ಪ್ರಾಧೀಕಾರವೆಂಬ ಬಿಸ್ಕತ್

ಆಳುವ ಸರ್ಕಾರಗಳು ತಮ್ಮ ರಾಜಕೀಯ ಲಾಭ ಕ್ಕಾಗಿ ಜಾತಿಗೊಂದು ಪ್ರಾಧಿಕಾರ ಜಾತಿಗೊಬ್ಬ ವ್ಯಕ್ತಿ ವ್ಯಕ್ತಿಗೊಂದು ಜಯಂತಿ ಅಂತ ಮಾಡುತ್ತ ಬಂದಿದ್ದಾರೆ ಹೀಗಿರುವಾಗ ಇತ್ತೀಚಿನ ಸರ್ಕಾರದ ಕೆಲ ನಿರ್ಧಾರಗಳು ಒಕ್ಕಲಿಗರ ಮೀಸಲಾತಿ ಹಾಗು ಅಭಿವೃದ್ಧಿ ಪ್ರಾಧಿಕಾರದ ಬಗ್ಗೆ ಮತ್ತೆ ಚರ್ಚೆ ಶುರು ಮಾಡುವಂತೆ ಪ್ರೇರೇಪಿಸಿದೆ ಆದರೆ ಪ್ರಾಧಿಕಾರವೆ ನಮಗೇ ಎಲ್ಲವೂ ತಂದು ಕೊಡುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ..

ಅಭಿವೃದ್ದಿ ಪ್ರಾಧೀಕಾರ:- ಸರ್ಕಾರಗಳು ರಚಿಸುವ ಅಭಿವೃದ್ದಿ ಪ್ರಾಧೀಕಾರಗಳು ಕೇವಲ ಸಾಮಾಜಿಕ  ವರ್ಗ ಸಹಿಷ್ಣುತೆ ಆರ್ಥಿಕ ಸಹಿಷ್ಣುತೆ ಬದಲಿಸಿ ಬಲಗೊಳಿಸುವುದಷ್ಟೆ ಅಲ್ಲ ಬದಲಿಗೆ ಆ ಜನಾಂಗ ಅಥವಾ ಸಂಪ್ರದಾಯದ ಮೂಲ ಹುಟ್ಟು ಹಾಗು ವಿಕಾಸವನ್ನು ವೈಜ್ಞಾನಿಕವಾಗಿ ಓರೆಗೆ ಹಚ್ಚಿ ಅದನ್ನು ದಾಖಲೆಗಳಲ್ಲಿ ಸೇರಿಸುವುದು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕೀದೆ

ಒಕ್ಕಲಿಗರಿಗೆ ಏಕೆ ಬೇಕು ಪ್ರಾಧಿಕಾರ ಬೇಕು ಬೇಡ ಎಂಬ ಪ್ರಶ್ನೆ ಮೂಡಿದರೆ ಅದಕ್ಕೆ ಉತ್ತರ ಹೀಗಿರಬೇಕು ಒಕ್ಕಲಿಗರು ಮೂಲತಃ ಕೃಷಿಕರು ಸಿಂದು ನಾಗರಿಕತೆಯ ಕಾಲಘಟ್ಟದಿಂದಲೂ ಕೃಷಿ ಕಾಯಕ ಮಾಡುತ್ತಾ ಬಂದವರು ಈ ಜನಾಂಗದಲ್ಲಿ ಹಲವು ಒಳಪಂಗಡಗಳಿವೆ ಅವುಗಳು ಅಲ್ಲಿಧ ಸ್ಥಳೀಯ ಆಹಾರ ಆಚಾರ ವಿಚಾರ ಸಂಸ್ಕೃತಿ ಮೇಲೇ ಅವಲಂಬಿತವಾಗಿದ್ದು ಸರಿ ಸುಮಾರು 157 ಒಳ ಪಂಗಡಗಳಿವೆ ಅವುಗಳೆಂದರೆ..

