ಕಳ್ಳರು ದ್ರೋಹ ಬಗೆಯುತ್ತಿದ್ದರೂ, ರಾಜ್ಯದ ಹಿತಾಸಕ್ತಿಗೆ ಶ್ರಮಿಸುತ್ತಿರುವ ಸಿಎಂ ಕುಮಾರಸ್ವಾಮಿ…!

ಸರ್ಕಾರದ ಕೆಲಸ ದೇವರ ಕೆಲಸ ಎಂದು ಪ್ರಬಲವಾಗಿ ನಂಬಿರುವ ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಿನಕ್ಕೆ 16 ಘಂಟೆಗಳ ಕಾಲ ರಾಜ್ಯದ ಜನರ ಹಿತಕ್ಕಾಗಿ ಶ್ರಮಿಸುತ್ತಿರುವ ಏಕೈಕ ಮುಖ್ಯಮಂತ್ರಿ. ತಮ್ಮ ಅತ್ಯಾಧುನಿಕ ಯೋಜನೆಗಳಿಗೆ, ರೈತ ಪರ ಆಡಳಿತಕ್ಕೆ, ದಕ್ಷ ಕಾರ್ಯ ವೈಖರಿಗೆ ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಹತ್ತಿರದ ಸಾಕ್ಷಿಯಂದರೆ, ದೇಶದ ರೈತರ ಜೀವನ ಸುಧಾರಣೆಗೆ ಪ್ರಧಾನಿ ಮೋದಿ, ದೇಶದ 10 ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿಗಳ ಸಮಿತಿಯೊಂದನ್ನು ರಚಿಸಿ ಅದರಲ್ಲಿ ಕುಮಾರಸ್ವಾಮಿ ಅವರಿಗೆ ಎರಡನೇ ಸ್ಥಾನ ನೀಡಿರುವುದು.

ಆದರೆ ಈಗ ರಾಜ್ಯದ ರಾಜಕೀಯ ಸ್ಥಿತಿ ಅತ್ಯಂತ ಹೀನಾಯ ಮಟ್ಟಕ್ಕೆ ತಲುಪಿಬಿಟ್ಟಿದೆ. ಅಧಿಕಾರ ಪಿಚಾಚಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಿಎಂ ಕುರ್ಚಿ ಮೇಲೆ ಕುಳಿತು ದರ್ಪ ತೋರಲು, ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ದಿಕ್ಕರಿಸಿ, ಆಡಳಿತ ಪಕ್ಷದ ಶಾಸಕರಿಗೆ ಹಣ ಹಾಗು ಅಧಿಕಾರದ ಆಮಿಷವೊಡ್ಡಿ ಸರ್ಕಾರವನ್ನು ಪಠಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಇಂತಹ ಕೆಲಸವನ್ನು ಮಾಡುತ್ತಿರುವುದೇನು ಮೊದಲನೇ ಬಾರಿಯಲ್ಲ.

ಯಡಿಯೂರಪ್ಪ 2008ರಲ್ಲೇ ಒಮ್ಮೆ ಈ ದುಷ್ಕೃತ್ಯ ಮಾಡಿದ್ದರು. ಅದಕ್ಕೆ ತಕ್ಕ ಪ್ರತಿಫಲದಂತೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಬ್ಬ ಮುಖ್ಯಮಂತ್ರಿಯಾಗಿ ಜೈಲು ಶಿಕ್ಷೆ ಅನುಭವಿಸಿ ತಮ್ಮ ಮಾನ ಹಾಗು ರಾಜ್ಯದ ಮಾನವನ್ನು ಕಳೆದರು. ಈಗ ಮೈತ್ರಿ ಸರ್ಕಾರ ರಚನೆಯದಾಗಿನಿಂದಲೂ ಸುಮಾರು ಐದಕ್ಕೂ ಹೆಚ್ಚುಬಾರಿ ಆಪರೇಷನ್ ಕಮಲಾ ಮಾಡಲು ಹೆಣಗಾಡಿದ್ದಾರೆ, ಹಾಗೂ ಈಗಲೂ ಅದೇ ಪ್ರಯತ್ನದಲ್ಲಿ ಇದ್ದಾರೆ.

ಇಷ್ಟೆಲ್ಲ ಜಂಜಾಟದ ನಡುವೆಯೂ ಕುಮಾರಸ್ವಾಮಿ ಅವರು ಇಂದು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತಂತೆ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಸಕ್ಕರೆ ಸಚಿವ ಆರ್. ಬಿ. ತಿಮ್ಮಾಪುರ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮಂಡ್ಯ ಜಿಲ್ಲೆಯ ಶಾಸಕರು, ರೈತ ಮುಖಂಡರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply