ವಿಷ್ಣು ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ಹೊರಡಿಸಿದ ಕುಮಾರಸ್ವಾಮಿ ಸರ್ಕಾರ…!

ನಟಸಾರ್ವಭೌಮ ಡಾ ರಾಜಕುಮಾರ್, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಹಾಗು ರೆಬೆಲ್ ಸ್ಟಾರ್ ಅಂಬರೀಷ್. ಈ ಮೂವರ ಹೆಸರನ್ನು ಕನ್ನಡಿಗರ ಮನದಿಂದ ಎಂದೆಂದಿಗೂ ಅಳಿಸಲು ಸಾಧ್ಯವಿಲ್ಲ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಈ ಮೂವರು ನಟರು ದೈವಾಧೀನರಾದಾಗ, ಸಕಲ ಗೌರವದೊಂದಿಗೆ ಸೂಕ್ತ ಮರ್ಯಾದಿಯಿಂದ ಇಹಲೋಕಕ್ಕೆ ಕಳುಹಿಸಿಕೊಡಲಾಯಿತು.

ಡಾ ರಾಜಕುಮಾರ್ ಅವರು ನಿಧನರಾದಾಗ ಹೆಚ್ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಕ್ಯಮಂತ್ರಿಯಾಗಿದ್ದರು. ಅಭಿಮಾನಿಗಳ ಭಾವಾವೇಶದ ಅತಿರೇಕವನ್ನು ತಡೆಯಲು ಸಾಧ್ಯವಾಗದಿದ್ದರೂ, ಅಂತ್ಯಸಂಸ್ಕಾರವನ್ನು ಸಾಧ್ಯವಾದ ಮಟ್ಟಿಗೆ ಅಚ್ಚುಕಟ್ಟಾಗಿ ಮಾಡಲಾಯಿತು. ಇನ್ನು ಅಂಬರೀಷ್ ಅವರು ನಿಧನರಾದಾಗಲು ಕುಮಾರಸ್ವಾಮಿ ಅವರು ಅಧಿಕಾರದಲ್ಲಿ ಇದ್ದ ಕಾರಣ, ಯಾವುದೇ ರೀತಿಯ ಕುಂದು ಕೊರತೆಯಿಲ್ಲದಂತೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡು ರಾಜ ಮರ್ಯಾದಿಯೊಂದಿಗೆ ಕಳುಹಿಸಿಕೊಡಲಾಯಿತು. ಅವರಿಬ್ಬರಿಗೂ ತಕ್ಷಣವೇ ಸ್ಮಾರಕ ನಿರ್ಮಾಣ ಮಾಡುವ ತೀರ್ಮಾನವನ್ನು ಕುಮಾರಸ್ವಾಮಿ ಅವರು ತೆಗೆದುಕೊಂಡರು.

ಆದರೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಷ್ಣುವರ್ಧನ್ ಅವರು ತೀರಿಕೊಂಡರು. ಅವರ ಸ್ಮಾರಕಕ್ಕೆ ಎಷ್ಟು ವರುಷಗಳ ಕಾಲದಿಂದ ಅವರ ಅಭಿಮಾನಿಗಳು, ಅವರ ಕುಟುಂಬದವರು ಹೋರಾಡುತ್ತಿದ್ದಾರೆ ಎಂದು ನಿಮಗೆ ಗೊತ್ತು. ಯೆಡ್ಯೂರಪ್ಪನವರ ಸರ್ಕಾರದಲ್ಲಿ ಒಬ್ಬ ಹಿರಿಯ ನಟನ ಸಾವಿಗೆ ‘ಕವಡೆ ಕಾಸಿನ ಕಿಮ್ಮತ್ತು’ ನೀಡಲಿಲ್ಲ. ಹಾಗಯೇ ಹಿಂದಿನ ಸರ್ಕಾರದಲ್ಲೂ ಈ ಕೆಲಸ ಆಗಲಿಲ್ಲ.

ಆದರೆ ಈಗ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಕೇವಲ ಒಂದು ವರುಷದಲ್ಲಿ ವಿಷ್ಣು ಸ್ಮಾರಕಕ್ಕೆ ಬೇಕಾದ ತಯಾರಿ ನಡೆಸಿ, ಕೋರ್ಟ್ ಆದೇಶ ಪಡೆದಿದ್ದಾರೆ. ವಿಷ್ಣು ಅಳಿಯ ಅನಿರುದ್ಧ ಅವರೇ ಹೇಳಿದಂತೆ, ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದ್ದು, ಇನ್ನೆರಡು ವರುಷಗಳಲ್ಲಿ ಮೈಸೂರಿನಲ್ಲಿ ಐದು ಎಕರೆ ಜಾಗದಲ್ಲಿ ಬೃಹತ್ ವಿಷ್ಣು ಸ್ಮಾರಕ ತಲೆ ಎತ್ತಲಿದೆ.

ಕೊನೆಗೂ ಒಬ್ಬ ಹಿರಿಯ ಕಲಾವಿದನಿಗೆ ದಕ್ಕಬೇಕಾದ ಗೌರವ, ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಸಿಕ್ಕಿದೆ.

Leave a Reply