ಗಂಗಡಕಾರ ಒಕ್ಕಲಿಗ
ಕುಂಚಿಟಿಗು ಒಕ್ಕಲಿಗ
ದಾಸ ಒಕ್ಕಲಿಗ 
ಕುಡು ಒಕ್ಕಲಿಗ
ಪಂಚಮಸಾಲಿ ಒಕ್ಕಲಿಗ
ಹಳ್ಳಿಕಾರ ಒಕ್ಕಲಿಗ
ನಾಮದಾರಿ ಕುಂಚಿಟಿಗ ಒಕ್ಕಲಿಗ
ನಾಮದಾರಿ ಒಕ್ಕಲಿಗ
ಮುಳ್ಳು ಒಕ್ಕಲಿಗ 
ಗಂಗಕುಲ ಒಕ್ಕಲಿಗ
ಗಾವುಂಡ ಒಕ್ಕಲಿಗ
ಗೌಡ ಒಕ್ಕಲಿಗ
ಮೊರಸು ಒಕ್ಕಲಿಗ
ಮುಸುಕು ಒಕ್ಕಲಿಗ
ಬೆರಳ್ಕೊಡಗೆ ಒಕ್ಕಲಿಗ
ರೆಡ್ಡಿ ಒಕ್ಕಲಿಗ
ಕಾಪು ಕಮ್ಮ ಒಕ್ಕಲಿಗ
ಹಳೆ ಪೈಕಿ ಒಕ್ಕಲಿಗ
ಪಾಳ್ಯ ಒಕ್ಕಲಿಗ
ಪಾಳ್ಯದಸೀಮೆ ಒಕ್ಕಲಿಗ
ಕಾನುಸಾಲು ಒಕ್ಕಲಿಗ
ನೆರಳಗಟ್ಟದ ಒಕ್ಕಲಿಗ
ಕುತ್ತೇರುಸಾಲು ಒಕ್ಕಲಿಗ
ಭೈರೇದೇವರ ಒಕ್ಕಲಿಗ
ಹೊಸ ದ್ಯಾವ್ರು ಒಕ್ಕಲಿಗ
ಬಂಡಿ ದ್ಯಾವ್ರು ಒಕ್ಕಲಿಗ
ಊರದ್ಯಾವ್ರು ಒಕ್ಕಲಿಗ
ಭೈರವ ಒಕ್ಕಲಿಗ
ಪೆಟ್ಟಿಗೆ ಒಕ್ಕಲಿಗ
ಮೋಟಾಡು ಒಕ್ಕಲಿಗ
ಬೆಳ್ಳಿ ಒಕ್ಕಲಿಗ
ರೊದ್ದಗಾರು ಒಕ್ಕಲಿಗ
ರೆಡ್ಡಿಪೂಜಾರ ಒಕ್ಕಲಿಗ
ತೆಲುಗುಗೌಡ ಒಕ್ಕಲಿಗ
ನಾಮದರೆಡ್ಡಿ ಒಕ್ಕಲಿಗ
ಪಾಮರರೆಡ್ಡಿ ಒಕ್ಕಲಿಗ
ಲಿಂಗದಾರಿ ಕುಂಚಿಟಿಗ ಒಕ್ಕಲಿಗ
ಎತ್ತಿನ ಕುಂಚಿಟಿಗ ಒಕ್ಕಲಿಗ
ಕಾಮಾಟಿ ಕುಂಚಿಟಿಗ ಒಕ್ಕಲಿಗ
ಕುಂಚ ಒಕ್ಕಲಿಗ
ನೊಣಬ ಒಕ್ಕಲಿಗ
ಸರ್ಪ ಒಕ್ಕಲಿಗ
ಚೋಳ ಒಕ್ಕಲಿಗ
ಶೆಟ್ಟಿಗಾರ ಒಕ್ಕಲಿಗ
ಏಳುಮನೆ ಒಕ್ಕಲಿಗ
ಭಂಟ ಒಕ್ಕಲಿಗ
ಮಲೇಗೌಡ ಒಕ್ಕಲಿಗ
ಉಪ್ಪಿನಕೊಳಗ ಒಕ್ಕಲಿಗ
ಹೇಮರೆಡ್ಡಿ ಒಕ್ಕಲಿಗ
ಸ್ವಲ್ಸ ಒಕ್ಕಲಿಗ
ಜೋತ್ರದ ಒಕ್ಕಲಿಗ
ಅರವೇದಿಗ ಒಕ್ಕಲಿಗ
ಮಾಳವ ಒಕ್ಕಲಿಗ
ಮಾಣಗ ಒಕ್ಕಲಿಗ
ತುಳುವ ಒಕ್ಕಲಿಗ
ಅಂಗಲಿಕ ಒಕ್ಕಲಿಗ
ಕುಳಿಬೆಡಗ ಒಕ್ಕಲಿಗ
ಪಾಂಡರು ಒಕ್ಕಲಿಗ
ಬೊಗ್ಗರು ಒಕ್ಕಲಿಗ
ನಾಡವಾರು ಒಕ್ಕಲಿಗ
ಬಂಡೇರು ಒಕ್ಕಲಿಗ
ಕುಳಲಿ ಒಕ್ಕಲಿಗ
ರಾಜಪುರಿ ಒಕ್ಕಲಿಗ
ಅನುಮ ಒಕ್ಕಲಿಗ
ಸಿಂಗರು ಒಕ್ಕಲಿಗ
ಏಳನಾಟಿ ಒಕ್ಕಲಿಗ
