ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನ್ನಿರುವುದೇ ಉತ್ತರ – ಟೀಕಾಕಾರಿಗೆ ಟಾಂಗ್ ಕೊಟ್ಟ ಸಿಎಂ…!

ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯದ ಮೂರನೇ ಹಂತವನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ರಾಯಚೂರಿನ, ಮಾನ್ವಿ ತಾಲೂಕಿನ ಕರೆಗುಡ್ಡ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಅಂಕಿ ಅಂಶಗಳ ಪ್ರಕಾರ ಸುಮಾರು 8000ಕ್ಕೂ ಅಧಿಕ ಜನರ ಕಷ್ಟವನ್ನು ಆಲಿಸಿ ಅವರ ಅರ್ಜಿಯನ್ನು ಸ್ವೀಕರಿಸಿ, 3000ಕ್ಕೂ ಹೆಚ್ಚು ಜನರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು.

ನೆನ್ನೆ ಸಿಎಂ ಕುಮಾರಸ್ವಾಮಿ ಅವರು ಬೀದರ್ ನ ಉಜಳಂಬ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ನೆನ್ನೆ ರಾತ್ರಿ ಶಾಲೆಯಲ್ಲಿ ಮಕ್ಕಳ ಜೊತೆ ಊಟ ಮಾಡಿದ ಅವರು ಇಂದು ಮುಂಜಾನೆ ಶಾಲೆಯ ಆವರಣದಲ್ಲಿ ಸಸಿ ನೆಟ್ಟು ಗ್ರಾಮ ಅವಾಸ್ತವ್ಯವನ್ನು ಅಂತ್ಯಗೊಳಿಸಿದರು.

ಗ್ರಾಮ ವಾಸ್ತವ್ಯ ಯಶಸ್ವಿಯಾದ ಹಿನ್ನಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು ‘ ಜನರ ನೋವಿಗೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ. ಸಾಮಾಜಿಕ ನ್ಯಾಯ ನಾವೇನು ಕೊಡುತ್ತೇವೆ, ಕೇವಲ ಸರ್ಕಾರ ನೀಡುವ ಯೋಜನೆಗಳಿಗೆ ಸೀಮಿತವಾಗಿಸಬಾರದು. ಅದಿಕ್ಕಿಂತಲೂ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ ನಾಡಿನ ಪ್ರತಿಯೊಂದು ಮನೆ ಮನೆಗಳಲ್ಲೂ ಇರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಿಬೇಕು ‘ ಎಂದು ಹೇಳಿದರು.

ಗ್ರಾಮ ವಾಸ್ತವ್ಯ ಎಂಬ ಅತ್ಯಂತ ಸುಂದರ ಕಲ್ಪನೆ ಹಾಗು ಪರಿಣಾಮಕಾರಿ ಕಾರ್ಯಕ್ರಮವನ್ನು ಟೀಕಿಸುತ್ತಿರುವ ವಿಪಕ್ಷದವರ ಬಗ್ಗೆ ಕೇಳಿದಾಗ ಸಿಎಂ ಕುಮಾರಸ್ವಾಮಿ ಅವರು ” ಟೀಕೆ ಮಾಡುವವರನ್ನು ನಿಲ್ಲಿಸಲು ಆಗತ್ತಾ? ನಾನು ಶಾಲೆಯಲ್ಲಿ ತಂಗಿದ್ದಾಗ ಕುವೆಂಪು ಅವರು ಹೇಳಿರುವ ಒಂದು ಉಲ್ಲೇಖವನ್ನು ಓದಿದೆ. ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನ್ನಿರುವುದೇ ಉತ್ತರ ಎಂದು. ಬಹುಷಃ ನಾನು ಟೀಕೆ ಮಾಡುವವರಿಗೆ ಉತ್ತರ ಕೊಡದೆ ಇರುವುದೇ ಸೂಕ್ತ” ಎಂದು ಹೇಳಿದರು.

Leave a Reply