ಬಿಜೆಪಿ ಸರ್ಕಾರವು 2014 ರಲ್ಲಿ ಲೋಕ ಸಭಾ ಚುನಾವಣೆಯನ್ನು ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಾಗಲಿನಿಂದಲೂ ಹಣ ಹಾಗು ಮಧ್ಯ ಹಂಚಿ ಮತಗಳನ್ನು ಖರೀಧಿಸಿ ಚುನಾವಣೆಗಳನ್ನು ಗೆದ್ದು, ಅದು ಸಾಧ್ಯವಾಗದೆ ಇರುವ ರಾಜ್ಯಗಳಲ್ಲಿ ಶಾಸಕರನ್ನೇ ಖರೀಧಿ ಮಾಡಿ ವೈರಾಣುವಿನಂತೆ ದೇಶದೆಲ್ಲೆಡೆ ಅಧಿಕಾರದ ಕುರ್ಚಿಯನ್ನೇರುತ್ತಾ ಹರಡಿದೆ.

2019 ರಲ್ಲಿ ಮೈತ್ರಿ ಸರ್ಕಾರದ 17 ಮಂದಿ ಶಾಸಕರಿಗೆ ಹಣ ಹಾಗು ಅಧಿಕಾರದ ಆಮಿಷವೊಡ್ಡಿ ಕೊಂಡುಕೊಂಡು ಅಧಿಕಾರ ಸ್ಥಾಪಿಸಿದಾಗಲಿನಿಂದ ಕರ್ನಾಟಕಕ್ಕೂ ಬಿಜೆಪಿ ಎಂಬ ರೋಗ ಅಂಟಿದ್ದು.

ಈ ಪಕ್ಷವು ಅಧಿಕಾರಕ್ಕೆ ಬಂದಾಗಲಿನಿಂದಲೂ ಪ್ರಜೆಗಳಲ್ಲಿನ ಜಾತ್ಯತೀತ ಮನೋಭಾವವನ್ನು ಕಿತ್ತು ಒಗೆದು ಕೋಮುವಾದ ಹಾಗು ಜಾತೀಯತೆ ದೇಶದೆಲ್ಲೆಡೆ ಹತ್ತು ಪಟ್ಟು ಹೆಚ್ಚಿಸಿ ಸಮಾಜದಲ್ಲಿನ ಸೌಹಾರ್ದತೆಯನ್ನು ನಾಶ ಮಾಡಿದೆ. ಅಲ್ಲದೆ ಅಲ್ಪಸಂಖ್ಯಾತರ ವಿರೋಧಿ ಪಕ್ಷವಾದ ಬಿಜೆಪಿ ಸರ್ಕಾರದಡಿ ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಲ್ಲೂ ಬಾರಿ ಭ್ರಷ್ಟಾಚಾರ ನೆಡೆದಿರುವುದು ಈಗ ಬಯಲಾಗಿದೆ.

ಅಲ್ಪಸಂಖ್ಯಾತರ ಅಭಿವೃದ್ಧಿ ಕಲ್ಯಾಣ ಇಲಾಖೆಯಲ್ಲಿ ಮಸೀದಿ, ಜೈನ ಬಸದಿ, ಗುರುದ್ವಾರಗಳಿಗೆ ವಾಟರ್ ಫಿಲ್ಟರ್ ಅಳವಡಿಕೆಯಲ್ಲಿ ಸುಮಾರು 17 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಮಾಡಿದ್ದಾರೆ . 39,000 ಸಾವಿರ ರೂಪಾಯಿಗಳ ಮೊಲ್ಯದ ವಾಟರ್ ಫಿಲ್ಟರ್ ಗೆ 1,49,919 ಸಾವಿರ ರೂಪಾಯಿಗಳನ್ನು ಬಿಲ್ ಮಾಡಿ ಬಾರಿ ಭ್ರಷ್ಟಾಚಾರ ನಡೆಸಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.

ಅಲ್ಲದೆ ಟೆಂಡರ್ ನಡೆಸದೆ, ಜಿಲ್ಲಾವಾರು ಹಣ ಬಿಡುಗಡೆ ಮಾಡಿದ್ದಾರೆ. ವಕ್ಫ್ ಮಂಡಳಿಗೆ ಸೇರಿದ 4 ಕೋಟಿ ರೂಪಾಯಿಗಳನ್ನು ದುರ್ಬಳಿಕೆ ಮಾಡಿದ್ದ ಅಧಿಕಾರಿಯನ್ನು ರಕ್ಷಿಸಿದ್ದಾರೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಹಣವನ್ನೂ ಸಹ ದುರಬಳಿಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಿಗಮಕ್ಕೆ ಹೊರಗುತ್ತಿಗೆ ನೇಮಕದಲ್ಲೂ ಅವ್ಯವಹಾರ ನಡೆದಿರುವುದಕ್ಕೆ ದಾಖಲೆಗಳು ದೊರೆತಿವೆ. ಕೆಎಎಸ್ ಅಲ್ಲದ ಅಧಿಕಾರಿಗಳನ್ನು ಇಲಾಖೆಗೆ ನಿಯೋಜಿಸಲಾಗಿದೆ. ಹೀಗೆ ಬಿಜೆಪಿ ಸರ್ಕಾರದಡಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿರುವುದು ಎಳೆಎಳೆಯಾಗಿ ಬೆತ್ತಲಾಗುತ್ತಿದೆ. ಇನ್ನು ಎಷ್ಟು ದಿನ ದೇಶ ಹಾಗು ರಾಜ್ಯದ ಜನ ಈ ಭ್ರಷ್ಟ ಬಿಜೆಪಿ ಪಕ್ಷದ ದೌರ್ಜನ್ಯವನ್ನು ಸಹಿಸಿಕೊಳ್ಳಬೇಕು? ನೀವು ನಿರ್ಧರಿಸಿ!