ಒಂದು ವರ್ಷದಿಂದ ಸರ್ಕಾರ ಇಂದು ಬೀಳುತ್ತದೆ ನಾಳೆ ಬೀಳುತ್ತದೆ ಎಂದು ಸುದ್ದಿ ವಾಹಿನಿಗಳು ಅಪಪ್ರಚಾರ ಮಾಡುತ್ತಿದ್ದರೂ, ವಿರೋಧ ಪಕ್ಷ ಬಿಜೆಪಿ ತನ್ನ ಜವಾಬ್ದಾರಿ ಮರೆತು ಸರ್ಕಾರವನ್ನು ಕೆಡವಲು ಹೆಣಗಾಡುತ್ತಿದ್ದರೂ, ಕುಮಾರಸ್ವಾಮಿ ಅವರು ಮಾತ್ರ ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೋ ಅಷ್ಟು ದಿನ ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂದು ದಿನಕ್ಕೆ 16 ಘಂಟೆಗಳ ಕಾಲ ಶ್ರಮಿಸಿ ವಿವಿಧ ಜನಪರ ಯೋಜನೆಗಳನ್ನು ತಮ್ಮ ಹದಿನಾಲ್ಕು ತಿಂಗಳ ಅಧಿಕಾರ ಅವಿಧಿಯಲ್ಲಿ ಜಾರಿಗೆ ತಂದಿದ್ದಾರೆ. ದುರದೃಷ್ಟದಿಂದ ಬಿಜೆಪಿ ಪಕ್ಷದ ಆಪರೇಷನ್ ಕಮಲಾ ಕುತಂತ್ರದಿಂದ ಹೆಚ್.ಡಿ ಕುಮಾರಸ್ವಾಮಿ ಅವರ ಮುಂದಾಳತ್ವದ ಮೈತ್ರಿ ಸರ್ಕಾರ ನೆನ್ನೆ ಪತನಗೊಂಡಿತು. ನಂಬಿದವರು ದ್ರೋಹ ಬಗೆದು, ವಿರೋಧಿಗಳು ತಾವು ಊರಲ್ಲಿ ಇಲ್ಲದ ಸಮಯವನ್ನು ದುರುಪಯೋಗ ಪಡಿಸಿಕೊಂಡು ಬೆನ್ನಿಗೆ ಚೂರಿ ಹಾಕಿದರೂ ಸಹ, ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಕೊನೆಯ ದಿನವೂ ಕೂಡ ಜನರಿಗೆ ಒಳ್ಳೆಯದು ಆಗಲಿ ಎಂದು, ರಾಜೀನಾಮೆ ಮಾಡುವ ಮುನ್ನ ಜನರಿಗೆ ಬಂಪರ್ ಕೊಡುಗೆಯೊಂದನ್ನು ನೀಡಿದ್ದಾರೆ!

ಅಧಿಕಾರಕ್ಕೆ ಬಂದೊಡನೆ ಕೊಟ್ಟ ಮಾತಿನಂತೆ ರೈತರ ಬೆಳೆ ಸಾಲ ಮನ್ನಾ ಮಾಡಿ ಇಡೀ ದೇಶವೇ ಕರ್ನಾಟಕದ ಸರ್ಕಾರದ ಅತ್ಯುತ್ತಮ ಆಡಳಿತವನ್ನು ಮೆಚ್ಚಿಕೊಳ್ಳುವಂತೆ, ಬೇರೆ ರಾಜ್ಯದ ಜನತೆ ಅಸೂಯೆ ಪಡುವಂತೆ ಮಾಡಿದ್ದ ಕುಮಾರಸ್ವಾಮಿ ಅವರು ಇಂದು ಪತ್ರಿಕಾ ಘೋಷ್ಟಿ ನಡೆಸಿ ಖಾಸಗಿ ಸಾಲ ಮನ್ನಾ ಘೋಷಿಸಿದ್ದಾರೆ!

ಋಣಮುಕ್ತ ಕಾಯ್ದೆಯನ್ನ ಜಾರಿಗೆ ತರುವ ಮೂಲಕ ರಾಜ್ಯದ ಜನರಿಗೆ ಬಂಪರ್ ಉಡುಗೊರೆ ನೀಡಿದ್ದಾರೆ. ಒಂದು ಲಕ್ಷದ ಇಪತ್ತು ಸಾವಿರ ರೂ.ಗಳ ಆದಾಯ ಹೊಂದಿರುವ ಜನರು ಪಡೆದುಕೊಂಡಿರುವ ಖಾಸಗಿ ಸಾಲ, ಲೇವಾದೇವಾದಿಗಳೊಡನೆ ಪಡೆದುಕೊಂಡ ಸಾಲ ಎಸಿದ್ದರು ಅದು ಮನ್ನಾ ಆಗಲಿದೆ ಎಂದು ಘೋಷಿಸಿದ್ದಾರೆ. ಹಾಗು ರಾಜ್ಯದ ಜನ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದ್ದಾರೆ.