ಆರಕ್ಷಕರ ರಕ್ಷಕ ಸಿಎಂ ಕುಮಾರಸ್ವಾಮಿ…!

ಪೊಲೀಸರು ಲಂಚ ಪಡೆಯುತ್ತಾರೆ. ಪೊಲೀಸರು ಸೋಂಬೇರಿಗಳು ಎಂದು ಕೆಲವು ಜನ ದೂಷಿಸುತ್ತಾರೆ. ಆದರೆ ಪೊಲೀಸ್ ಕೆಲಸ ಮಾಡುವವರಿಗೆ ಮಾತ್ರ ಅದರ ಕಷ್ಟದ ಅರಿವಾಗಿರುತ್ತದೆ. ಅವರೆಕಾಯಿಯಲ್ಲಿ ಒಂದೆರಡು ಹುಳ ಸಿಗುತ್ತದೆ ಎಂದು ಎಲ್ಲ ಅವರೆಕಾಯಿಗಳನ್ನು ದೂಷಿಸಲು ಸಾಧ್ಯವಿಲ್ಲ. ಅಂತೆಯೇ ಎಲ್ಲೋ ಕೆಲವು ಕೆಟ್ಟ ಅಧಿಕಾರಿಗಳಿಂದ ಇಡೀ ಪೊಲೀಸ್ ಇಲಾಖೆಯನ್ನೇ ದೂಷಿಸುವುದು ತಪ್ಪಾಗುತ್ತದೆ. ಅಲ್ಲದೆ ಈಗ ಪೊಲೀಸರು ಲಂಚ ಪಡೆಯುವ ವಿಷಯದಲ್ಲಿ ಸುಧಾರಣೆ ಕಂಡುಬಂದಿದೆ.

ಪೊಲೀಸರು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು, ತಮ್ಮ ವೈಯುಕ್ತಿಕ ಜೀವನವನ್ನು ಕಡೆಗಿಟ್ಟು, ಕೆಲವೊಮ್ಮೆ ಅವರ ಪ್ರಾಣವನ್ನು ಮುಡುಪಾಗಿಟ್ಟು ನಮ್ಮ ರಕ್ಷಣೆಗಾಗಿ, ನಾವು ಪ್ರಶಾಂತವಾಗಿ ಜೀವನ ನಡೆಸಲು ಶ್ರಮಿಸುತ್ತಾರೆ. ಕೇವಲ ಒಂದು ದಿನ ಪೊಲೀಸರು ಇಲ್ಲದ ಜಗತ್ತನ್ನೂ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ.

ಇಂತಹ ಅರಕ್ಷಕರಿಗೆ ಸೂಕ್ತ ಗೌರವ ಸೂಚಿಸುವುದು ಅತ್ಯವಶ್ಯಕ. ಇದನ್ನು ಗಮನಿಸಿರುವ ಮಾನ್ಯ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ಪೋಲೀಸರ ವೇತನವನ್ನು 12.5% ಹೆಚ್ಚಿಸದ್ದಾರೆ.

Leave a Reply