ಸ್ಥಳೀಯ ಭಾಷೆ ಕಲಿಕೆ ಕಡ್ಡಾಯ ಮಾಡಿ, ಇದರಿಂದ ಕನ್ನಡಿಗರಿಗೆ ಉದ್ಯೋಗಾವಕಾಶ ಹೆಚ್ಚುತ್ತದೆ : ಸಿಎಂ ಹೆಚ್.ಡಿ ಕುಮಾರಸ್ವಾಮಿ

ಮಗುವನ್ನು ಚಿವುಟಿ, ನಂತರ ತೊಟ್ಟಿಲು ತೂಗುವುದರಲ್ಲಿ ಕೇಂದ್ರ ಸರ್ಕಾರವು ನಿಪುಣವಾಗಿದೆ. ಕರ್ನಾಟಕ ರಾಜ್ಯದಲ್ಲಿ 2014ರ ತನಕ ಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆ ಬರಿಯುವ ಸೌಲಭ್ಯ ಅಭ್ಯರ್ಥಿಗಳಿಗೆ ಇತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಕೇಂದ್ರ ಸರ್ಕಾರ ಆ ಸೌಲಭ್ಯವನ್ನು ನಿಷಿದ್ಧಗೊಳಿಸಿ ಹಿಂದಿ ಹೇರಿಕೆ ಮಾಡಿತ. ನಂತರ ಹೇಗೆ ದಕ್ಷಿಣ ಭಾರತದ ಹೇಗೆ ಹಿಂದಿ ಹೇರಿಕೆ ಮಾಡಲು ವ್ಯರ್ತ ಪ್ರಯತ್ನ ಮಾಡಿದರು ಎಂದು ನಿಮಗೆ ಗೊತ್ತೇ ಇದೆ.

ಈಗ ನಮ್ಮ ನಾಡಿನ ನೆಲ, ಜಲ, ಭಾಷೆ ಹಾಗು ಸಂಸ್ಕೃತಿಗೆ ಆದ್ಯತೆ ನೀಡುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬಂದಿರುವ ಕಾರಣ, ತಕ್ಷಣವೇ ಸಿಎಂ ಕುಮಾರಸ್ವಾಮಿ ಅವರು ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದರು.

ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಇಂದು ಕನ್ನಡಿಗರು ಕನ್ನಡದಲ್ಲೂ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಕೇಂದ್ರ ಸರ್ಕಾರದ ಈ ನಡೆಗೆ, ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ಧನ್ಯವಾದ ಸೂಚಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಅಂತೆಯೇ 2014ರಲ್ಲಿದ್ದಂತೆ ಬ್ಯಾಂಕಿಂಗ್ ನೌಕರಿ ಪಡೆಯಲು 10ನೇ ತರಗತಿ ವರೆಗೆ ಸ್ಥಲಿಯ ಭಾಷೆ ಕಲಿಕೆ ಕಡ್ಡಾಯ ಮಾಡಿ. ಇದರಿಂದ ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಬೇಡಿಕೆ ಇಟ್ಟಿದ್ದಾರೆ.

Leave a Reply