ಹೆಚ್.ಡಿ.ಕೆ ಬಡವರ ಬಂಧು ಯೋಜನೆಯನ್ನು ಅಳವಡಿಸಿಕೊಂಡ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ರಾಜ್ಯದಲ್ಲಿನ ನಾಲ್ಕೂವರೆ ಲಕ್ಷ ಬೀದಿ ಬದಿ ವ್ಯಾಪಾರಿಗಳು ಹಾಗೂ ಸಣ್ಣ ವರ್ತಕರಿಗೆ ಅನುಕೂಲವಾಗುವಂತೆ ಬಡ್ಡಿ ರಹಿತವಾಗಿ 10,000 ರೂಪಾಯಿಗಳ ಸಾಲವನ್ನು ಮಂಜೂರು ಮಾಡುವ ಸಲುವಾಗಿ ‘ಬಡವರ ಬಂಧು’ ಯೋಜನೆಯನ್ನು ಹೆಚ್.ಡಿ ಕುಮಾರಸ್ವಾಮಿ ರವರು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದರು. ಮೀಟರ್ ಬಡ್ಡಿ ದಂಧೆಕೋರರ ಹಾವಳಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಹಾಗು ಸಣ್ಣ ವಕ್ತಾರರಿಗೆ ಮುಕ್ತಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

ಈ ಯೋಜನೆಯನ್ನು ಕೇಂದ್ರ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿ ಹೋಗಿರುವ ದೇಶದ ಆರ್ಥಿಕತೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ರೂಪಿಸಿರುವ ಆತ್ಮನಿರ್ಭಾರ್ ಭಾರತ್ ಯೋಜನೆಯ ಅಂಗವಾಗಿ ‘ಪಿಎಂ ಸ್ವನಿಧಿ’ ಹೆಸರಿನಲ್ಲಿ ಅಳವಡಿಸಿಕೊಳ್ಳಲಾಯಿತು. ಆದರೆ ಕೇಂದ್ರ ಸರ್ಕಾರ ಮೇಲಾಧಾರವಿಲ್ಲದೆ ವ್ಯಾಪಾರಿಗಳಿಗೆ ಮಂಜೂರು ಮಾಡುವ ಸಾಲ ಬಡ್ಡಿ ರಹಿತವಾಗಿರುವುದಿಲ್ಲ.


ಈಗ ಆಂಧ್ರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಕೂಡ ಈ ಯೋಜನೆಯನ್ನು ‘ಜಗನನ್ನ ತೋಡು’ ಎಂಬ ಹೆಸರಿನಲ್ಲಿ ಅಳವಡಿಸಿಕೊಂಡಿದ್ದಾರೆ. ಹಾಗು ಕುಮಾರಸ್ವಾಮಿ ಅವರ ಯೋಜನೆಯಂತೆ ಆಂಧ್ರ ರಾಜ್ಯ ಸರ್ಕಾರವು ಸಹ ಬಡ್ಡಿ ರಹಿತ ಹಾಗು ಮೇಲಾಧಾರವಿಲ್ಲದೆ ಸಾಲ ನೀಡಲು ನಿರ್ಧರಿಸಿದೆ.


ಕುಮಾರಸ್ವಾಮಿ ರವರ ಯೋಜನೆಗಳಿಂದ ಇತರೆ ರಾಜ್ಯಗಳ ನಾಯಕರು ಪ್ರೇರಿಪಿತರಾಗಿ ತಮ್ಮ ರಾಜ್ಯಗಳಿಗೆ ಅಳವಡಿಸಿಕೊಂಡಿರುವುದು ಇದೇನು ಮೊದಲಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ರವರ ಆತ್ಮ ನಿರ್ಭಾರ್ ಭಾರತ್ ಯೋಜನೆಗೂ ಕುಮಾರಸ್ವಾಮಿರವರ ‘ಕಾಂಪೀಟ್ ವಿಥ್ ಚೈನಾ’ ಯೋಜನೆಗೆ ಬಹಳಷ್ಟು ಸಾಮ್ಯತೆ ಇದೆ.


ರಾಜಕೀಯ ಬದಿಗಿಟ್ಟು ಗಮನಿಸಿದಾಗ ಹೆಚ್.ಡಿ ಕುಮಾರಸ್ವಾಮಿ ಅಲ್ಪಾವಧಿಯಲ್ಲಿ ಮಾದರಿ ಯೋಜನೆಗಳನ್ನು ರೂಪಿಸಿರುವ ಕರ್ನಾಟಕದ ಅತ್ಯಂತ ವಿಶಿಷ್ಟ ಮುಖ್ಯಮಂತ್ರಿ ಎನ್ನಬಹುದು. ಇಂತಹ ಘಟನೆಗಳು ಅವರ ದಾರ್ಶನಿಕತೆಯನ್ನು ಸಾಬೀತುಪಡಿಸುತ್ತವೆ.

Leave a Reply