ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯ ಹಿಂದೆ ಮೋದಿ ಕೈವಾಡ?

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆ ಸಮೀಪಿಸುತ್ತಿದೆ ಎನ್ನುವಾಗ ಕರ್ನಾಟಕಕ್ಕೆ ಮತಯಾಚಿಸಲು ಬಂದಾಗ ಕನ್ನಡದಲ್ಲಿ ತಮ್ಮ ಭಾಷಣವನ್ನು ಆರಂಭಿಸುವುದು ಅವರ ಕನ್ನಡಿಗರ ಮೇಲಿನ ಕಾಳಜಿ ತೋರುವುದಿಲ್ಲ. ಬದಲಾಗಿ ಪ್ರತಿ ವರ್ಷ ನೆರೆ ಹಾವಳಿಗೆ ಸಿಲುಕಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಜನ ಜೀವನಕ್ಕೆ ಹಾನಿಯುಂಟಾದಾಗ ಎಷ್ಟರ ಮಟ್ಟಿಗೆ ಪರಿಹಾರ ಒದಗಿಸುತ್ತಾರೆ ಎಂಬುದು ಕನ್ನಡಿಗರ ಮೇಲೆ ಅವರಿಗಿರುವ ಕಾಳಜಿ ತೋರುತ್ತದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಗ್ರೀನ್ ಸಿಗ್ನಲ್ ನೀಡಿ ರಾಜ್ಯದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೇವಲ ಕನ್ನಡ ಪರ ಹೋರಾಟಗಾರರ ಸಂಘಗಳು ಮಾತ್ರವಲ್ಲದೆ ಕನ್ನಡಿಗರೆಲ್ಲರೂ ರಾಜ್ಯದೆಲ್ಲೆಡೆ ಬೀದಿಗಿಳಿದು ಪ್ರತಿಭಟಿಸಿ ರಾಜ್ಯ ಸರ್ಕಾರದ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ ಮುಂದುವರಿಯಲು ಬಿಟ್ಟರೆ ತಮಿಳು, ತೆಲುಗು, ಹಿಂದಿ ಅಭಿವೃದ್ಧಿ ಪ್ರಾಧಿಕಾರಗಳನ್ನು ಸ್ಥಾಪಿಸಿ ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಮಹಾರಾಷ್ಟ್ರ ರಾಜ್ಯಕ್ಕೆ ಯಡಿಯೂರಪ್ಪ ಮಾರುವುದಕ್ಕೂ ಹೇಸುವುದಿಲ್ಲ ಎಂಬ ಟೀಕೆಗಳಿಗೆ ಯಡಿಯೂರಪ್ಪ ಪಾತ್ರರಾಗುತ್ತಿದ್ದಾರೆ.

ಬಿಜೆಪಿ ಸರ್ಕಾರದ ಈ ನಡೆ ಬಸವ ಕಲ್ಯಾಣದಲ್ಲಿ ರಂಗೇರುತ್ತಿರುವ ಚುನಾವಣೆ ಹಿನ್ನಲೆಯಲ್ಲಿ ಮರಾಠಿ ಮತದಾರರನ್ನು ಸೆಳೆಯಲು ಹೆಣೆದಿರುವ ಕುತಂತ್ರ ಎಂಬುದು ರಾಜಕೀಯ ಅನಕ್ಷರಸ್ತರೂ ಸಹ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದಾಗಿದೆ. ಆದರೆ ವದಂತಿಗಳ ಪ್ರಕಾರ ಇದರ ಹಿಂದೆ ಪ್ರಧಾನಿ ಮೋದಿಯವರ ಕೈವಾಡವೂ ಇದೆ.

ಮಹಾರಾಷ್ಟ್ರ ರಾಜ್ಯವನ್ನು ಪ್ರಸ್ತುತ ಏನ್.ಡಿ.ಎ, ಶಿವ ಸೇನೆ ಹಾಗು ಬಿಜೆಪಿ ಪಕ್ಷಗಳ ಮೈತ್ರಿ ಕೂಟವು ಆಳುತ್ತಿದ್ದು, ಬಿಜೆಪಿ ಪಕ್ಷವು ಮಹಾರಾಷ್ಟ್ರ ರಾಜ್ಯದಲ್ಲಿ ಸ್ವಾಲಂಬಿಯಾಗಿ ಸರ್ಕಾರ ನೆಡೆಸುವ ಕನಸನ್ನು ಹೊತ್ತಿದ್ದೆ. ಆದ್ದರಿಂದ ಕರ್ನಾಟಕದಲ್ಲಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯನ್ನು ಬಿಜೆಪಿ ಪಕ್ಷವು ಬಸವ ಕಲ್ಯಾಣ ಹಾಗು ಮಹಾರಾಷ್ಟ್ರದಲ್ಲಿನ ಮತದಾರರನ್ನು ಸೆಳೆಯಲು ಮಾಡಿರುವ ಕುತಂತ್ರದಂತೆ ಕಾಣುತ್ತಿದೆ.

Leave a Reply