ಡಿ.ಕೆ ಶಿವಕುಮಾರ್ ನಿರ್ಧಾರಕ್ಕೆ ಕ್ಯಾರೇ ಅನ್ನದ ಹೈ ಕಮಾಂಡ್

ಮೊನ್ನೆಯಷ್ಟೇ ಮಗಳ ನಿಶ್ಚಿತಾರ್ಥ ನೆರವೇರಿಸಿದ ಡಿ.ಕೆ ಶಿವಕುಮಾರ್ ವೃತ್ತಿ ಜೀವನದಲ್ಲಿ ಬಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ. ತಮ್ಮ ಸಮಾಧಾನಕ್ಕಾಗಿ ಇವಿಎಂ ಮೇಲೆ ಗೂಬೆ ಕೂರಿಸಿದರೂ, ಶಿರಾ ಹಾಗು ಆರ್.ಆರ್ ನಗರದ ಸೋಲು ಕಾಂಗ್ರೆಸ್ ನವ ರಾಜ್ಯಾಧ್ಯಕ್ಷನಿಗೆ ಮುಜುಗರ ಉಂಟು ಮಾಡಿದೆ.

ಕಾಂಗ್ರೆಸ್ ಪಕ್ಷವು ದೇಶದೆಲ್ಲೆಡೆ ಮುಳುಗುತ್ತಿರುವ ಹಡಗಿನ ಪರಿಸ್ಥಿಯಲ್ಲಿದೆ. ಕರ್ನಾಟಕದಲ್ಲಿ ಸಾಲು ಉಪಚುನಾವಣೆಗಳ ಸೋಲನ್ನು ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷವು ಕೊಂಚ ಮಟ್ಟಿಗಾದರೂ ಅಸ್ತಿತ್ವ ಕಾಪಾಡಿಕೊಳ್ಳಬೇಕೆಂದರೆ ೨೦೨೩ ರ ವಿಧಾನ ಸಭಾ ಚುನಾವಣೆಯನ್ನು ಎದುರಿಸಲು ಈಗಾಲಿನಿಂದಲೇ ತಯಾರಿ ನೆಡೆಸಬೇಕಾಗಿದೆ.

ಈ ವೇಳೆ ಸ್ವತಃ ಡಿಕೆಶಿ ಅಂತಿಮಗೊಳಿಸಿದ್ದ ಪದಾಧಿಕಾರಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈ ಕಮಾಂಡ್ ತಿರಸ್ಕರಿಸಿ ಅಪನಂಬಿಕೆ ತೋರಿದೆ. ಸಾಂಘಿಕ ತೀರ್ಮಾನದ ಕೊರತೆ ಇದಕ್ಕೆ ಮುಖ್ಯ ಕಾರಣವಾಗಿದೆ. ಅದಲ್ಲದೆ ಡಿಕಿಶಿ ಇತರೆ ನಾಯಕರ ಸಲಹೆಗಳು ಹಾಗು ಅಭಿಪ್ರಾಯಗಳನ್ನು ತಮಗೆ ಬೇಕಾದವರಿಗೆ ಪದವಿಗಳನ್ನು ನೀಡಿ ಸಾರ್ವಭೌಮತ್ವ ಮೆರೆಯಲು ಯತ್ನಿಸಿರುವುದು ಕಾಂಗ್ರೆಸ್ ಹೈ ಕಮಾಂಡ್ ಗೆ ಕೊಂಚವೂ ಕಾಣುತ್ತಿಲ್ಲ. ಇದು ಕಾಂಗ್ರೆಸ್ ಪಾಳಯದಲ್ಲಿ ಶಿವಕುಮಾರ್ ಗೆ ಬಾರಿ ಮುಖಬಂಗಾ ಉಂಟು ಮಾಡಿದೆ.

Leave a Reply