ಕೃಷಿ ಸುಧಾರಣೆಗೆ ಪಿಎಂ ಮೋದಿ ರಚಿಸಿರುವ ದೇಶದ 10 ಅತ್ಯುನ್ನತ ಸಿಎಂಗಳ ಸಮಿತಿಯಲ್ಲಿ ಕುಮಾರಣ್ಣನಿಗೆ ಎರಡನೇ ಸ್ಥಾನ…!

ದೇಶದಲ್ಲಿ ಕೃಷಿಕರ ಸ್ಥಿತಿ ಹೀನಾಯವಾಗಿದೆ. 2014ರಲ್ಲಿ ನರೇಂದ್ರ ಮೋದಿ ರೈತರ ಆದಾಯವನ್ನು 2019ರ ಒಳಗೆ ದುಪ್ಪಟ್ಟು ಆಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅವರ ಆಡಳಿತಾವಧಿಯಲ್ಲಿ ರೈತರ ಜೀವನ ನೆಲ ಕಚ್ಚಿತು. ಬಿಜೆಪಿ ಆಡಳಿತ ರಾಜ್ಯಗಳು ಸೇರಿ ದೇಶದ ಎಲ್ಲ ಭಾಗದ ರೈತರು ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಕಳೆದ ವರುಷ ಪ್ರತಿಭಟನೆ ನಡೆಸಿದರು. ಆದರೆ ಪಿಎಂ ಮೋದಿ ಅವರ ಸಮಸ್ಯೆ ಆಲಿಸುವುದಿರಲಿ, ಮಾನ್ಯವ್ಯತೆ ದೃಷ್ಟಿಯಿಂದಲೂ ಸಹ ಒಂದು ಮಾತನಾಡಿಸಲಿಲ್ಲ. ಆದರೂ ಈಗ ಮತ್ತೆ ಅವರು ಪ್ರಧಾನಿಯಾಗಿದ್ದಾರೆ.

ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕೃಷಿ ಕ್ಷೇತ್ರದ ಸುಧಾರಣೆ ಕಡೆಗೆ ಕೊನೆಗೂ ಮೋದಿ ಅವರು ಗಮನ ಹರಿಸಿದಂತಿದೆ. ಆದ್ದರಿಂದ ರೈತರ ಕಷ್ಟವನ್ನು ಆಲಿಸಿ, ಇನ್ನೊಂದು ವರ್ಷದಲ್ಲಿ ಕೃಷಿಕರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ದೇಶದ ಹತ್ತು ಅತ್ಯುನ್ನತ ಸಿಎಂಗಳಿಂದ ಕೂಡಿರುವ ಒಂದು ಸಮಿತಿ ರಚಿಸಿದ್ದಾರೆ. ಈ ಸಮಿತಿಯ ಸಂಚಾಲಕರಾಗಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್(ಬಿಜೆಪಿ) ಅವರನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕ ಮಾನ್ಯ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇದು ಕನ್ನಡಿಗರು ಹೆಮ್ಮೆ ಪಡುವಂತ ವಿಷಯ!

ರೈತರ ಮೇಲೆ ಕುಮಾರಸ್ವಾಮಿ ಅವರಿಗೆ ವಿಶೇಷ ಕಾಳಜಿ ಹಾಗು ಪ್ರೀತಿ ಇರುವುದನ್ನು ಯಾರು ಅಲ್ಲಗಡಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ಸಿಗದಿದ್ದರೂ ಬರೋಬ್ಬರಿ 50 ಸಾವಿರ ಕೋಟಿ ರೈತರ ಬೆಳೆ ಸಾಲ ಮನ್ನಾ ಮಾಡಿ ಇಡೀ ದೇಶವೇ ಕರ್ನಾಟಕ ಸರ್ಕಾರವನ್ನು ಶ್ಲಾಘಿಸುವಂತೆ ಮಾಡಿ ಬೇರೆ ಮುಖ್ಯಮಂತ್ರಿಗಳಿಗೆ ಮಾದರಿಯಾದರು. ಕೇವಲ ಸಾಲ ಮನ್ನಾ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲಾ, ರೈತರು ಇನ್ನೆಂದಿಗೂ ಮತ್ತೆ ಸಾಲಕ್ಕಾಗಿ ಕೈ ಚಾಚದಂತೆ ಮಾಡಬೇಕು ಎಂಬ ಗುರಿಯೊಂದಿಗೆ, ಇಸ್ರೇಲ್ ಮಾದರಿ ಕೃಷಿ ಹಾಗು ಕೃಷಿಯಲ್ಲಿ ಹಲವಾರು ನೂತನ ತಂತ್ರಜ್ಞಾನ ಅಳವಡಿಕೆಯ ಬಗ್ಗೆ ರಾಜ್ಯದೆಲ್ಲೆಡೆ ಸಾರುತ್ತಿದ್ದಾರೆ. ಇದನ್ನು ಗಮನಿಸಿರುವ ಪ್ರಧಾನಿ ಮೋದಿ ಅವರು ದೇಶದ ಅತ್ಯನ್ನತ ಸಿಎಂಗಳ ಪಡೆಯಲ್ಲಿ ಕುಮಾರಸ್ವಾಮಿ ಅವರಿಗೆ ಎರಡನೇ ಸ್ಥಾನ ನೀಡಿ ಗೌರವಿಸಿದ್ದಾರೆ.

ಈ ವಿಶೇಷ ಸಮಿತಿಯ ಸದಸ್ಯರು ಕೃಷಿ ರಾಫ್ರು ಹೆಚ್ಚಳ, ಕೃಷಿಯಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆ, ಆಹಾರ ಸಂಸ್ಕರಣೆಯಲ್ಲಿ ಪ್ರಗತಿ, ಜಾಗತಿಕ ಮಾನದಂಡಗಳ ಅನುಸಾರ ಕೃಷಿಯಲ್ಲಿ ತಂತ್ರಜ್ಞಾನಗಳ ಅಳವಡಿಕೆ ಕುರಿತು ನಿಯಮಗಳನ್ನು ರೂಪಿಸಿ ಶಿಫಾರಸು ಮಾಡಲಿದ್ದಾರೆ.

Leave a Reply