರವಾಗುತ್ತದೆ ಎಂದು ಎಲ್ಲರಿಗು ಗೊತ್ತೇ ಇದ್ದ ವಿಷಯ. ಅದೇ ರೀತಿ ರೈತರ ಸಾಲ ಮನ್ನಾ ಮಾಡುವ ಮೂಲಕ ದೇಶದಲ್ಲೇ ಇತಿಹಾಸ ಸೃಷ್ಟಿಸಿ ರೈತರ ಬಾಳಿನ ಬೆಳಕಾಗಿದ್ದಾರೆ. ಆದರೆ ಹಲವಾರು ಮಂದಿ, ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದರೆ ರೈತರು ಉದ್ದಾರ ಆಗುತ್ತಾರೆ ಅನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಮಿಕ್ಕ ಜನರ ಕತೆ ಏನು? ಎಂಬ ಪ್ರಶ್ನೆ ಕೇಳುತ್ತಿದ್ದರು. ಅದಕ್ಕೆ ತಕ್ಕ ಉತ್ತರ ಹೆಚ್ ಡಿಕೆ ತಮ್ಮ ವಿನೂತನ ಯೋಜನೆಗಳ ಮೂಲಕ ನೀಡಿದ್ದಾರೆ.

ಸಾರಥಿಗೆ ಸೂರು, ಗೃಹಲಕ್ಷ್ಮಿ, ಅರೋಗ್ಯ ಕರ್ನಾಟಕ, ಐರಾವತ, ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಹೀಗೆ ಸಾಲು ಸಾಲು ಯೋಜನೆಗಳನ್ನು ಜನರಿಗೆ ಕೊಡುಗೆಯಾಗಿ ನೀಡುತ್ತಿದ್ದಾರೆ. ಕೇವಲ ಯೋಜನೆಗಳನ್ನು ಘೋಷಿಸಿ ತಮ್ಮ ಕೆಲಸವಾಯಿತ್ತೆಂದು ಕೈ ಕಟ್ಟಿ ಕೂರುತ್ತಿಲ್ಲ. ಸ್ವತಃ ಅವರೇ ಎಲ್ಲ ಇಲಾಖೆಗಳಲ್ಲೂ ಮುತುವರ್ಜಿ ವಹಿಸಿ, ಸರ್ಕಾರ ನೀಡುವ ಸೌಲಭ್ಯಗಳು ಜನರಿಗೆ ತಲಪುವಂತೆ ನೋಡಿಕೊಳ್ಳುತ್ತಿದ್ದಾರೆ. ಈಗ ಕುಮಾರಸ್ವಾಮಿ ಅವರು ರಾಜ್ಯದ ಜನರಿಗೆ ಮತ್ತೊಂದು ಬಂಪರ್ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ಅದು ವಿದ್ಯಾರ್ಥಿಗಳಿಗೆ! ಏನದು ಯೋಜನೆ? ಮುಂದೆ ಓದಿ…

ಶಿಕ್ಷಣವೇ ಸಮಾಜದ ಎಲ್ಲ ಕುಂದು ಕೊರತೆಗಳಿಗೆ ತಕ್ಕ ಪರಿಹಾರ ಎಂದು ನಂಬಿರುವ ಮುಖ್ಯಮಂತ್ರಿ ಅವರು, ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಇದು ಅವರ ಆಂಗ್ಲ ಮಾಧ್ಯಮ ಸರ್ಕಾರಿ ಶಾಲೇ ಯೋಜನೆ ಮೂಲಕವೇ ಮನವರಿಕೆ ಮಾಡಿದ್ದರು. ಈಗ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡ್ಲಗುತ್ತದೆ. ಹಾಗಾದರೆ ನೀವು ಉಚಿತವಾಗಿ ಲ್ಯಾಪ್ಟಾಪ್ ಪಡೆದುಕೊಳ್ಳುವುದು ಹೇಗೆ? ಈ ಯೋಜನೆಯಾ ಫಲಾನುಭವಿಯಾಗಲು ಬೇಕಾದ ಅರ್ಹತೆಯೇನು? ಮುಂದೆ ಓದಿ…

ಸಿಎಂ ಕುಮಾರಸ್ವಾಮಿ ಅವರ ಮುಂದಾಳತ್ವದಲ್ಲಿ ರಾಜ್ಯ ಸರ್ಕಾರೀ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಲಿದೆ. ಸರ್ಕಾರೀ ಕಾಲೇಜುಗಳಲ್ಲಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಮಾಡಲಾಗುವುದು. ಪ್ರಥಮ ಹಾಗು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲೇ ಲ್ಯಾಪ್ಟಾಪ್ ವಿತರಿಸಬೇಕು ಎಂದು ತೀರ್ಮಾನಿಸಲಾಗಿದೆ.

ಈ ಯೋಜನೆಯ ಮತ್ತೊಂದು ವಿಶೇಷತೆ ಎಂದರೆ, ಇದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಅನುವಯಿಸಲಿದೆ. ಸಿಎಂ ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಪಕ್ಷದ ಮೂಲ ತತ್ವವಾದ ಜಾತ್ಯತೀತವನ್ನು ಅವರು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಜಾತಿ ಬೇಧ, ಧಾರ್ಮ ಬೇಧ ಮಾಡದೇ, ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್ಟಾಪ್ ವಿತರಿಸಲಿದ್ದಾರೆ.

Leave a Reply