ರಾಜ್ಯಾಭಿವೃದ್ದಿಗೆ ಬಿಡುವಿಲ್ಲದೆ ಶ್ರಮಿಸುತ್ತಿರುವ ಸಿಎಂ ಕುಮಾರಸ್ವಾಮಿ…! ಇಂದು ಎರಡನೇ ಗ್ರಾಮ ವಾಸ್ತವ್ಯ ಆರಂಭ…!

ಕೇವಲ ಎರಡು ದಿನಗಳ ಹಿಂದೆಯಷ್ಟೇ ಸಿಎಂ ಕುಮಾರಸ್ವಾಮಿ ಅವರು ಯಾದಗಿರಿಯ ಜಿಲ್ಲೆಯ ಚಂದರಕಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಅಲ್ಲಿ ಜನತಾ ದರ್ಶನ ನಡೆಸಿ, ನೂರಾರು ಮೈಲಿ ದೂರದಿಂದ ತಮ್ಮೊ ಬಳಿ ಅವರ ಕಷ್ಟ ಹೇಳಿಕೊಂಡು ಪರಿಹಾರ ಕೇಳಲು ಬಂದಿದ್ದರು. ಅವರ ಕಷ್ಟಗಳನ್ನು ಆಲಿಸಿ, ಸಾವಿರಾರು ಜನರಿಗೆ ಸ್ಥಳದಲ್ಲೇ ಸಿಎಂ ಕುಮಾರಸ್ವಾಮಿ ಅವರು ಪರಿಹಾರ ಒದಗಿಸಿಕೊಟ್ಟರು.

ಇಂದು ಮಾನ್ಯ ಮುಖಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮತ್ತೆ ಗ್ರಾಮ ವಾಸ್ತವ್ಯಕ್ಕೆ ತೆರಳಲಿದ್ದಾರೆ. ಈ ಬಾರಿ ಅವರು ಕಲಬುರುಗಿ ಜಿಲ್ಲೆಯ ಹೊರೂರ್ ಗ್ರಾಮಕ್ಕೆ ಇಂದು ಸಂಜೆ ಹೋರಾಡಲಿದ್ದಾರೆ. ರಾಜ್ಯಾಭಿವೃದ್ದಿಗೆ ಕುಮಾರಸ್ವಾಮಿ ಅವರು ಬಿಡುವಿಲ್ಲದೆ ಶ್ರಮಿಸುತ್ತಿರುವುದನ್ನು ಮೆಚ್ಚಲೇ ಬೇಕು.

ಅಂದುಕೊಂಡಂತೆ ಆಗಿದ್ದರೆ ಸಿಎಂ ಕುಮಾರಸ್ವಾಮಿ ಅವರು 22ರಂದೇ ಹೊರೂರ್ ಗ್ರಾಮಕ್ಕೆ ತೆರಳಬೇಕಿತ್ತು. ಆದರೆ ಕಲಬುರುಗಿ ಜಿಲ್ಲೆಯಲ್ಲಿ ಸುರಿಯುತ್ತಿದ್ದ ಮಳೆಯಿಂದ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು. ಗ್ರಾಮದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು, ಸಿಎಂ ಕುಮಾರಸ್ವಾಮಿ ಅವರು ಅದಕ್ಕೆ ಪರಿಹಾರ ಒದಗಿಸುತ್ತಾರೆ ಎಂಬ ದೃಢವಾದ ನಂಬಿಕೆಯಿಂದ ಜನರು ಕಾತುರದಿಂದ ಅವರ ಆಗಮನಕ್ಕೆ ಕಾಯುತ್ತಿದ್ದಾರೆ.

Leave a Reply