ಗ್ರಾಮ ವಾಸ್ತವ್ಯದ ವೇಳೆ ಸರಳತೆ ಮೆರೆದ ಸಿಎಂ ಕುಮಾರಸ್ವಾಮಿ…!

ಹೆಚ್ ಡಿ ಕುಮಾರಸ್ವಾಮಿ ಅವರು ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕುಳಿತು ಆಡಳಿತ ನಡೆಸುವ ಮುಖ್ಯಮಂತ್ರಿಯಲ್ಲ ಎಂದು ಈಗಾಗಲೇ ನಿರೂಪಿಸಿದ್ದಾರೆ. ಕುಮಾರಸ್ವಾಮಿ ಅವರು 2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಜನರ ಜೊತೆ ಬೆರೆತು, ಅವರ ನಾಡಿ ಬಡಿತ ಗ್ರಹಿಸಿ, ಅವರ ಹಿತಕ್ಕಾಗಿ ಶ್ರಮಿಸುವ ಸರ್ಕಾರ ಎಂದು ಕೇವಲ ಇಪ್ಪತ್ತು ತಿಂಗಳ ಅವಧಿಯಲ್ಲಿ ಬರೋಬ್ಬರಿ 48 ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪೂರೈಸಿ, ಭೇಟಿ ನೀಡಿದ ಗ್ರಾಮಗಳಲ್ಲಿ ಪ್ರಸಿದ್ಧ ‘ಜನತಾ ದರ್ಶನ’ ನಡೆಸಿ, ಜನಗಳ ಕಷ್ಟವನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಅತ್ಯಂತ ಜನಪ್ರಿಯ ಕಾರ್ಯಕ್ರಮವೊಂದನ್ನು ನಡೆಸಿ ನಿರೂಪಿಸಿದ್ದರು. ಈಗ ಅವರು ಮತ್ತೆ ಮುಖ್ಯಮಂತ್ರಿಯಾಗಿರುವ ಕಾರಣ ಗ್ರಾಮ ವಾಸ್ತವ್ಯ, ಜನತಾ ದರ್ಶನ ಎಂಬ ಸುಂದರ ಪರಿಕಲ್ಪನೆಗೆ ಪುನರಾರಂಭ ದೊರಕಿದ್ದು, ರಾಜ್ಯದಲ್ಲಿ ಸುವರ್ಣ ಯುಗ ಮರಳುತ್ತಿದೆ.

ಗುರುವಾರ ಬೆಂಗಳೂರಿನಿಂದ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲ್ಲೂಕಿನ ಚಂಡರಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸುವ ಮೂಲಕ ಗ್ರಾಮ ವಾಸ್ತವ್ಯ ಆರಂಭಿಸಿದರು. ಗ್ರಾಮ ವಾಸ್ತವ್ಯದ ವೇಳೆ ಯಾವುದೇ ರೀತಿಯ ಐಷಾರಾಮಿ ಸೌಲತ್ತುಗಳನ್ನು ಬಳಸಿಕೊಳ್ಳದೆ, ಸರಳತೆ ಮೆರೆಯುವ ಮೂಲಕ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಐಷಾರಾಮಿ ಹೋಟೆಲ್ ಗಳಲ್ಲಿ ಉಳಿದುಕೊಳ್ಳದೆ, ಸರ್ಕಾರಿ ಶಾಲೆಯಲ್ಲೇ ತಂಗಿದರು. ವಿಶ್ರಾಂತಿ ಪಡೆಯಲು ಅವರು ಮಂಚವನ್ನು ಬಳಸದೆ ನೆಲದಮೇಲೆ ಒಂದು ಹಾಸಿಗೆ ಹಾಸಿಕೊಂಡು ವಿಶ್ರಾಂತಿ ಪಡೆದರು.

ಜನತಾ ದರ್ಶನ ನಡೆಸಿದ ದಿನ ಸಾವಿರಾರು ಜನರು ಆಗಮಿಸಿ ತಮ್ಮ ಕಷ್ಟಗಳನ್ನು ನೇರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡು ಸ್ಥಳದಲ್ಲೇ ಪರಿಹಾರ ಒದಗಿಸಿಕೊಂಡರು.

Leave a Reply