ಕನಿಷ್ಠ ಪಕ್ಷ ಮೃತ ದೇಹ ನೋಡಲು ಬರುವಷ್ಟು ಮಾನವೀಯತೆ ಇಲ್ಲವೇ? – ಸುಮಲತಾ ವಿರುದ್ಧ ಕಿಡಿಕಾರಿದ ಮಂಡ್ಯ ರೈತರು…!

ಹೆಚ್ ಡಿ ಕುಮಾರಸ್ವಾಮಿ ಅವರು ಇನ್ನು ನಾಲ್ಕು ವರುಷಗಳ ಕಾಲ ಸುಧೀರ್ಘ ಆಡಳಿತ ನಡೆಸಬೇಕೆಂದು , ಹಾಗು ಅವರು ತನ್ನ ಅಂತ್ಯಸಂಸ್ಕಾರಕ್ಕೆ ಬರಬೇಕೆಂದು ಕೋರಿ ವಿಡಿಯೋ ಮಾಡಿ ಅಘಲಯ ಗ್ರಾಮದ ರೈತ ಎ.ಎನ್. ಸುರೇಶ್ ಆತ್ಮಹತ್ಯೆಗೆ ನೆನ್ನೆ ಶರಣಾದರು. ಸಾಲ ಬಾದೆ ತಾಳಲಾರದೆ, ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ರೈತನ ಮೃತದೇಹದ ದರ್ಶನ ಮಾಡಲು ಸಿಎಂ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಮೃತನ ಮನೆಗೆ ಭೇಟಿ ನೀಡಿದರು.

ನಿಮ್ಮ ನೋವು ನಲಿವು ಎರಡರಲ್ಲೂ ಭಾಗಿಯಾಗಿರುತ್ತೇನೆ, ಮಂಡ್ಯದ ಜನರ ಜೊತೆಗೆ ಅಭಿವೃದ್ಧಿ ಮಾರ್ಗದಲ್ಲಿ ಪಯಣ ಬೆಳೆಸುತ್ತೇನೆ ಎಂದು ಬಣ್ಣ ಬಣ್ಣದ ಮಾತುಗಳನ್ನು ಚುನಾವಣೆ ಪ್ರಚಾರದ ವೇಳೆ ಕಣ್ಣೀರು ಇಡುತ್ತ ಹೇಳಿದ್ದ ಮಂಡ್ಯ ಸಂಸದೆ ಸುಮಲತಾ ಅವರು, ಸಹಾಯ ಮಾಡಲು ಅಲ್ಲದಿದ್ದರೂ, ಕನಿಷ್ಠ ಪಕ್ಷ ಮೃತ ದೇಹವನ್ನು ನೋಡೋಕೆ ಆದರೂ ಬರವಷ್ಟು ಸಹ ಮಾನವೀಯತೆ ಇಲ್ಲವೇ? ಎಂದು ಮಂಡ್ಯದ ರೈತರು ಕಿಡಿ ಕಾರಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ” ಸಂಸದೆ ಏನು ಮಾಡಲು ಸಾಧ್ಯವಲ್ಲ, ಎಲ್ಲ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ಉಲ್ಟಾ ಹೊಡೆದ ಸುಮಲತಾ ಅವರು, ಒಂದೂವರೆ ಲಕ್ಷದ ಅಂತರದಿಂದ ಗೆಲ್ಲಿಸಿದ ಮಂಡ್ಯ ರೈತರ ಭಾವನೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಿದ್ದಾರೆ ಎಂದು ನೀವೇ ಅಂದಾಜು ಮಾಡಿ.

ಅಂದಹಾಗೆ, ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೃತನ ಮನೆಗೆ ಆಗಮಿಸಿ, ಸಾಂತ್ವನ ಹೇಳಿ, ೫ ಲಕ್ಷ ಸಹಾಯಧನ ನೀಡಿ ಮೃತರ ಪುತ್ರ ಚಂದ್ರು ಅವರಿಗೆ ಕೂಡಲೇ ಸೂಕ್ತ ಸರಕಾರಿ ಉದ್ಯೋಗ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಅವರಿಗೆ ಸೂಚನೆ ನೀಡಿದ್ದಾರೆ. ಅದರ ಜತೆಗೆ ಪುತ್ರಿ ಸುವರ್ಣಗೆ ಎಂ.ಕಾಂ. ಶಿಕ್ಷಣ ಮುಂದುವರೆಸಲು ಅಗತ್ಯ ಸಹಾಯ ನೀಡುವ ಭರವಸೆ ನೀಡಿದ್ದಾರೆ.

Leave a Reply