ಮೋದಿ ಹೆಸರು ಹೇಳಿದರೆ ಬಾಯಿಗೆ ಬೂಟ್ ಹಾಕ್ತಿವಿ: ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಚೆಕ್ ಮೂಲಕ ಲಂಚ ಪಡೆದು ಮುಖ್ಯಮಂತ್ರಿಯಾಗಿದ್ದಾಗ ಜೈಲಿಗೆ ಹೋಗಿ ರಾಜ್ಯದ ಮಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮುಖ ನೋಡಿ, ಅಥವಾ ಅಭ್ಯರ್ಥಿಗಳ ಮುಖ ನೋಡಿ ರಾಜ್ಯದ ಜನತೆ 25 ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಹೇಗೆ ಗೆಲ್ಲಿಸಿಲ್ಲವೋ, ಅದೇ ರೀತಿ ದೇಶದ ಯಾವುದೇ ರಾಜ್ಯಗಳಲ್ಲಿ ಅಲ್ಲಿನ ನಾಯಕರು ಅಥವಾ ಅಭ್ಯರ್ಥಿಗಳ ಮುಖ ನೋಡಿ ಬಿಜೆಪಿ ಪಕ್ಷಕ್ಕೆ ಬಹುಮತ ನೀಡಿಲ್ಲ. ಕೇವಲ ನರೇಂದ್ರ ಮೋದಿ ಅವರಿಗಾಗಿ ಜನ ಇವರಿಗೆ ಮತ ಹಾಕಿದ್ದಾರೆ.

ನರೇಂದ್ರ ಮೋದಿ ಅವರನ್ನು ಗೆಲ್ಲಿಸಿರುವುದು ಐದು ವರ್ಷ ಏನೋ ಸಾಧಿಸಿಬಿಟ್ಟಿದ್ದಾರೆ ಎಂದು ಅಲ್ಲ. ಅವರ ಗೆಲುವು ಕೇವಲ ಅವರು ಸಾರಿದ ನಕಲಿ ಹಿಂದುತ್ವ, ಬೇಡದಿರುವ ರೀತಿಯಲ್ಲಿ ದೇಶಭಕ್ತಿ, ದೇಶದ ದೊಡ್ಡ ದೊಡ್ಡ ಸುದ್ದಿ ವಾಹಿನಿಗಳನ್ನು ಕೊಂಡುಕೊಂಡು ಮೋದಿಯ ಹೊಗಳು ಭಟ್ಟರನ್ನಾಗಿ ಮಾಡಿಕೊಂಡಿದ್ದು, ಹೀಗೆ ಹಲವಾರು ಕುತಂತ್ರಗಳಿಂದ. ಮೋದಿಯನ್ನು ಸಾಕ್ಷಾತ್ ದೇವರ ರೂಪದಲ್ಲಿ, ಧರ್ಮ ರಕ್ಷಕನ ರೀತಿಯಲ್ಲಿ, ದೇಶ ರಕ್ಷಕನ ರೀತಿಯಲ್ಲಿ ಬಿಂಬಿಸಲು ಬಿಜೆಪಿ ಒಂದು ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸಕೊಂಡಿದೆ. ಇದು ಜನರಿಗೆ ಅರಿವಾಗುವ ತನಕ ದೇಶವು ಅಂಧಕಾರದಲ್ಲಿ ಮುಳುಗಿರುತ್ತದೆ.

ಬಿಜೆಪಿ ನಿರ್ಮಿಸಿಕೊಂಡಿರುವ ಹೊಗಳು ಭಟ್ಟರ ಸಾಮ್ರಾಜ್ಯದಲ್ಲಿ ಹಿಂದೂ ಪರ ಹೋರಾಟಗಾರರ ಸಂಘಗಳು ಸೇರಿವೆ. ರಾಮ ಮಂದಿರ ನಿರೀಕ್ಷೆಯಲ್ಲಿ ಹಾಗು ಹಿಂದೂ ರಾಷ್ಟ್ರದ ಕನಸನ್ನು ಹೊತ್ತಿರುವ ಈ ಸಂಘಗಳು ಮೋದಿ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಅವರನ್ನು ಆಯ್ಕೆ ಮಾಡಿದ್ದಾರೆ. ಹೀಗೆ ಮೋದಿಯನ್ನು ನಂಬಿಕೊಂಡಿರುವ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಬಿಜೆಪಿ ಸಂಸದರ ಜನುಮ ಜಾಲಾಡಿದ್ದಾರೆ.

ಐದು ಬಾರಿ ಗೆದ್ದು, ಇಪ್ಪತ್ತೈದು ವರ್ಷ ಆಡಳಿತ ನೀಡಿದ್ದರು ನೀವು ಮೋದಿ ಹೆಸರಿನಲ್ಲಿ ಮತ ಕೇಳುತ್ತೀರಲ್ಲ ನಿಮಗೆ ನಾಚಿಕೆ ಆಗಲ್ವ? ಮುಂದಿನ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿದರೆ ಬಾಯಿಗೆ ಬೂಟ್ ಹಾಕ್ತಿವಿ. ಐದು ವರ್ಷ ಸರಿಯಾಗಿ ಕೆಲಸ ಮಾಡಿ ಎಂದು ಅವರ ವಿರುದ್ಧ ಕಿಡಿಕಾರಿದ್ದಾರೆ. ಬಹುಷಃ ಈಗ ನಿದಾನವಾಗಿ ಬಿಜೆಪಿ ಬೆಂಬಲಿಗರಿಗೆ ಜ್ಞಾನೋಧಯವಾಗುತ್ತಿದೆ ಅನಿಸುತ್ತದೆ.

Leave a Reply