ಜೆಡಿಎಸ್ ಪಾದಯಾತ್ರೆಗೆ ಯುವ ನಾಯಕ ನಿಖಿಲ್ ಸಾರಥ್ಯ…!?

ಒಂದು ರಾಜ್ಯದ ನೆಲ, ಜಲ, ಭಾಷೆ ಹಾಗು ಸಂಸ್ಕೃತಿಯನ್ನು ಕಾಪಾಡಲು ಒಂದು ಪ್ರಬಲ ಪ್ರಾದೇಶಿಕ ಪಕ್ಷ ಅತ್ಯವಶ್ಯಕ. ಕರ್ನಾಟಕ ರಾಜ್ಯದ ಜನರ ಭಾವನೆಗಳು ರಾಷ್ಟ್ರೀಯ ಪಕ್ಷಗಳಿಗೆ ಅರ್ಥವಾಗುವುದಿಲ್ಲ. ಒಂದು ವೇಳೆ ಅರ್ಥವಾದರೂ ಅವರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಇದೇ ಕಾರಣದಿಂದ ದೆಹಲಿಯ ಕೆಂಪು ಕೋಟೆಯಲ್ಲಿ ಭಾರತದ ದ್ವಜಾರೋಹಣ ಮಾಡಿರುವ ಏಕೈಕ ಕನ್ನಡಿಗ, ಹುಟ್ಟು ಹೋರಾಟಗಾರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಜಾತ್ಯತೀತ ಜನತಾ ದಳ(ಜೆಡಿಎಸ್) ಎಂಬ ಪಕ್ಷವನ್ನು ಕಟ್ಟಿ, ಆ ಪಕ್ಷವನ್ನು ಪ್ರತಿನಿಧಿಸುತ್ತಾ, ಕರುನಾಡ ಜನರಿಗಾಗಿ, ನಮ್ಮ ಹಕ್ಕುಗಳಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ.

ಜೆಡಿಎಸ್ ಪಕ್ಷದ ಕೇಂದ್ರಬಿಂದು ಮಾನ್ಯ ಮುಖ್ಯಮಂತ್ರಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ನಮ್ಮ ರಾಜ್ಯದ ಜನರ ಹಿತಕ್ಕಾಗಿ ಸಾಕಷ್ಟು ದಣಿದರು, ಕಳೆದ ಲೋಕ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹಿನ್ನಡೆ ಅನುಭವಿಸಿದೆ. ಈ ಕಾರಣದಿಂದ 88ರ ಹರಿಯದಲ್ಲೂ, ಪಕ್ಷದ ವರಿಷ್ಠರಾದ ದೇವೇಗೌಡರು ಪಾದಯಾತ್ರೆ ನಡೆಸಿ ಪಕ್ಷವನ್ನು ಮತ್ತಷ್ಟು ಪ್ರಬಲಗೊಳಿಸಲು ಸಿದ್ಧವಾಗುತ್ತಿದ್ದರು. ಆದರೆ ಈ ಯೋಜನೆಯಲ್ಲಿ ಕೊಂಚ ಬದಲಾವಣೆಯಾಗುವಂತಿದೆ. ಅದು ಏನು ಗೊತ್ತಾ? ಮುಂದೆ ಓದಿ….

ಆಗಸ್ಟ್ 20ರಿಂದ ಆರಂಭವಾಗಲಿರುವ ಮೈಸೂರಿನ ನಂಜನಗೂಡಿನಿಂದ ದಾವಣಗೆರೆ ಜಿಲ್ಲೆಯ ಹರಿಹರದ ತನಕ ಪಕ್ಷ ಕಟ್ಟುವ ಕಾಲ್ನಡಿಗೆಯ ನೇತೃತ್ವವನ್ನು ದೇವೇಗೌಡರ ಬದಲು ಯುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ವಹಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಚಾರ, ವಿಕಾಸ ಹಾಗು ವಿಶ್ವಾಸ ಎಂಬ ತ್ರಿ’ವಿ’ಧ ಚಿಂತನೆಯೊಂದಿಗೆ ಎರಡು ಹಂತದಲ್ಲಿ ಕರ್ನಾಟಕದ ಜನಮನವನ್ನು ಮುಟ್ಟುವುದು ಈ ಕಾರ್ಯಕ್ರಮದ ಮೂಲ ಉದ್ದೇಶ.

Leave a Reply