ಕೊಡಗು ಜನರ ಆಕ್ರಂದನಕ್ಕೆ ಕ್ಷಣಮಾತ್ರದಲ್ಲಿ ಸ್ಪಂದಿಸಿದ ಸಿಎಂ…! ಕೆಲವೇ ದಿನಗಳಲ್ಲಿ ತುರ್ತು ಆಸ್ಪತ್ರೆ ನಿರ್ಮಾಣ…!

ಭೋರ್ಗರೆದ ಧಾರಾ ಕಾರ ಮಳೆಯಿಂದ ಕಳೆದ ವರುಷ ಕೊಡಗು ಜಿಲ್ಲೆ ಧ್ವಂಸವಾಯಿತು. ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡರೆ, ಆಗರ್ಭ ಶ್ರೀಮಂತರು ಸಹ ಒಪ್ಪತ್ತು ಊಟಕ್ಕೆ ಪರೆದಾಡುವಂತ ಪರಿಸ್ಥಿತಿ ಎದುರಾಗಿತ್ತು. ಆಗ ತಾನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೊಡಗನ್ನು ಮತ್ತೆ ಮುಂಚಿನ ತರ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೆ ಅವತ್ತು, ಅವರು ಆತ್ಮಸ್ಥೈರ್ಯದಿಂದ, ಕೇವಲ ಒಂದು ವರುಷದಲ್ಲಿ ಕೋಡಗು ಜಿಲ್ಲೆಯನ್ನು ದುರಸ್ತಿಗೊಳಿಸುತ್ತೇನೆ ಎಂದು ಮಾತು ಕೊಟ್ಟು ಸವಾಲು ಸ್ವೀಕರಿಸಿದ್ದಾರೆ. ನಲುಗಿ ಹೋಗಿದ್ದ ದಕ್ಷಿಣದ ಕಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಕುಮಾರಸ್ವಾಮಿ ಅವರು ಕೇವಲ ಒಂದು ವರ್ಷದಲ್ಲಿ ಅವರು ಮಾತು ಕೊಟ್ಟಂತೆ ಸೂರು ಕಲ್ಪಿಸಿಕೊಟ್ಟರು.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಡ್ಡು ಮಾಡುತ್ತಿರುವ ‘ಕೊಡಗು ಆಸ್ಪತ್ರೆ ಅಭಿಯಾನಕ್ಕೆ’ ಸಿಎಂ ಕುಮಾರಸ್ವಾಮಿ ಅವರು ತಕ್ಷಣ ಸ್ಪಂದಿಸಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿದ್ದ ಹ್ಯಾಶ್ಟ್ಯಾಗ್ #emergencyhospitalinkodagu ಕಡೆ ಸಿಎಂ ಗಮನ ಹರಿಸಿ ಈ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು. ಸಿಎಂ ಕುಮಾರಸ್ವಾಮಿ ಅವರು ಫೆಬ್ರವರಿ ತಿಂಗಳಲ್ಲೇ ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆದೇಶ ಹೊರಡಿಸಿದ್ದರು. ಕೊಡಗಿನಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕು ಅನ್ನೋ ಅಭಿಯಾನದ ಬಗ್ಗೆ ಸಿನಿಮಾ ರಂಗದ ತಾರೆಯರು ಕೂಡ ಮುತುವರ್ಜಿ ವಹಿಸಿದ್ದ ಕಾರಣ ಜೆಡಿಎಸ್ ಪಕ್ಷವು ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.

ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲವು ತಿಂಗಳ ಹಿಂದೆ ಬಜೆಟ್ ಮಂಡನೆ ಮಾಡಿದ ಸಮಯದಲ್ಲೇ ಕೊಡಗಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡುವುದನ್ನು ಪ್ರಸ್ತಾಪ ಮಾಡಿದ್ದರು. ಈಗ ಎಲ್ಲರ ಗಮನ ಸೆಳೆಯುತ್ತಿರುವ ಈ ಅಭಿಯಾನದ ಕುರಿತು ಜೆಡಿಎಸ್ ಟ್ವೀಟ್ ಮಾಡಿ, ಕೊಡಗಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಫೆಬ್ರವರಿಯಲ್ಲೇ ಆದೇಶ ನೀಡಲಾಗಿದೆ. ಈಗ ಮುಖ್ಯಮಂತ್ರಿ ಅವರು ಈ ಕಾಮಗಾರಿ ಆದಷ್ಟು ಬೇಗ ಮುಗಿಯುವಂತೆ ನೋಡಿಕೊಳ್ಳುತ್ತಾರೆ ಎಂದು ಸ್ಪಷ್ಟನೆ ನೀಡಿದೆ.

Leave a Reply