ಸುಮ್ಮನೆ ಬಾಯಿ ಚಪ್ಪಲಕೊಸ್ಕರ ಆರೋಪ ಮಾಡೋದಲ್ಲ : ಹೆಚ್‍ಡಿಕೆ ಟಾಂಗ್ ಗೆ ಯಡಿಯೂರಪ್ಪ ತತ್ತರ!

ಅಂತೂ ಇಂತೂ ಬಿಜೆಪಿ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ತಮ್ಮ ಕುಚೋದ್ಯದಿಂದ ರಾಜ್ಯದ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ. ಯಡಿಯೂರಪ್ಪನವರು ಹೇಗೆ ಮುಖ್ಯಮಂತ್ರಿ ಆಗಿದ್ದರೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ದೇಶದ ಬಹುತೇಕ ಮಾಧ್ಯಮಗಳು ಬಿಜೆಪಿ ಪ್ರಾಯೋಜಿತವಾಗಿರುವ ಕಾರಣ ಯಡಿಯೂರಪ್ಪ ಅಧಿಕಾರಕೊಸ್ಕರ ನಡೆಸಿದ ಕುತಂತ್ರದ ಬಗ್ಗೆ ಯಾವ ಸುದ್ದಿ ವಾಹಿನಿಯು ಕೂಡ ಪ್ರಸಾರ ಮಾಡದಿದ್ದರೂ, ಅದು ಬಹಿರಂಗ ರಹಸ್ಯ.

ಇದು ಮೂರನೇ ಬಾರಿಗೆ ಯಡಿಯೂರಪ್ಪನವರು ಜನಾದೇಶವಿಲ್ಲದಿದ್ದರೂ ಮುಖ್ಯಮಂತ್ರಿ ಆಗುತ್ತಿರುವುದು. ಮೊದಲ ಬಾರಿ ಎಂಟು ದಿನಗಳು, ಎರಡನೇ ಬಾರಿ ಮೂರು ದಿನಗಳು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಈ ಬಾರಿ ಎಷ್ಟು ದಿನ ಅಧಿಕಾರ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆದರೆ ಜನ ಯಡಿಯೂರಪ್ಪನವರಿಗೆ ಬಹುಮತ ನೀಡಿ ಮುಖ್ಯಮಂತ್ರಿ ಪದವಿ ನೀಡಿದಾಗ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿ, ಮುಖ್ಯಮಂತ್ರಿಯಾಗಿದ್ದಾಗ ಜೈಲಿಗೆ ಹೋದ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆ ಪಡೆದುಕೊಂಡು ದೇಶದೆಲ್ಲೆಡೆ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದರು.

ಅಲ್ಲದೆ ರಸ ಗೊಬ್ಬರ ಕೇಳಿಕೊಂಡು ಬಂದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಎರಡು ರೈತ ಕುಟುಂಬವನ್ನು ಅನಾಥ ಮಾಡಿದ್ದು ಕೂಡ ಇವರ ಸಾಧನೆಯ ಕಿರೀಟದ ಒಂದು ಗರಿ ಆಗಿದೆ. ಈ ಬಾರಿ ಯಾವ ರೀತಿ ಆಡಳಿತ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇಂದು ಯಡಿಯೂರಪ್ಪನವರು ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸಿದರು. ಈ ಹಿನ್ನಲೆಯಲ್ಲಿ ಪ್ರತಿಪಕ್ಷದ ನಾಯಕರು ಅಭಿನಂದಿಸಿ ಅವರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ಎರಡನೇ ಅತಿ ದೊಡ್ಡ ವಿರೋಧ ಪಕ್ಷವಾಗಿರುವ ಜೆಡಿಎಸ್ ಪಕ್ಷದ ನಾಯಕ, ಹಂಗಾಮಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು, ‘ಯಡಿಯೂರಪ್ಪನವರೇ ನೀವು ಯಾವ ರೀತಿ ಅಧಿಕಾರಕ್ಕೆ ಬಂದಿದ್ದೀರಾ ಎಂಬುದನ್ನು ನಾನು ಪ್ರಸ್ತಾಪ ಮಾಡುವ ಅಗತ್ಯವಿಲ್ಲ. ಆದರೆ ನಾನು ಸಮ್ಮಿಶ್ರ ಸರ್ಕಾರದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬ ಸತ್ಯಂಶವನ್ನು ಈಗಲಾದರೂ ರಾಜ್ಯದ ಜನಕ್ಕೆ ತಿಳಿಸಿ. ನೀವು ಯಾವ ರೀತಿ ಆಧಾರ ರಹಿತ ಆರೋಪಗಳನ್ನು ಮೈತ್ರಿ ಸರ್ಕಾರದ ಆಡಳಿತದ ಬಗ್ಗೆ ಮಾಡಿದ್ದೀರಾ ಎಂಬುದು ನನಗೆ ಗೊತ್ತಿದೆ. ಈ ರೀತಿ ಆಧಾರ ರಹಿತವಾಗಿ ಸುಮ್ಮನೆ ಬಾಯಿ ಚಪಲಕ್ಕೆ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ! ಎಂದು ಮಾತಿನಲ್ಲೇ ಚಾವುಟಿ ಬೀಸಿದರು. ಹಾಗೆ ಅತೃಪ್ತ ಶಾಸಕರನ್ನು ನಾಡು ನೀರಿನಲ್ಲಿ ಕೈ ಬಿಡಬೇಡಿ ಎಂದು ಟೀಕಿಸಿದರು. ಕುಮಾರಸ್ವಾಮಿ ಅವರ ಮಾತಿಗೆ ಯಡಿಯೂರಪ್ಪ ಮಂಕಾದದ್ದು ಸದನದಲ್ಲಿ ಕಂಡುಬಂದಿತು.

ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಗೋ ಕಳ್ಳತನ ಮಾಡಿದರೆ ಹತ್ತು ವರುಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕು ಆದರೆ ಶಾಸಕರನ್ನು ಕದ್ದವರಿಗೆ…?

Leave a Reply