ಕಂಡ ಕಂಡ ವಸ್ತುವಿನ ಬೆಲೆಯನ್ನು ಏರಿಸಿ ಜನರ ಜೀವನ ಬರ್ಬಾದ್ ಮಾಡಲು ಹೊರಟಿರುವ ಮೋದಿ ಸರ್ಕಾರ…!

ಕಳೆದ ಒಂದು ವಾರದಿಂದ ಸುದ್ದಿ ವಾಹಿನಿಗಳು ‘ದೇಶದ ಜನರಿಗೆ ಮೋದಿ ಭರ್ಜರಿ ಕೊಡುಗೆ ನೀಡುತ್ತಾರೆ’, ‘ಮೋದಿ ಲೆಕ್ಕ, ಜನರಿಗೆ ಪಕ್ಕ’ ಎಂದು ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಜನರಿಗೆ ಚಂದಮಾಮ ಕತೆ ಪ್ರಸಾರ ಮಾಡುತ್ತಲೇ ಇದ್ದರು. ಎಷ್ಟೇ ಆದರೂ ಬಿಜೆಪಿ ಪಕ್ಷವು ಅವರಿಗೆ ದುಡ್ಡು ಕೊಟ್ಟಿರುವುದೇ ಅದನ್ನು ಮಾಡಲು ಅಲ್ಲವೇ! ಆದ್ದರಿಂದ ಅದು ಆಶ್ಚರ್ಯದ ಸಂಗತಿಯೇನಲ್ಲ. ನಿಜಕ್ಕೂ ಆಶ್ಚರ್ಯದ ಸಂಗತಿ ಎಂದರೆ, ಆಶ್ಚರ್ಯ ಅನ್ನುವುದಕ್ಕಿಂತಲೂ ಹೇಸಿಗೆಯ ವಿಷಯವೆಂದರೆ ನೆನ್ನೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನನ್ನ ಅತ್ಯುತ್ತಮ ಬಜೆಟ್ ಎಂದು ಕೊಂಡಾಡಿ ಜನರನ್ನು ದಾರಿ ತಪ್ಪಿಸುತ್ತಿರುವುದು.

ಪೆಟ್ರೋಲ್, ಡಿಸೇಲ್, ಚಿನ್ನ, ಬೆಲೆಬಾಳುವ ಲೋಹ, ಪಿವಿಸಿ ಪೈಪ್, ತಂಬಾಕು ಉತ್ಪನ್ನ, ಮಾರ್ಬಲ್, ಸಿಸಿಟಿವಿ ಕ್ಯಾಮೆರಾ, ಡಿವಿಡಿ, ಆಟೋ ಬಿಡಿಭಾಗ, ಒಎಫ್‌ಸಿ ಕೇಬಲ್, ರಬ್ಬರ್, ಗೋಡಂಬಿ, ಪ್ಲಾಸ್ಟಿಕ್, ಎಸಿ ಹೀಗೆ ಕಂಡ ಕಂಡ ವಸ್ತುವಿನ ಬೆಲೆ ಏರಿಕೆ ಮಾಡಲಾಗಿದೆ. ಇದನ್ನು ಯಾರಾದರು ಮೋದಿ ಅವರೇ ಹೇಳುವಂತೆ ” ಸಿಟಿಝನ್ ಫ್ರೆಂಡ್ಲಿ ಬಜೆಟ್ ” ಎಂದು ಕರೆಯಲು ಸಾಧ್ಯವೇ?

ಜನರು ದಿನನಿತ್ಯ ಉಪಯೋಗಿಸುವ ಎಲ್ಲ ಪದಾರ್ಥಗಳ ಮೇಲಿನ ಸುಂಕ ಹೆಚ್ಚಿಸಿ, ಅವರ ಜೀವನವನ್ನು ಬರ್ಬಾದ್ ಮಾಡಲು ಮೋದಿ ಸರ್ಕಾರ ಹೊರಟಿದೆ. ಇನ್ನು ಕರ್ನಾಟಕದ ಬಗ್ಗೆ ಅಂತೂ ಕೇಳುವಂತೆ ಇಲ್ಲ. ನಮ್ಮ ರಾಜ್ಯದ ಬಗ್ಗೆ ಬಜೆಟ್ ನಲ್ಲಿ ಒಂದು ಅಕ್ಷರ ಸಹ ಬರೆದಿಲ್ಲ. ದಕ್ಷಿಣ ಭಾರತದ ರಾಜ್ಯಗಳೆಂದರೆ ಈ ಹಿಂದಿ ನಾಯಕ್ರಿಗೆ ಯಾವ ಮಟ್ಟಗಿನ ಅಸಡ್ಡೆ ಎಂಬುದನ್ನು ನೀವೇ ಅರಿತುಕೊಳ್ಳಿ.

ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು, ನನ್ನ ಜೀವನದಲ್ಲೇ ಇಷ್ಟು ಕಳಪೆ ಬಜೆಟ್ ನೋಡಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಈ ಬಾರಿ ಬರೋಬ್ಬರಿ 7 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಇಡೀ ಪ್ರಪಂಚವೇ ಮಿಂಚಿನ ವೇಗದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವಾಗ ನಮ್ಮ ದೇಶ ಲಕ್ಷ ಕೋಟಿಗಟ್ಟಲೇ ಸಾಲ ಮಾಡಿ ಮಜಾ ಮಾಡುತ್ತ, ನಂತರ ಅದನ್ನು ಮರುಪಾವತಿಸಲು ತೆರಿಗೆ ರೂಪದಲ್ಲಿ ನಮ್ಮ ರಕ್ತ ಹೀರುತ್ತಿದೆ. ಇದೆ ಅಲ್ಲವೆ ಅಚ್ಛೇ ದಿನ್?

 

Leave a Reply