ಕೋದಾಟು ಒಕ್ಕಲಿಗ
ಕಾಕಿನಾಟ ಒಕ್ಕಲಿಗ
ತಂಡಗೌಡ ಒಕ್ಕಲಿಗ
ಮಡ್ಡರು ಒಕ್ಕಲಿಗ
ಮೊಗ್ಗದರು ಒಕ್ಕಲಿಗ
ಹೊಲಕಾಲು ಒಕ್ಕಲಿಗ
ದಾಸವಂಟಿಕೆ ಒಕ್ಕಲಿಗ
ದೊಡ್ಡಗಾಂಟಿ ಒಕ್ಕಲಿಗ
ಆಲಮಟ್ಟಿ ಒಕ್ಕಲಿಗ
ಕಂಪಲ ಒಕ್ಕಲಿಗ
ಕಮ್ಮೇರು ಒಕ್ಕಲಿಗ
ಗೋಸಂಗಿ ಒಕ್ಕಲಿಗ
ಕಪವಳ್ಳಿ ಒಕ್ಕಲಿಗ
ಶಂಕಜಾತಿ ಒಕ್ಕಲಿಗ
ಸಣ್ಣಗೊಂಡಿ ಒಕ್ಕಲಿಗ
ಹಳೆ ಒಕ್ಕಲು ಒಕ್ಕಲಿಗ
ವಾಲಿಗುಂಡ ಒಕ್ಕಲಿಗ
ದೇವನಮಕ್ಕಳು ಒಕ್ಕಲಿಗ
ಸಮುದ್ರಕುಲ ಒಕ್ಕಲಿಗ
ಕಮ್ಮನಾಡು ಒಕ್ಕಲಿಗ
ಹಾಲು ಒಕ್ಕಲಿಗ
ಹೆಗ್ಗಡೆ ಒಕ್ಕಲಿಗ
ಅಲಮಟ್ಠಿ ಒಕ್ಕಲಿಗ
ಕೊಂಕಣಿ ಒಕ್ಕಲಿಗ
ಯಾನೆ ಒಕ್ಕಲಿಗ
ದಕ್ಷಿಣ ಕನ್ನಡ ಒಕ್ಕಲಿಗ
ಉತ್ತರ ಕನ್ನಡ ಒಕ್ಕಲಿಗ
ಕೊಡಗುಗೌಡ ಒಕ್ಕಲಿಗ
ಅರೆಭಾಷೆ ಒಕ್ಕಲಿಗ
ಸಾದರ ಒಕ್ಕಲಿಗ
ನೀಲಗಿರಿ ಒಕ್ಕಲಿಗ
ತಮಿಳು ಗೌಂಡರ್ ಒಕ್ಕಲಿಗ
ಪಠಗಾರ ಒಕ್ಕಲಿಗ
ಕರಿ ಒಕ್ಕಲಿಗ
ಕೊಟ್ಟೆ ಒಕ್ಕಲಿಗ
ಹೊನ್ನೆ ಒಕ್ಕಲಿಗ
ಕುಂಬಿ ಒಕ್ಕಲಿಗ
ಬೆಳಕವಾಡಿ ಒಕ್ಕಲಿಗ
ಎಲ್ಲಮ್ಮಕಾಪು ಒಕ್ಕಲಿಗ
ಕೊಡಿಗೆಗೌಡ ಒಕ್ಕಲಿಗ
ಕೋಡು ಒಕ್ಕಲಿಗ
ತುಳೇರು ಒಕ್ಕಲಿಗ
ಗಾಮಗೌಢ ಒಕ್ಕಲಿಗ
ಕೆರೆ ಒಕ್ಕಲಿಗ
ಪಡಿಯಾಚಿ ಒಕ್ಕಲಿಗ
ಹಾಲಕ್ಕಿ ಒಕ್ಕಲಿಗ
ಅಟ್ಟಿಓಕ್ಕಲು  ಒಕ್ಕಲಿಗ
ನಾಡಗೌಡ ಒಕ್ಕಲಿಗ
ದೇಶಗೌಡ ಒಕ್ಕಲಿಗ
ವೆಲ್ಲಾಳ ಒಕ್ಕಲಿಗ
ಆರ್ಮುಂಡಿ ಒಕ್ಕಲಿಗ
ಪಾಂಡ್ಯ ಒಕ್ಕಲಿಗ
ಊಡಿಗಗೌಡ ಒಕ್ಕಲಿಗ
ನಾಯರ್ ಒಕ್ಕಲಿಗ
ಗೋನಾಬ ಒಕ್ಕಲಿಗ
ತೋಟಗಾರ ಒಕ್ಕಲಿಗ
ಸಪ್ಪೆ ಒಕ್ಕಲಿಗ
ಗೊಂಡ ಒಕ್ಕಲಿಗ
ಪಾಕನಾಕ ಒಕ್ಕಲಿಗ
ಪಣಯರು ಒಕ್ಕಲಿಗ
ಗದ್ಧಿಗರು ಒಕ್ಕಲಿಗ
ಮೋತಾಬಿ ಒಕ್ಕಲಿಗ
ಕೋಪಿ ಒಕ್ಕಲಿಗ
ಜಾಠ ಒಕ್ಕಲಿಗ
ಲಾಳಗೊಂಡ ಒಕ್ಕಲಿಗ
ಸಜ್ಜನ ಒಕ್ಕಲಿಗ
ಕುಡಿ ಒಕ್ಕಲಿಗ
ಗೊಂಡ ಒಕ್ಕಲಿಗ
ಕೊಡತಿ ಒಕ್ಕಲಿಗ

