ಅಮೇರಿಕಾದಲ್ಲಿ ಕಾಲಭೈರವೇಶ್ವರನ ದೇಗುಲದ ಅವಶ್ಯಕತೆ ಏನಿತ್ತು? – ಶಾಸಕ ಆರ್ ಅಶೊಕ್ ವಿವಾದಾತ್ಮಕ ಹೇಳಿಕೆ…!

ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯದ ಮೂರನ ಹಂತದ ಗ್ರಾಮ ವಾಸ್ತವ್ಯವನ್ನು ನೆನ್ನೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದರು. ನಂತರ ನೆನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ ಅವರು ಅಮೇರಿಕ ಪ್ರವಾಸ ಕೈಗೊಂಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಅಮೆರಿಕಕ್ಕೆ ಪ್ರವಾಸ ಕೈಗೊಂಡಿರುವುದು ವಿಶ್ರಾಂತಿಗಾಗಿಯೋ ಅಥವಾ ಮಜಾ ಮಾಡಲು ಅಂತೂ ಅಲ್ಲ. ಅವರ ಪ್ರವಾಸದ ಉದ್ದೇಶ ಒಂದು ಲೋಕ ಕಲ್ಯಾಣ ಕಾರ್ಯಕ್ರಮ. ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಕಾಲಭೈರವೇಶ್ವರ ದೇಗುಲದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಸಿಎಂ ಎಚ್​ಡಿಕೆ ಅವರು ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಹ್ವಾನದ ಮೇರೆಗೆ ಜೂನ್ 30 ರಂದು ನ್ಯೂ ಜೆರ್ಸಿಯಲ್ಲಿ ಶ್ರೀ ಕಾಲ ಭೈರವೇಶ್ವರಸ್ವಾಮಿ ದೇವಾಲಯದ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಮೊಸರಲ್ಲಿ ಕಲ್ಲು ಹುಡುಕುವ ಬರದಲ್ಲಿ, ಆರ್ ಅಶೋಕ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಅಮೇರಿಕಾದಲ್ಲಿ ಕಾಲಭೈರವೇಶ್ವರನ ದೇಗುಲದ ಅವಶ್ಯಕತೆ ಏನಿತ್ತು? ಈ ನಡುವೆ ಮಠಗಳು ದುಡ್ಡು ಮಾಡಲು ನಿಂತಿವೆ ಎಂದು ಆದಿ ಚುಂಚನಗಿರಿ ಮಠದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

Leave a Reply