ಮುಗ್ಗರಿಸಿತು ಅಭಿಷೇಕ್ ನ ಚೊಚ್ಚಲ ಚಿತ್ರ ‘ಅಮರ್’…!

ಡಾ ರಾಜಕುಮಾರ್, ಡಾ ವಿಷ್ಣುವರ್ಧನ್ ಹಾಗು ಡಾ ಅಂಬರೀಷ್. ಈ ಮೂರು ಹೆಸರು ಕನ್ನಡಿಗರ ಮನದಿಂದ ಎಂದಿಗೂ ಅಳಿಸಲು ಸಾಧ್ಯವಿಲ್ಲ. ರಾಜಕುಮಾರ್ ಹಾಗು ವಿಷ್ಣುವರ್ಧನ್ ಅವರು ತಮ್ಮ ನಟನೆ ಮೂಲಕ ಅಘಾದ ಕೀರ್ತಿ ಸಂಪಾದಿಸಿದವರು. ಆದರೆ ಅಂಬಿ ನಟನೆಯಲ್ಲಿ ಅಂತ ನಿಪುಣರೇನಲ್ಲ. ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ ನ ಮೂಲಕ ಜನರನ್ನು ದಶಕಗಳ ಕಾಲ ರಂಜಿಸಿದ್ದಾರೆ. ಆದರೆ ಕೋಟ್ಯಂತರ ಜನರ ಹೃದಯದಲ್ಲಿ ಸ್ಥಾನ ಪಡೆಯಲಿ ಅದು ಕಾರಣವಲ್ಲ. ಅದಕ್ಕೆ ಕಾರಣ ಅಂಬಿಯ ಹೃದಯವಂತಿಕೆ.

ಹೌದು ಅಂಬಿ ಹೃದಯವಂತಿಕೆಯಲ್ಲಿ ಅತ್ಯಂತ ಶ್ರೀಮಂತ. ಅವರು ತಮ್ಮ ಜೀವನ ಅವಧಿಯಲ್ಲಿ ಜನರ ಪ್ರೀತಿ, ಐಷಾರಾಮಿ ಬದುಕು ಎಲ್ಲದನ್ನು ಅನುಭವಿಸಿದ್ದವರು. ಅವರ ಕೊನೆ ಆಸೆ ಇದಿದ್ದು ತಮ್ಮ ಮಗ ಅಭಿಷೇಕ್ ನನ್ನ ನಾಯಕನಾಗಿ ತೆರೆ ಮೇಲೆ ನೋಡಬೇಕು ಎಂದು. ಆದರೆ ಮಗನ ಚಿತ್ರವನ್ನು ಕಣ್ಣು ತುಂಬಿಕೊಳ್ಳುವಷ್ಟರಲ್ಲಿ ಅಂಬರೀಷ್ ದೈವಾಧೀನರಾದರು.

ಮತ್ತೊಂದು ವಿಪರ್ಯಾಸವೆಂದರೆ ಅಭಿಷೇಕ್ ನಟನೆಯ ಚೊಚ್ಚಲ ಚಿತ್ರ ‘ಅಮರ್’ ಮುಗ್ಗರಿಸಿದೆ. ಅಂಬಿ ಮಗನ ಚಿತ್ರ ಎಂದು ಜನರು ನೋಡಿದ್ದಾರೆಯೇ ಹೊರೆತು, ಸಿನಿಮಾ ಚೆನ್ನಾಗಿದೆ ಎಂದು ಯಾರು ಸಹ ನೋಡುತ್ತಿಲ್ಲ. ಈಗಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಎತ್ತಂಗಡಿ ಮಾಡಲಾಗಿದೆ.

ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರೂಪ್ ಭಂಡಾರಿ, ರಚಿತಾ ರಾಮ್ ಅಷ್ಟೇ ಯಾಕೆ ಸ್ವತಃ ಅಂಬರೀಷ್ ಅವರಿಂದ ಅತಿಥಿ ಪಾತ್ರ ಮಾಡಿಸಿ ಚಿತ್ರದಲ್ಲಿ ತುರುಕಿ ಅಲಂಕರಿಸಲು ಪ್ರಯತ್ನಿಸಿದ್ದರೂ, ಚಿತ್ರದಲ್ಲಿ ತಿರುಳೇ ಇಲ್ಲದ ಕಾರಣ ಈ ಸಿನಿಮಾ ಪ್ರೇಕ್ಷಕನಿಗೆ ಎರಡೂವರೆ ಘಂಟೆಗಳ ಕಾಲದ ಟಾರ್ಚರ್ ಎಂದರೆ ತಪ್ಪಾಗುವುದಿಲ್ಲ.

ಈಗ ಹಿಂದಿನ ಕಾಲದಂತೆ ನಾಯಕ ನಟ ಕೇವಲ ಸುರುದ್ರೂಪಿಯಾಗಿದ್ದರೆ ಸಾಲದು. ನಾಯಕ ನಟರು ಶ್ರಮವಹಿಸಿ ಕಸ್ಸರತ್ತು ಮಾಡಿ ದೇಹವನ್ನು ಉತ್ತಮ ಆಕಾರದಲ್ಲಿ ಬೆಳೆಸಿರಬೇಕೆಂದು ಜನ ನಿರೀಕ್ಷಿಸುತ್ತಾರೆ. ಅದಲ್ಲದೆ ಅವನಿಗೆ ಡಾನ್ಸ್, ಹಾಗು ನೃತ್ಯ ಮಾಡುವಷ್ಟು ಫ್ಲೆಕ್ಸಿಬಲ್ ಆಗಿ ಇರಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ಎಲ್ಲವನ್ನು ಮಿಗಿಲಾಗಿ ಅವನಿಗೆ ನಟನೆಯ ಗಂಧ ಗಾಳಿ ಇರಬೇಕೆಂದು ಆಶಿಸುತ್ತಾರೆ.

ಆದ್ದರಿಂದ ಅಭಿಷೇಕ್ ಇನ್ನು ಕೊಂಚ ಸಮಯ ತೆಗೆದುಕೊಂಡು, ಇವೆಲ್ಲ ಗುಣಗಳನ್ನು ಬೆಳೆಸಿಕೊಂಡು, ನಟನೆಯಲ್ಲಿ ಇನ್ನಷ್ಟು ಪಳಗಿ ಬಂದಿದ್ದರೆ ಈ ಆಘಾತ ಎದುರಾಗುತ್ತಿರಲಿಲ್ಲವೇನೋ. ಇದು ಅವಾರ ವೈಫಲ್ಯ ಅನ್ನುವುದಕ್ಕಿಂತ ನಿರ್ದೇಶಕ ನಾಗಶೇಖರ್ ಅವರ ವೈಫಲ್ಯ ಎಂದು ಹೇಳಬಹುದು. ಚೊಚ್ಚಲ ಸಿನಿಮಾವನ್ನು ನಿರ್ದೇಶಿಸುತ್ತಿರುವ ನಿರ್ದೇಶಕನಿಗಿಂತಲೂ ಹೀನಾಯವಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ನೋಡಿದಮೇಲೆ ‘ಮೈನ’ , ‘ಸಂಜು ವೆಡ್ಸ್ ಗೀತಾ’ ಚಿತ್ರವನ್ನು ನಿರ್ದೇಶಿಸಿದ್ದವರು ಇವರೇನಾ ಎಂದನಿಸಿಬಿಡುತ್ತದೆ.

Leave a Reply