ಹೀಗೆ ಹಲವು ಒಳಪಂಡಗಳನ್ನ ಹೊಂದಿರುವ ರಾಜ್ಯದ ಬೃಹತ್ ಸಮುದಾಯ ಒಕ್ಕಲಿಗ ಸಮುದಾಯ ಇದರ ಬಗ್ಗೆ ಅಧ್ಯಯನ ಮಾಡಲು ಪ್ರಾಧಿಕಾರ ಬೇಕು ಪ್ರಾಧಿಕಾರ ಇಲ್ಲದೆ ನಮ್ಮನ್ನು ಅಭ್ಯಸಿಸುವ ಕಾಯಕವಾಗಬೇಕು

ಭಾರತದ ಬಹು ಭಾಗವನ್ನು ಸುಮಾರು ಆರು ನೂರು ವರ್ಷ ಆಳ್ವಿಕೆ ಮಾಡಿದ ಗಂಗರಸರು ಒಕ್ಕಲಿಗರು ಅವರ ಸಂತತಿ ಮುಂದುವರೆದ ತಲೆಮಾರು ಅವರ ಸಾಧನೆಗಳು ಇವುಗಳ ಬಗ್ಗೆ ಅಧ್ಯಯನ ಮಾಡಲು ಪ್ರಾಧಿಕಾರ ಬೇಕು ಮತ್ತೊಂದು ಪ್ರಭಲ ರಾಜ ಮನೆತನ ರಾಷ್ಟ್ರಕೂಟರು ಇವರು ಸಹ ಒಕ್ಕಲಿಗರು ಈ ರಾಜಮನೆತನ ಹುಟ್ಟು ವಿಕಾಸ ಹಾಗು ಮುಂದುವರೆದ ತಲೆಮಾರಿನ ಬಗ್ಗೆ ಅರಿಯ ಬೇಕು ಅರಿವು ಮೂಡಿಸಬೇಕು

ಒಕ್ಕಲಿಗರು ತೀರ ಇತ್ತೀಚಿನ ವರ್ಷಗಳ ವರೆಗೂ ನಿರಕ್ಷರಕುಕ್ಷಿಗಳು ಆಗಿದ್ದು ಇತಿಹಾಸವನ್ನು ಬರೆದಿಟ್ಟವರಲ್ಲ ನಾನು ನನ್ನದು ಎಂದು ಬದುಕಿದವರು ಅಲ್ಲ ಬದಲಿಗೆ ಒಕ್ಕಲುತನಕ್ಕೆ ಸಹಭಾಗಿಗಳಾಗಿ ದುಡಿದ ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ಜತೆಯಲ್ಲಿ ಕೊಂಡುಯ್ಯುವ ಸ್ವಾಸ್ಥ್ಯ ಸಮಾಜದ ಹಿತ ಚಿಂತಕರು ಹೀಗಿರುವಾಗ ಮಣ್ಣಲ್ಲಿ ಮಣ್ಣಾಗಿರುವ ಸಮಾಜದ ಸಾಧಕರನ್ನು ಅವರ ಸಾಧನಗಳನ್ನು ಒರೆಗೆ ಹಚ್ಚುವ ಕೆಲಸ ಮಾಡಬೇಕು
 
ಕೆಲ ಜನ ಬ್ರಾಂತಿಗೆ ಬಿದ್ದು ಜಾತಿ ಅಂದ್ರೆ ಏನ್ರಿ? ಧರ್ಮ ದೇಶ ಜಾತ್ಯಾತೀತ ಎಂಬ ನಿಲುವು ತಳೆದಿರುವ ಮಂದಿಗೆ ನಿನ್ನ ಜಾತಿ ಇದು, ನಿನ್ನ ಜಾತಿಯ ಸಾಧಕರು ಇವರು, ನಿನ್ನ ಜಾತಿಯ ಬೇರು ಎಲ್ಲಿದೆ, ನಿನ್ನ ಜಾತಿಯ ಕೀರ್ತಿ ಇದು,ನಿನ್ನ ಜಾತಿಯ ಧ್ಯೇಯ ಇದು ಧೋರಣೆ ಇದು ಇದಕ್ಕೆ ನೀನು ಗೌರವಿಸು ಎಂಬುದನ್ನು ದಾಖಲೆ ಸಹಿತ ತೋರಿಸಲು ಬೃಹತ್ ಅಧ್ಯಯನ ಮಾಡಬೇಕು

ಒಕ್ಕಲಿಗರ ಮೀಸಲಾತಿ:-

ಬಂಧುಗಳೆ ನಿಮಗೆಲ್ಲಾ ತಿಳಿದ ಹಾಗೆ ಮೀಸಲಾತಿ ಸ್ವಾತಂತ್ರ್ಯ ನಂತರ ಬಂದುದಲ್ಲ ಬದಲಿಗೆ ರಾಜಾಡಳಿತದಲ್ಲಿ ಬಂದ ಚಳುವಳಿ.

