ಸಿಎಂ ಕುಮಾರಸ್ವಾಮಿ ಅವರ ಪ್ರಯಾಣಿಸುತ್ತಿದ್ದ ಬಸ್ ತಡೆದು ಪ್ರತಿಭಟಿಸಿದವರು ಕಾರ್ಮಿಕರಲ್ಲ…! ಇಲ್ಲಿದೆ ಅಸಲಿ ಸತ್ಯ…!

ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಎರಡನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ನೆನ್ನೆ ಆರಂಭಿಸಿದರು. ಇಂದು ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಗ್ರಾಮ ವಾಸ್ತವ್ಯ ಮಾಡಲು ಕುಮಾರಸ್ವಾಮಿ ಅವರು ಹೋಗುತ್ತಿದ್ದ ವೇಳೆ ದಾರಿಯಲ್ಲಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಬಸ್ ತಡೆದರು. ಜನರಿಗೆ ಒಳ್ಳೇದು ಮಾಡಲು ಹೋಗುತ್ತಿರುವ ನನ್ನ ವಿರುದ್ಧ ಇವರು ಪ್ರತಿಭಟಿಸುತ್ತಿದ್ದಾರಲ್ಲ ಎಂದು ಕುಮಾರಸ್ವಾಮಿ ಅವರಿಗೆ ಹತಾಶ ಭಾವ ಮನದಲ್ಲಿ ಮೂಡಿ ಒಂದೆರಡು ಮಾತುಗಳನ್ನು ಆಡಿದರು.

ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿರುವುದನ್ನು ಸೆರೆ ಹಿಡಿಯಲಾಗಿದೆ. ಆದರೆ ಈ ವಿಡಿಯೋದಲ್ಲಿ ಅವರು ಏನು ಮಾತನಾಡಿದ್ದಾರೆ ಎಂದು ಸರಿಯಾಗಿ ಕೇಳುವುದಿಲ್ಲ. ಈ 15 ಸೆಕೆಂಡ್ ಗಳ ದೃಶ್ಯವನ್ನು ನಮ್ಮ ಅತ್ಯಂತ ಸಮಾಜ ಕಳಕಳಿ ಹೊಂದಿರುವ ಸುದ್ದಿ ವಾಹಿನಿಗಳು ಬೆಳ್ಳಗೆಯಿಂದ ಪ್ರಸಾರ ಮಾಡುತ್ತಲೇ ಇದ್ದಾರೆ. ಅಲ್ಲದೆ ಅದಕ್ಕೆ ತಮ್ಮದೇ ಡೈಲಾಗ್ ಗಳನ್ನು ಸೇರಿಸಿ, ಮುಖ್ಯಮಂತ್ರಿ ಅವರೇ ಹೇಳಿರುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ.

ಅಸಲಿಗೆ ಅಲ್ಲಿ ನಡೆದಿದ್ದರೂ ಏನು? ಸಿಎಂ ನಿಜವಾಗಲೂ ಜನರ ಬಗ್ಗೆ ಲಘುವಾಗಿ ಮಾತಾಡಿದ್ದಾರೆ? ಯಾರು ಈ ಪ್ರತಿಭಟನಾಕಾರರು? ಅವರ ಉದ್ದೇಶವೇನು? ಅವರ ಬೇಡಿಕೆಯೇನು? ಮುಂದೆ ಓದಿ…

ಸಿಎಂ ಕುಮಾರಸ್ವಾಮಿ ಅವರು ಕಳೆದ ಒಂದು ವರುಷದಿಂದ ವಿರೋಧ ಪಕ್ಷದಿಂದ ಸಾಕಷ್ಟು ಅನಗತ್ಯ ಒತ್ತಡ, ಹಣಕ್ಕಾಗಿ ಹಾಗು ಟಿಆರ್ಪಿ ಗಾಗಿ ನೆಗೆಟಿವ್ ಪಬ್ಲಿಸಿಟಿ ಮಾಡುತ್ತಿರುವ ಸುದ್ದಿ ವಾಹಿನಿಗಳನ್ನು ಎದುರಿಸುತ್ತ ಉತ್ತಮ ಆಡಳಿತವನ್ನು ನೀಡಿದ್ದಾರೆ. ಹಲವಾರು ನೂತನ ಜನಪರ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ. ಉತ್ತಮ ಬಜೆಟ್ ಮಂಡಿಸಿದ್ದಾರೆ. ಜನತಾ ದರ್ಶನ, ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಮೂಲಕ ಜನತೆಯ ಕಷ್ಟವನ್ನು ಆಲಿಸಿ ಪರಿಹಾರ ಸೂಚಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅದೇ ರೀತಿಯ ಒಂದು ಸಮಾಜಮುಖಿ ಕಾರ್ಯಕ್ರಮವನ್ನು ನಡೆಸಲು ಹೋಗುವ ವೇಳೆ ತಡೆದು ಪ್ರತಿಭಟಿಸಿರುವುದು ಅವರಿಗೆ ಕೊಂಚ ಇರಿಸು ಮುರಿಸು ಉಂಟು ಮಾಡಿದೆ. ಸಿಕ್ಕಿದ್ದೇ ಸೀರುಂಡೆಯಂಬಂತೆ ಅದನ್ನು ಮಾಧ್ಯಮದವರು ತಮ್ಮ ಸೃಜನಶೀಲತೆಯನ್ನು ಬಳಸಿ ತಿರುಚಿ ಒಂದೇ ಸಮನೆ ಪ್ರಸಾರ ಮಾಡುತ್ತಿದ್ದಾರೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಪ್ರತಿಭಟಿಸುತ್ತ ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿದಾಗ ನಮಗೆ ಇವರು ನಿಜವಾಗ್ಲೂ ಕಾರ್ಮಿಕರ? ಕಾರ್ಮಿಕರೇ ಆಗಿದ್ದರೂ, ಇದು ಸ್ವಯಂ ಪ್ರೇರಿತವೋ ಅಥವಾ ರಾಜಕೀಯ ದ್ವೇಷದಿಂದ ರೂಪಿಸಿರುವ ಷಡ್ಯಂತರವೊ? ಎಂಬ ಅನುಮಾನ ಮೂಡುತ್ತದೆ.

ಇವರು ಕಾರ್ಮಿಕರೇ ಅಂದುಕೊಳ್ಳೋಣ. ಇವರಿಗೆ ನಿಜವಾಗಲೂ ತಮ್ಮ ಸಮಸ್ಯೆಗೆ ಪರಿಹಾರ ಬೇಕಿದ್ದರೆ, ಮೊದಲು ಸಿಎಂ ಅವರನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ ಮುಂದಿಟ್ಟು, ಪರಿಹಾರ ಕೇಳುತ್ತಿದ್ದರು. ಆದರೆ ಇವರು ಸಿಎಂ ಬರುವುದನ್ನೇ ಕಾದು, ಅವರು ಬಂದಾಗ ವಿಪಕ್ಷ ನಾಯಕನಿಗೆ ಜೈಕಾರ ಹಾಕುತ್ತ ಪ್ರತಿಭಟಿಸಿರುವುದು, ಇದು ರಾಜಕೀಯ ಷಡ್ಯಂತ್ರ ಎಂಬುದಕ್ಕೆ ಬಲವಾದ ಸಾಕ್ಷಿ.

Leave a Reply