ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ವಿಷ್ಣು ಸ್ಮಾರಕ! ಸಿಎಂ ಕುಮಾರಸ್ವಾಮಿಗೆ ಧನ್ಯವಾದ ತಿಳಿಸಿದ ಭಾರತಿ ವಿಷ್ಣುವರ್ಧನ್…!

ಕನ್ನಡ ಚಿತ್ರರಂಗದ ಮರೆಯದ ಮಾಣಿಕ್ಯ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹಿಂದಿನ ಸರ್ಕಾರದಿಂದ ಅವರ ಕುಟುಂಬಕ್ಕೆ ಹಾಗು ಅಭಿಮಾನಿಗಳಿಗೆ ಹೇಗೆ ಅನ್ಯಾಯವಾಗಿದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ.

ರಾಜ್ಯದ ಪ್ರಸ್ತುತ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು 2006ರಲ್ಲಿ ಮೊದಲನೇ ಬಾರಿಗೆ ಮುಖ್ಯಮಂತ್ರಿಯಾದಾಗ ಡಾ. ರಾಜಕುಮಾರ್ ಅವರು ದೈವಾಧೀನರಾದರು. ಆ ಸಂದರ್ಭದಲ್ಲಿ ಅಭಿಮಾನಿಗಳ ಭಾವಾವೇಶದ ಅತಿರೇಕವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಅಂತ್ಯಸಂಸ್ಕಾರವನ್ನು ಸಾಧ್ಯವಾದ ಮಟ್ಟಿಗೆ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.

ಇನ್ನೂ ಡಾ. ಅಂಬರೀಷ್ ಅವರು ಇತ್ತೀಚೆಗೆ ತೀರಿಕೊಂಡರು. ರಾಜ್ ಹಾಗು ವಿಷ್ಣು ಅಂತ್ಯ ಸಂಸ್ಕಾರದ ವೇಳೆ ನಡೆದ ಅಹಿತಕರ ಘಟನೆಗಳಿಂದ, ಅಭಿಮಾನಿಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ಕಲಿತಿದ್ದ ಪೊಲೀಸರು, ಸಿಎಂ ಕುಮಾರಸ್ವಾಮಿ ಅವರ ಮುಂದಾಳತ್ವದಲ್ಲಿ ಅಚ್ಚುಕಟ್ಟಾಗ ರಾಜ ಮರ್ಯಾದಿಯೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿದರು.

ಬಿ.ಎಸ್ ಯಡಿಯೂರಪ್ಪ ಸಿಎಂ ಆದ ಅವಧಿಯಲ್ಲಿ ಅಗಲಿದ ವಿಷ್ಣು ಅವರು ಮಾತ್ರ ಈ ವಿಚಾರದಲ್ಲಿ ನತದೃಷ್ಟರು ಎಂದೇ ಹೇಳಬಹುದು. ದಶಕಗಳ ಕಾಲ ನಮನ್ನು ಮನರಂಜಿಸಿ, ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿದ ವಿಷ್ಣುವರ್ಶನ್ ಅವರಿಗೆ ಯಕಶ್ಚಿತ್ ಒಂದು ಸ್ಮಾರಕ ನಿರ್ಮಾಣ ಮಾಡಲು ಈ ಹಿಂದಿನ ಸರ್ಕಾರಗಳ ಕೈಯಲ್ಲಿ ಆಗಲಿಲ್ಲ. ಅವರ ಕುಟುಂಬದವರು, ಅಭಿಮಾನಿಗಳು ಪ್ರತಿಭಟಿಸಿ ರೋಸತ್ತು ಕೊನೆಗೆ ಬೇಡಿಕೊಳ್ಳುವ ಸ್ಥಿತಿಗೆ ತಲುಪಿದರು.

ಈಗ ಸಿಎಂ ಕುಮಾರಸ್ವಾಮಿ ಅವರು ವಿಷ್ಣು ಸ್ಮಾರಕ ನಿರ್ಮಾಣದ ಬಗ್ಗೆ ಸ್ವತಃ ತಾವೇ ಮುತುವರ್ಜಿ ವಹಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ವಿಷ್ಣು ಸ್ಮಾರಕ ನಿರ್ಮಾಣದ ಕಾಮಗಾರಿ ಆರಂಭವಾಗಲಿದೆ. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕದ ಬಗ್ಗೆ ಭಾರತಿ ವಿಷ್ಣುವರ್ಧನ್ ಸಂತಸ ವ್ಯಕ್ತ ಪಡಿಸಿ, ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದರು.

ನಗರದಲ್ಲಿ ಮಾತನಾಡಿದ ಭಾರತಿ ವಿಷ್ಣುವರ್ಧನ್ ಈ ಸ್ಮಾರಕ ಅಭಿಮಾನಿಗಳು ಹಾಗೂ ವಿಷ್ಣು ಅವ್ರಿಗೆ ಅರ್ಪಿಸುತ್ತೇವೆ. ವಿಷ್ಣುವರ್ಧನ್ ಅವರ ಕನಸು ಕೂಡ ಇದೆ ಆಗಿತ್ತು. ಈಗ ಎಲ್ಲಾ ಅಡೆತಡೆ ಬಳಿಕ ಸಿಎಂ ಕುಮಾರಸ್ವಾಮಿ ಅವರ ಸಹಾಯದಿಂದ ಸ್ಮಾರಕದ ಕಾಮಗಾರಿ ಶುರುವಾಗಿರೋದು ಸಂತಸ ತಂದಿದೆ. ಇಲ್ಲಿ ಸ್ಮಾರಕ ಹಾಗೂ ಕಟ್ಟಡ ಹೇಗೆ ನಿರ್ಮಾಣವಾಗುತ್ತೋ ಹಾಗೆಯೇ ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆ ಆಗಲಿದೆ.

ಈ ಸ್ಮಾರಕ ಅಭಿಮಾನಿಗಳ ಹಾಗೂ ಸಾರ್ವಜನಿಕರ ಸ್ವತ್ತು. ಇಲ್ಲಿ ಫಿಲ್ಮ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮ್ಯೂಸಿಯಂ ತಲೆ ಎತ್ತಲಿದೆ ಅಂತಾ ಭಾರತಿ ವಿಷ್ಣುವರ್ಧನ್ ಮಾಹಿತಿ ಕೂಡ ನೀಡಿದರು.

Leave a Reply