ಮೈಸೂರು ಸಂಸ್ಥಾನದಲ್ಲಿ ಮೊದಲ ಬಾರಿಗೆ ಮೀಸಲಾತಿ ವಿಷಯ ಚರ್ಚೆಗೆ ಬಂದು ಅದರ ಪರ ವಿರೋಧ ಮಾತುಕತೆ ಪ್ರಾರಂಭವಾಯಿತು ಅಸಲಿಗೆ ಮೈಸೂರು ಸಂಸ್ಥಾನದಲ್ಲಿ ಇದ್ದ ತಮಿಳು ಬ್ರಾಹ್ಮಣರು ಹಾಗು ಕನ್ನಡ ಬ್ರಾಹ್ಮಣರ ಸಂಘರ್ಷ ಮೀಸಲಾತಿ ಚರ್ಚೆಗೆ ಮುನ್ನುಡಿಯಾಯಿತು .

ಮೈಸೂರು ಸಂಸ್ಥಾನದಲ್ಲಿ ತಮಿಳು ಬ್ರಾಹ್ಮಣರು ಆಯಕಟ್ಟಿನ ಸ್ಥಳಗಳಲ್ಲಿ ಇದ್ದರೆ ಕನ್ನಡ ಬ್ರಾಹ್ಮಣರು ಅರ್ಚಕ ಶ್ರಾದ್ಧ ದಂತಹ ಕಾರ್ಯ ನಿರ್ವಹಣೆ ಮಾಡುತ್ತಿದ್ದರು ಆಗ ಕನ್ನಡ ಬ್ರಾಹ್ಮಣ ವರ್ಗ ನಾಲ್ವಡಿ ಅವರ ಬಳಿ ಬಂದು ನಮಗೂ ಸಹ ಆಯಕಟ್ಟಿನ ಸ್ಥಳಗಳಲ್ಲಿ ಮೀಸಲಾತಿ ನೀಡಿ ನಮಗೂ ಅರ್ಹತೆ ಇದೆ ನಮಗೆ ಸಹ ಅವಕಾಶ ಬೇಕು ಎಂದು ರಾಜರ ಮೇಲೆ ಒತ್ತಡ ತಂದರು ಇದು ಮೀಸಲಾತಿ ಹುಟ್ಟಿದ ಬಗೆ .

ನಂತರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಇದ್ದ ಶಿಕ್ಷಣ ಉದ್ಯೋಗ ಹಾಗು ಇತರೆ ಅವಕಾಶಗಳು ಇತರ ಸಮುದಾಯಗಳಿಗೆ ದಕ್ಕಬೇಕು ಎಂಬ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಬ್ರಾಹ್ಮಣೇತರರಿಗೂ ಮೀಸಲಾತಿ ನೀಡಿ ಎಂಬ ಬೇಡಿಕೆ ಇಟ್ಟರು ಇದರಲ್ಲಿ ಸತ್ವವವಿದೆ ಎಂಬುದನ್ನು ಅರಿತ ನಾಲ್ವಡಿ ಮೀಸಲಾತಿ ಮಸೂದೆಗಾಗಿ ಮಿಲ್ಲರ್ ಸಮಿತಿ ರಚಿಸಿ ಅವರ ಅನುಷ್ಠಾನದ ಮೇಲೆ ಮೀಸಲಾತಿ ನೀಡಿದರು ಈ ಎಲ್ಲಾ ಕಾರ್ಯಗಳ ಹಿಂದೆ ಕೆ ಹೆಚ್ ರಾಮಯ್ಯನೆಂಬ ಧೈತ್ಯ ಶಕ್ತಿ ಕೆಲಸ ಮಾಡಿತ್ತು. ಜನಾಂಗಗಳ ಸಂಘ ಸಂಸ್ಥೆಗಳು ಸ್ಥಾಪನೆಯಾಗಿ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುವುದರ ಜತೆಗೆ ಉದ್ಯೋಗ ಪಡೆದು ಸಮಾಜದ ಮುಖ್ಯ ಸ್ಥರಗಳಿಗೆ ಬರುವುದಕ್ಕೆ ಅನುಕೂಲವಾಯಿತು ಅದರ ಫಲವೇ 1906 ರಲ್ಲಿ ರಾಜರ್ಶಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೃಪಾಶೀರ್ವಾಧದೊಂದಿಗೆ ಕೆ ಹೆಚ್ ರಾಮಯ್ಯನವರ ಶ್ರಮದ ಫಲವಾಗಿ ರಾಜ್ಯ ಒಕ್ಕಲಿಗರ ಸಂಘ ತಲೆ ಎತ್ತಿತು ಅದರ,ಪರಿಣಾಮವೆ ಇಂದು ಒಕ್ಕಲಿಗ ಸಮುದಾಯ ಪ್ರಭಲ ಸಮುದಾಯವಾಗಿ ಹೊರ ಹೊಮ್ಮಿದೆ.

