ಬಿಜೆಪಿ ಸೇರಲು ನನಗೆ 40 ಕೋಟಿ ಆಫರ್ ನೀಡಿದ್ದರು – ಬಿಜೆಪಿ ಬಣ್ಣ ಬಯಲು ಮಾಡಿದ ಶಾಸಕ ಮಹದೇವ್

ನಿಜಕ್ಕೂ ಬಿಜೆಪಿ ನಾಯಕರು, ಅದರಲ್ಲೂ ಯಡಿಯೂರಪ್ಪನವರ ಸ್ಥಿತಿ ನೋಡಿ ನಗಬೇಕೋ, ಅಳಬೇಕೊ ತಿಳಿಯುವುದಿಲ್ಲ. ಮೂರು-ಮೂರು ದಿನಕ್ಕೊಮ್ಮೆ ಸರ್ಕಾರ ಪತನಗೊಳಿಸಲು ಹರಸಾಹಸ ಪಟ್ಟು, ಕಾಂಗ್ರೆಸ್ – ಜೆಡಿಎಸ್ ಶಾಸಕರು ಉಗಿದು ಅಟ್ಟಿದ ಮೇಲೆ ರಾಜ್ಯದ ಜನರ ಮುಂದೆ ನಗೆಪಾಟಲಾಗುವುದು ಬಿಜೆಪಿ ನಾಯಕರಿಗೆ ಹವ್ಯಾಸವಾಗಿ ಬಿಟ್ಟಿದೆ. ವಿಪರ್ಯಾಸವೆಂದರೆ, ರಾಜ್ಯದ ಜನರು ಸಹ ಇವರಿಗೆ ಎಷ್ಟು ಚೀಮಾರಿ ಹಾಕಿದರೂ ಬುದ್ದಿ ಬರುವುದಿಲ್ಲ, ದಿನ ಸಾಯುವವರಿಗೆ ಆಳುವವರು ಯಾರು ಎಂದು ಅವರನ್ನು ತಿರಸ್ಕರಿಸಿಬಿಟ್ಟಿದ್ದಾರೆ. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ, ವಿರೋಧ ಪಕ್ಷದ ಜವಾಬ್ದಾರಿಯನ್ನು ಮರೆತು ಸಂವಿಧಾನಕ್ಕೆ ದಕ್ಕೆ ಬರುವಂತೆ ನಡೆದುಕೊಳ್ಳುತ್ತಿರುವುದು ಅಸಹ್ಯಕರ.

ಎರಡು ದಿನಗಳ ಹಿಂದೆ, ಮಾಧ್ಯಮಗಳು ಸಿಕ್ಕಿದ್ದೇ ಸೀರುಂಡೆ ಎಂಬಂತೆ ಟಿಆರ್ಪಿ ಗಳಿಸಲು ಅತ್ಯುತ್ಸಾಹದಿಂದ ಮೈತ್ರಿ ಸರ್ಕಾರದ ಪತನಕ್ಕೆ ಕೌಂಟ್ ಡೌನ್ ಹಾಕುತ್ತಿದ್ದದ್ದನು ನೀವು ಗಮನಿಸಿರುತ್ತೀರಾ. ಕಾಂಗ್ರೆಸ್ – ಜೆಡಿಎಸ್ ಶಾಸಕರೆಲ್ಲ ಇನ್ನೇನು ರಾಜೀನಾಮೆ ಕೊಟ್ಟೆ ಬಿಡುತ್ತಾರೆ, ಹೀಗಾಗಿ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಂಬಿಸುತ್ತಿದ್ದ ಸುದ್ದಿ ವಾಹಿನಿಗಳು, ಸ್ವತಃ ರಾಜ್ಯಾಧ್ಯಕ್ಷರು, ಇದು ಕೇವಲ ವದಂತಿಯಷ್ಟೇ. ಈ ಸುದ್ದಿಗೆ ಯಾವುದೇ ತಿರುಳಿಲ್ಲ ಎಂದು ಹೇಳಿದರು ಅದನ್ನು ಪ್ರಸಾರ ಮಾಡಿದರೆ ಜನಕ್ಕೆ ಸತ್ಯಂಶ ತಿಳಿದು ಎಲ್ಲಿ ಟಿಆರ್ಪಿಗೆ ಹೊಡೆತ ಬೀಳುತ್ತದೋ ಎಂದು ಅದನ್ನು ಬಹುತೇಕ ಮಾಧ್ಯಮಗಳು ಪ್ರಸಾರ ಮಾಡಲೇ ಇಲ್ಲ.

ಅಲ್ಲದೆ ಪಿರಿಯಾಪಟ್ಟಣ ಶಾಸಕ ಮಹದೇವು ಅವರು ಬಿಜೆಪಿಯ ಅಸಲಿ ಬಣ್ಣ ಬಯಲು ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಹೀಗೆ ಬಿಜೆಪಿಯ ಬಣ್ಣ ಬಯಲು ಮಾಡಿರುವುದು ಬೇರೆ ವಿಷಯ. ಬಿಜೆಪಿಗೆ ಸೇರಲು ನನಗೆ 30 – 40 ಕೋಟಿ ಆಫರ್ ನೀಡಿದ್ದರು ಎಂದು ಹೇಳುವ ಮೂಲಕ ಪಿರಿಯಾಪಟ್ಟಣ ಶಾಸಕ ಮಹದೇವು  ಹೇಳಿದ್ದಾರೆ.

ನಮಗೆ 30-40 ಕೋಟಿ ತಂದು ರೂಮಿನಲ್ಲಿ ಇಟ್ಟಿದ್ದರು. ಆಗ ನಾನು ಹಣ ತೆಗೆದುಕೊಂಡು ಹೋಗುತ್ತಿರೋ ಅಥವಾ ಎಸಿಬಿಗೆ ತಿಳಿಸಬೇಕೋ ಎಂದು ಎಚ್ಚರಿಕೆ ನೀಡಿದೆ ಎಂದ ತಿಳಿಸಿದೆ. ಮೂರು ಬಾರಿ ಹಣ ತಂದಿದ್ದರು. ನಾವು ಸತ್ತಾಗ ಮಣ್ಣು ಹಾಕಿಕೊಂಡು ಹೋಗೋದು, ಹಣ ತೆಗೆದುಕೊಂಡು ಹೋಗಲ್ಲ. ಹೀಗಾಗಿ ಹಣಕ್ಕೆ ನಮ್ಮ ಶರೀರವನ್ನು ಮಾರಾಟ ಮಾಡಿಕೊಳ್ಳಬಾರದು ಎಂಬುದು ನಮ್ಮ ನಿರ್ಧಾರವಾಗಿದೆ. ಇಲ್ಲವೆಂದಲ್ಲಿ ನಾವು 40 ಕೋಟಿ ತೆಗೆದುಕೊಂಡು ಪಿರಿಯಾ ಪಟ್ಟಣವನ್ನು ಬಿಟ್ಟು ನೆಮ್ಮದಿಯಾಗಿ ಹೋಗಿ ಜೀವನ ಮಾಡಬಹುದಿತ್ತು. ಹೀಗಾಗಿ ಕಲುಷಿತ ರಾಜಕರಾಣ ಮಾಡಿಬಿಟ್ಟಿದೆ. ಅದಕ್ಕೆ ಯುವಕರು ತಲೆ ಕೊಡೋದು ಬೇಡ ಎಂದು ಹೇಳಿದರು.

Leave a Reply