ಮಂತ್ರಿಗಿರಿಗಾಗಿ ಅತೃಪ್ತ ಆತ್ಮದಂತೆ ದೆಹಲಿಯ ಬಿಜೆಪಿ ಪಕ್ಷ ಕಚೇರಿ ಕಾಯುತ್ತಿರುವ ಹೆಚ್ ವಿಶ್ವನಾಥ್.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಂಪುಟ ವಿಸ್ತರಣದ ಕುರಿತು ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ೧೦.೧೧.೨೦೨೦ ರ ಮಂಗಳವಾರದಂದು ಪ್ರಕಟವಾದ ಬಳಿಕ ದೆಹಲಿಯಲ್ಲಿನ ಬಿಜೆಪಿ ಹೈ ಕಮಾಂಡ್ ಬಳಿ ಚರ್ಚಿಸುವುದಾಗಿ ಹೇಳಿ ದ್ದೇ ತಡ ಹೆಚ್.ವಿಶ್ವನಾಥ್ ರವರು ದೆಹಲಿಯ ಬಿಜೆಪಿ ಹೈ ಕಮಾಂಡ್ ಕಚೇರಿಯ ಬಾಗಿಲು ಕಾಯಲು ದೌಡಾಯಿಸಿದ್ದಾರೆ.

ಹೊತ್ತು ಹೋಗದ ಅತೃಪ್ತ ಮುದುಕನಂತೆ ಸದಾ ಗೊಣಗುವ ವಿಶ್ವನಾಥ್ ದೇವರಾಜ್ ಅರಸ್ ಅವರ ಅವಧಿಯ ವೇಳೆ ರಾಜಕೀಯ ಕ್ಷೇತ್ರಕ್ಕೆ ಕಾಂಗ್ರೆಸಿಗರಾಗಿ ಕಾಲಿಟ್ಟ ನಲವತ್ತು ವರ್ಷಗಳ ಬಳಿಕ ಜೆಡಿಎಸ್ ಪಕ್ಷಕ್ಕೆ ಸೇರಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. ನಂತರ ಹುಣುಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ವಿಶ್ವನಾಥ್, ಜೆಡಿಎಸ್ ಪಕ್ಷವು ಕಾಂಗ್ರೆಸ್ ನ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದಾಗ ಮಂತ್ರಿಗಿರಿ ಸಿಗಲಿಲ್ಲವೆಂದು ಬಿಜಿಪಿ ಪಕ್ಷದ ಹಣ ಹಾಗು ಅಧಿಕಾರದ ಆಮಿಷಕ್ಕೆ ಒಳಗಾಗಿ ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆಯುವುದಲ್ಲದೆ ತಮಗೆ ಮತ ಚಲಾಯಿಸಿದವರ ಮತವನ್ನು ಮಾರಿಕೊಂಡು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಮುಖ್ಯ ಪಾತ್ರವಹಿಸಿದರು. ತದನಂತರ ಅಮಾನತ್ತುಗೊಂಡ ಬಳಿಕ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಇವರನ್ನು ಹುಣುಸೂರು ಕ್ಷೇತ್ರದ ಜನ ತಿರಸ್ಕರಿಸುವ ಮೂಲಕ ಛೀಮಾರಿ ಹಾಕಿದ ಕಾರಣ ವಿಶ್ವನಾಥ್ ಎಂ.ಎಲ್.ಸಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಆಪರೇಷನ್ ಕಮಲಾವೆಂಬ ಪ್ರಜಾಬ್ರುತ್ವಕ್ಕೆ ಅಂಟಿರುವ ಸೂತಕದ ಬಗ್ಗೆ ವಿಶ್ವನಾಥ್‍ ಪುಸ್ತಕ ಬರೆಯುತ್ತೇನೆ ಎಂದು ಬೆದರಿಸಿದರೂ ಬಿಜೆಪಿ ಕ್ಯಾರೇ ಅನ್ನದ ಕಾರಣ ಮಂತ್ರಿಸ್ಥಾನ ಕೈತಪ್ಪಬಹುದು ಎಂದು, ಇನ್ನೋರ್ವ ಆಕಾಂಕ್ಷಿ ಶಂಕರ್ ಜೊತೆ ಸಿಎಂಗೆ ಮುನ್ನವೇ ದೆಹಲಿಗೆ ದೌಡಾಯಿಸಿದ್ದಾರೆ.

Leave a Reply