ನಂತರದ ದಿನಗಳಲ್ಲಿ ಸಂವಿಧಾನದಲ್ಲಿ ಸಹ ಸಾಮಾಜಿಕ ಪರಿಕಲ್ಪನೆಗಳ ಮೀಸಲಾತಿ ನೀಡಲಾಯಿತು ಅದರಿಂದಾಗಿ ಕೆಲ  ಸಮದಾಯಗಳು ಸಾಮಾಜಿಕವಾಗಿ ಬಲಗೊಳ್ಳುವಂತಾಯಿತು ಜಾತಿ ಆಧಾರದ ಮೀಸಲಾತಿ ಹಂಚಿಕೆಯಲ್ಲಿ ದಲಿತ ಸಮುದಾಯ ಸಹಜವಾಗಿ ಹೆಚ್ಚು ಪಾಲು ಪಡೆಯುವಂತಾಯಿತು ಒಕ್ಕಲಿಗ ಜನಾಂಗವನ್ನು 3ಎ ಗುಂಪಿಗೆ ಸೇರಿಸಿ ಮೂರ್ನಾಲ್ಕು ಜನಾಂಗಗಳಿಗೆ ಸೇರಿದಂತೆ ಶೇ 4 ಮೀಸಲಾತಿ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಇತ್ತೀಚೆ ಗೆ ತಂದ ಶೇ 10 ಮೇಲ್ವರ್ಗದವರ ಮೀಸಲಾತಿ ಇಂದು ನಮ್ಮ ಮೀಸಲಾತಿ ಹಕ್ಕನ್ನು ಮರುಪರಿಶೀಲಿಸುವಂತೆ ಪ್ರೇರೇಪಿಸಿದೆ.

ಶೇ 50 ಜನರಲ್ ಕೆಟೆಗರಿ ಇದ್ದರೆ ದಲಿತರಿಗೆ ಸುಮಾರು ಶೇ 14 ಹಂಚಿಕೆಯಾದರೆ ಅಲ್ಪಸಂಖ್ಯಾತರು 3ಎ 3ಬಿ ಹೀಗೆ ಇತರ ಸಮುದಾಯಗಳಿಗೆ ಉಳಿದ ಶೇ 50 ರಲ್ಲಿ ಹಂಚಿಕೆ ಮಾಡಲಾಗಿದೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶೇ 50 ಕ್ಕೆ ಹೆಚ್ಚು ಮೀಸಲಾತಿಗೆ ಹಂಚಿಕೆಯಾಗಬಾರದು ಎಂಬ ನಿರ್ದೇಶನವಿದೆ ಹೀಗಿರುವಾಗ ಶೇ10 ಮೇಲ್ವರ್ಗದ ಜನಾಂಗಕ್ಕೆ ನೀಡಿರುವ ಮೀಸಲಾತಿ ನಮಗೆ ಅರಿವಿಲ್ಲದೆ ನಮ್ಮೊಳಗಿನ ಮೀಸಲಾತಿಗೆ ಕೈ ಹಾಕಿದೆ ಎಂಬುದರ ಅರಿವು ನಮಗಿಲ್ಲ.

ಕಾರಣ ಏನೆಂದರೆ ನಮ್ಮ ತಲೆಯೊಳಗೆ ಮೀಸಲಾತಿ ಬಗ್ಗೆ ತಪ್ಪು ತಿಳುವಳಿಕೆ ತುಂಬುತ್ತಿರುವ ವರ್ಗ ಆ ವರ್ಗ ಬೇರೆ ಯಾರು ಅಲ್ಲ ಇದೆ ನಾಲ್ವಡಿ ಅವರ ಅಧಿಕಾರವಧಿಯಲ್ಲಿ ಒಂದೇ ಜನಾಂಗ ಕನ್ನಡ ತಮಿಳು ಭಾಷಿಕರ ಆಧಾರದ ಮೇಲೇ ಮೀಸಲಾತಿ ಬಯಸಿದವರು, ಹಿಂದುಳಿದ ವರ್ಗದ ಮೀಸಲಾತಿ ವಿರೋಧಿಸಿದವರು ಅವರ ಮಾತನ್ನು ನಂಬುವ ನಮ್ಮ ಯುವ ಸಮುದಾಯ ಮೀಸಲಾತಿಯೇ ಬೇಡ ಎನ್ನುವ ಮಟ್ಟಿನ ಚರ್ಚೆ ಪ್ರಾರಂಭಿಸಿದ್ದಾರೆ ಅವರಿಗೆ ಅದ್ಯಾವಾಗ ಬುದ್ದಿ ಬರುತ್ತೋ ಏನೋ.

ಉದಾಹರಣೆಗೆ ನೂರು ಪೋಲೀಸ್ ಹುದ್ದೆ ಇದ್ದರೆ ಅದರಲ್ಲಿ ಶೇ 50 ಜನರಲ್ ಎಲ್ಲಾ ಜನಾಂಗದವರು ಅದರಲ್ಲಿ ಅರ್ಹತೆ ಆಧಾರದ ಮೇಲೆ ಸ್ಥಾನ ಪಡೆಯಬಹುದು  3ಎ ಗೆ 4 ಸ್ಥಾನ ಮೀಸಲಿರುತ್ತದೆ ಉಳಿದ 46 ಸ್ಥಾನಗಳನ್ನು ಇತರೆ ಸಮುದಾಯಗಳು ಸಹ ಅವರ ಸಂಖ್ಯೆಗನುಗುಣವಾಗಿ ಪಡೆಯುತ್ತವೆ ನಮ್ಮ ಸಂಖ್ಯೆ 4ರಿಂದ ಪ್ರಾರಂಭ ಆಗುತ್ತೆ ಎಂಬ ಅರಿವು ಇಲ್ಲದೇ ಮೀಸಲಾತಿ ಯಾಕ್ರಿ ಬೇಕು ಎನ್ನುವ ವಿವೇಕರಹಿತರಿಗೆ ಏನು ಹೇಳೋಣ.

