ಕನ್ನಡ ಹೋರಾಟಗಾರರು ರೋಲ್ ಕಾಲ್ ಗಿರಾಕಿಗಳು ಎಂದ ಬಿಜೆಪಿ ಶಾಸಕ!

ಬಿಜೆಪಿ ಪಕ್ಷದ ಕೈಗೆ ಅಧಿಕಾರ ಕೊಡಲು ನಮ್ಮ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಅಡವಿಗೆ ಇಟ್ಟಂತ್ತಾಗಿದೆ ಕನ್ನಡಿಗರ ಪರಿಸ್ಥಿತಿ. ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಲು ೨೦೧೪ ಹಾಗು ೧೦೧೯ ರ ಲೋಕ ಸಭಾ ಚುನಾವಣೆಗಳಲ್ಲಿ ಅವಿಭಕ್ತ ಬೆಂಬಲ ನೀಡಿದ ಕರ್ನಾಟಕ ರಾಜ್ಯವನ್ನುಅಧಿಕಾರಕ್ಕೆ ಬಂದಾಗಲಿನಿಂದಲೂ ಕೇಂದ್ರ ಸರ್ಕಾರ ಕಡೆಗಣಿಸುತ್ತಲೇ ಬರುತ್ತಿರುವುದು ಅವರು ನೀಡುವ ಅನುದಾನದ ಪರಿಯಿಂದಲೇ ಸ್ಪಷ್ಟವಾಗಿದೆ.

ಈಗ ಬಿಜೆಪಿ ನಾಯಕರು ನಮ್ಮ ನುಡಿಯ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಕನ್ನಡ ಪರ ಹೋರಾಟಗಾರನ್ನು ಸಹ ಲೇವಡಿ ಮಾಡುವ ಮಟ್ಟಿಗೆ ಇಳಿದಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಪರ ಹೋರಾಟಗಾರರು ರೋಲ್ ಕಾಲ್ ಗಿರಾಕಿಗಳು ಹಾಗು ನಕಲಿಗಳು ಎಂದು ಹೇಳುವ ಮೂಲಕ ಕನ್ನಡ ಪರ ಹೋರಾಟಗಾರರನ್ನು ಹೀಯಾಳಿಸಿದ್ದಾರೆ.

ಅಲ್ಲದೆ ತನ್ನ ಕ್ಷೇತ್ರದಲ್ಲಿ ಕನ್ನಡ ಪರ ಹೋರಾಟ ಮಾಡಲು ಬಿಡುವುದಿಲ್ಲ ತಾಕತ್ತು ಇದ್ದರೆ ಮಾಡಲಿ ಎಂದು ಬೇರೆ ಸವಾಲು ಎಸಗಿದ್ದಾರೆ. ರಾಷ್ಟ್ರೀಯ ಪಕ್ಷವನ್ನು ಆಯ್ದುಕೊಂಡಿರುವ ನಮ್ಮ ಕನ್ನಡಿಗರ ಪರಿಸ್ಥಿತಿ ಇದು.

Leave a Reply