ಬಜೆಟ್ ನಲ್ಲಿ ಕರ್ನಾಟಕ್ಕೆ ಶೂನ್ಯ ಆದರೆ ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ…!

ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಅಸಹ್ಯಕರ ಬೆಳವಣಿಗೆಗಳನ್ನು ನೀವು ಗಮನಿಸಿರುತ್ತೀರಾ. ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ಹಣ ಹಾಗು ಮಂತ್ರಿಗಿರಿಯ ಆಮಿಷವೊಡ್ಡಿ ಅಧಿಕಾರ ದಾಹಿ ಬಿಜೆಪಿ ಪಕ್ಷದವರು ಹೇಗೆ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಈಗಾಗಲೇ ಹಲವಾರು ಬಾರಿ ‘ಆಪರೇಷನ್ ಕಮಲಾ’ ಮಾಡಲು ಪ್ರಯತ್ನಿಸಿ ರಾಜ್ಯದ ಜನರಿಂದ ಅವರ ದುಷ್ಕೃತ್ಯಕ್ಕೆ ಚೀಮಾರಿ ಹಾಕಿಸಿಕೊಂಡಿದ್ದರೂ ಸಹ ಈಗ ಮತ್ತೆ ಅದೇ ಕೆಲಸ ಮಾಡಿ ಸರ್ಕಾರ ಪಥನಗೊಳಿಸಲು ಹೆಣಗಾಡುತ್ತಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಅತ್ಯಂತ ಕಳಪೆ ಬಜೆಟ್ ಎಂದು ಇಡೀ ದೇಶವೇ ಕ್ಯಾಕರಿಸಿ ಉಗಿದಿದೆ. ಅಲ್ಲದೆ ಕರ್ನಾಟಕದ ಜನತೆ ಬೊರೊಬ್ಬರಿ 25 ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಕೃತಜ್ಞತೆಗಾದರು ಕೇಂದ್ರ ಬಜೆಟ್ ನಲ್ಲಿ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡಬೇಕಿತ್ತು. ಆದರೆ ಮೋದಿ ತಮ್ಮ ದಕ್ಷಿಣ ಭಾರತ ರಾಜ್ಯಗಳ ಮೇಲಿನ ತಿರಸ್ಕಾರವನ್ನು ಮುಂದುವರಿಸಿದ್ದಾರೆ.

ಅನುದಾನ ಕೊಡದೆ ಇದ್ದರು, ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷವನ್ನು ಕೆಡವಲು ಸಾವಿರಾರು ಕೋಟಿ ಚಲ್ಲುತ್ತಿದ್ದರೆ. ಪ್ರತಿಯೊಬ್ಬ ಶಾಸಕನಿಗೂ ಮೂವತ್ತರಿಂದ ನಲವತ್ತು ಕೋಟಿ ಕೊಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಭ್ರಷ್ಟಾಚಾರವೇ ಮಾಡುವುದಿಲ್ಲ ಎಂದು ಬೀಗುವ ಬಿಜೆಪಿ ಪಕ್ಷದವರ ಬಳಿ ಸಾವಿರಾರು ಕೋಟಿ ಎಲ್ಲಿಂದ ಬಂತೋ ನಾ ಕಾಣೆ!

Leave a Reply