ಅದು ಒತ್ತಟ್ಟಿಗಿರಲಿ ಈಗ ಮೂಲ ವಿಷಯಕ್ಕೆ ಬರೋಣ ನಮ್ಮ ಪಾಲಿನ ಮೀಸಲಾತಿ ಶೇ 4 ಇರುವ ಮೀಸಲಾತಿಗೆ ಇನ್ನೊಂದಿಷ್ಟು ಜನಾಂಗ ಸಹ ಹಕ್ಕುಬಾಧ್ಯರು ಹೀಗಿರುವಾಗ ಇರುವ ಶೇ 4 ನಮ್ಮ ಸಮುದಾಯಕ್ಕೆ ಪೂರ್ಣವಾಗಿ ಸಿಗುವುದಿಲ್ಲ ಹಾಗಾಗಿ ನಾವು ಮೊದಲಿಗೆ ಒಳ ಮೀಸಲಾತಿ ಜಾರಿಗೆ ಬರುವಂತೆ ಮಾಡಬೇಕು ನಮ್ಮ ಸಮುದಾಯದ ಜನಸಂಖ್ಯೆ ಇಂದು ಶೇ 14 ಇದೆ ಅಂದರೆ ಜನಸಂಖ್ಯೆಗನುಗುಣವಾಗಿ ಶೇ 14 ನಮ್ಮ ಪಾಲಾಗಬೇಕು ಇದು ಎಲ್ಲಾ ಜಾತಿಯ ಜನಸಂಖ್ಯೆಗನುಗುಣವಾಗಿ ಹಂಚಿಕೆಯಾಗಬೇಕು ಜತೆಗೆ ಒಟ್ಟು ಸಂಖ್ಯೆಯ ಶೇ 50 ಜನರಲ್ ಗೆ ನೀಡಿದರೆ ನಮ್ಮ ಪಾಲಿನ ಶೇ 7 ನ್ನು ಜನರಲ್ ಪೂಲ್ ಗೆ ನೀಡಿದರೆ ಉಳಿದ ಶೇ 7 ನಮ್ಮ ಸಮುದಾಯಕ್ಕೆ ಮೀಸಲಾಗಬೇಕು ಈ ನಿಟ್ಟಿನಲ್ಲಿ ನಾವೆಲ್ಲಾ ಜಾಗೃತರಾಗಿ ಮೀಸಲಾತಿ ನೀತಿ ನಿಯಮಗಳನ್ನು ಅರಿತು ಅದರ ಅನುಷ್ಠಾನಕ್ಕೆಹೋರಾಟ ಮಾಡಬೇಕಿದೆ ಇಲ್ಲವಾದರೆ  ಸಮುದಾಯದ ಮುಂದಿನ ಪೀಳಿಗೆ ಬಹಳ ನೋವುಣ್ಣಬೇಕಾಗುತ್ತದೆ.

ನಮ್ಮ ಹಕ್ಕಿಗಾಗಿ ನಾವು ಇಂದು ಜಾಗೃತರಾಗದಿದ್ದರೆ ಹೋರಾಟ ಮಾಡಿ ನಮ್ಮ ಹಕ್ಕು ಕಸಿದುಕೊಳ್ಳದಿದ್ದರೆ ಒಟ್ಟು ಸಮುದಾಯ ಮುಂದೊಂದು ದಿನ ಇದರ ಕಹಿ ಫಲ ಉಣ್ಣಲಿದೆ ಅದಕ್ಕೆ ಮುಂಚೆ ನಾವು ಜಾಗೃತರಾಗಬೇಕಿದೆ.

ಯಡಿಯೂರಪ್ಪನವರು ಘೋಷಿಸಿರುವ ಅಭಿವೃದ್ಧಿ ಪ್ರಾಧಿಕಾರ ರಚನೆ ಸ್ವಜನ ಪಕ್ಷಪಾತವಲ್ಲ ಇದೇ ಜಾಗದಲ್ಲಿ ಕುಮಾರಸ್ವಾಮಿ ಇದ್ದು ಒಕ್ಕಲಿಗರ ಪ್ರಾಧಿಕಾರ ರಚಿಸಿದ್ದರೆ ಮರಾಠ ಪ್ರಾಧಿಕಾರ ರಚಿಸಿದ್ದರೆ ರಾಜ್ಯದ ಬೊಗಳು ಮಧ್ಯಮಗಳು ಜನರ ಮಾತು ಚರ್ಚೆ ಹೇಗಿರುತ್ತಿತ್ತು ಎಂಬುದು ಕೆಲವು ವಿಕೃತ ಮನಸ್ಥಿತಿ ಜನರಿಗೆ ಅರವಾಗಬೇಕಿದೆ ಇದುವರೆಗೂ ರಾಜ್ಯವನ್ನು ಏಳು ಮುಖ್ಯಮಂತ್ರಿಗಳು ಪ್ರತಿನಿಧಿಸಿದ್ದಾರೆ ಓರ್ವರೂ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ ಅವರ ಆಳ್ವಿಕೆಯಲ್ಲಿ ಎಂದಿಗೂ ಸ್ವಜನಪಕ್ಷಪಾತ ಮಾಡಲಿಲ್ಲ ಬದಲಿಗೆ ಸರ್ವ ಜನಾಂಗವನ್ನು ಸಮಾಜದ ಮುಖ್ಯಸ್ಥರಕ್ಕೆ ತರುವಲ್ಲಿ ಪ್ರಮುಖರೆನಿಸಿದ್ದಾರೆ ಅದಕ್ಕಾಗಿಯೇ ಒಕ್ಕಲಿಗರನ್ನು ಸರ್ವ ಜನಾಂಗದ ಸಮನ್ವಯ ಸಾಧಕರು ಎನ್ನುವುದು.

ನಮ್ಮ ಹೋರಾಟ ಜನಸಂಖ್ಯಾವಾರು ಮೀಸಲಾತಿ ಪಡೆಯುವದೇ ಪ್ರಥಮ ಆದ್ಯತೆಯಾಗಲಿ ಪ್ರಾಧಿಕಾರ ರಚಿಸಿ ನಾನು ಮಾಡಿದೆ ನನ್ನ ಪಕ್ಷಕ್ಕೆ ಮತ ನೀಡಿ ಎನ್ನುವ ರಾಜಕೀಯ ತಂತ್ರಗಾರಿಕೆ ಬೇಕಿಲ್ಲ ಇದು ಒಕ್ಕಲಿಗರನ್ನು ಮೀಸಲಾತಿ ಹೋರಾಟದಿಂದ ವಿಮುಖಮಾಡುವ ತಂತ್ರಗಾರಿಕೆ ಎಂದರೆ ತಪ್ಪಾಗಲಾರದು.

ಮರಾಠ ಪ್ರಾಧಿಕಾರ ಮಾಡಿ ಚರ್ಚೆಗೆ ಗ್ರಾಸವಾದ ಯಡಿಯೂರಪ್ಪ ಸ್ವಜಾತಿ ಪ್ರಾಧಿಕಾರ ಮಾಡಿ ತನ್ನದೇ ಪಕ್ಷದ ವಿಶ್ವನಾಥ್ ಮೂಲಕ ಒಕ್ಕಲಿಗರ ಪ್ರಾಧಿಕಾರದ ಧ್ವನಿ ಎತ್ತಿಸಿದ್ದಾರೆ ಕಡೆಗೆ ನಮಗೂ ಕೊಟ್ಟಂತೆ ನಟಿಸಿ ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ. ನಿಮಗೆ ತಿಳಿಯದೆ ಯಡ್ಯೂರಪ್ಪ ಸಿದ್ದು ಆಸ್ಪತ್ರೆ ದಾಖಲೆ ಮರೆ ಮಾಡಲು ಕೆಜೆ ಹಳ್ಳಿ ಡಿ ಜೆ ಹಳ್ಳಿ, ವಿಜಯೇಂದ್ರನ 5000 ಕೋಟಿ ಪ್ರಕರಣ ಮರೆ ಮಾಡಲು ಡ್ರಗ್ ಪ್ರಕರಣ ಇದು ಸಹ ಹಾಗೆ..

ಇದು ಒತ್ತಟ್ಟಿಗೆಇರಲಿ ಈಗ ನಮ್ಮ ಹಕ್ಕು ಹಾಗು ಅಧಿಕಾರಕ್ಕಾಗಿ ಸಂಘಟಿತ ಹೋರಾಟ ರೂಪಿಸಬೇಕಾದ ಅನಿವಾರ್ಯತೆ ಇದೆ ಇಲ್ಲವಾದರೆ ಮುಂದಿನ ತಲೆಮಾರಿನ ನಮ್ಮವರು ಜಾತಿ ವ್ಯವಸ್ಥೆಯ ಒಡೆದು ಆಳುವ ವಿಷನೀತಿಗೆ ಬಲಿಯಾಗುತ್ತಾರೆ ಎಂಬುದು ಸತ್ಯ ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ಧನಿಗೂಡಿಸಬೇಕು ಪೂಜ್ಯನೀಯ ಸ್ವಾಮೀಜಿಗಳ ಮಾರ್ಗದರ್ಶನ ಪಡೆಯಬೇಕು ಒಕ್ಕಲಿಗರ ಹಿತರಕ್ಷಣೆ ಮಾಡಬೇಕು ಆಳುವ ಸರ್ಕಾರಕ್ಕೆ ಒಕ್ಕಲಿಗರ ಸಾಂಘಿಕ ಹೋರಾಟದ ಶಾಖ ತಟ್ಟಬೇಕು.

ಲೇಖಕರು – ಸತೀಶ್ ಗೌಡ, ಮೈಸೂರು 
9986403488

Leave a Reply