ಯಡಿಯೂರಪ್ಪನ ಆಫೀಸು ರಿಯಲ್ ಎಸ್ಟೇಟ್ ದಂಧೆಗೆ ಸಮ!

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಇಂದು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಲಾಗಿದೆ.

ಕನ್ನಡಿಗರದ್ದೇ ನಾನಾ ಬಗೆಯ ಸಮಸ್ಯೆಗಳು ತುಂಬಿ ತುಳುಕಿತ್ತಿರುವಾಗ ಮರಾಠ ಅಭಿವೃದ್ಧಿ ನಿಗಮ ರಚಿಸುವ ಅವಶ್ಯಕತೆಯಾದರು ಏನಿತ್ತು ಎಂಬುವ ಪ್ರಶ್ನೆ ಮೂಡುವ ಮುನ್ನವೇ, ಬಿಜೆಪಿಯ ಚುನಾವಣೆ ಗಿಮಿಕ್ ಗಳು ಅರಿತವರ ಗಮನ ಬಸವ ಕಲ್ಯಾಣ ಕ್ಷೇತ್ರದತ್ತ ಹರಿಯಿತು. ಬಸವ ಕಲ್ಯಾಣದಲ್ಲಿ ಸದ್ಯದಲ್ಲೇ ನಡೆಯಲಿರುವ ಉಪಚುನಾವಣೆ ಹಿನ್ನಲೆಯಲ್ಲಿ ಅಲ್ಲಿನ ಜನಸಂಖ್ಯೆಯ ಸುಮಾರು ಶೇ. ೩೦ ರಷ್ಟು ಪ್ರಮಾಣವಿರುವ ಮರಾಠಿಗರ ಮತ ಸೆಳೆಯಲು ಬಿಜೆಪಿ ಪಕ್ಷ ರೂಪಿಸಿರುವ ಕುತಂತ್ರವಿದು ಎಂಬುದು ತಿಳಿದಾಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಇಂದು ರಾಜ್ಯ ಸರ್ಕಾರದ ಕನ್ನಡಿಗರ ಬಗೆಗಿನ ಧೋರಣೆ ಬಗ್ಗೆ ರಾಜ್ಯದೆಲ್ಲೆಡೆ ಕನ್ನಡ ಪರ ಹೋರಾಟಗಾರರ ಸಂಘಗಳು ಬಂದ್ ಗೆ ಕರೆ ನೀಡಿವೆ. ಆದರೆ ಕನ್ನಡಿಗರ ಹೋರಾಟವನ್ನುವಿಫಲಗೊಳಿಸಲು ಬಿಜೆಪಿ ಸರ್ಕಾರವು ಹಲವಾರು ಹೋರಾಟಗಾರರನ್ನು ಈಗಾಗಲೇ ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಹಾಗು ಶಾಂತಿಯುತವಾಗಿ ರ್ಯಾಲಿ ಮಾಡಲು ಸಹ ಅವಕಾಶ ಕಲ್ಪಿಸಿಕೊಟ್ಟಿಲ್ಲವೆಂಬುದು ಬೆಳಕಿಗೆ ಬಂದಿದೆ.

ಇದರ ಕುರಿತು ಟೌನ್ ಹಾಲ್ ಎದುರು ಮಾತನಾಡಿದ ಕನ್ನಡ ಪರ ಹೋರಾಟಗಾರನು ‘ ಮರಾಠಿ ಯಡಿಯೂರಪ್ಪ ಪೊಲೀಸರಿಂದ ನಮ್ಮನ್ನು ಹತ್ತಿಕ್ಕುತ್ತಿದ್ದಾರೆ. ಪ್ರಜಾ ಪ್ರಭುತ್ವಕ್ಕೆ, ಕಾನೂನಿಗೆ, ನಮ್ಮ ಪ್ರತಿಭಟನಾ ಹಕ್ಕುಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲ. ನಿಮ್ಮ ಕಚೇರಿಗೆ ಬಂದರೆ ನೀವು ಸೇರಿಸುವುದಿಲ್ಲ ಹಾಗು ನಮಗೆ ಸ್ಪಂದಿಸುವುದು ಇಲ್ಲ. ನೀನು ಬಡವರಿಗೆ ಒಳ್ಳೆಯದನ್ನು ಮಾಡುತ್ತಿಲ್ಲ. ಯಾರಿಗಾಗಿ ಈ ಸರ್ಕಾರ? ಎಲ್ಲಾ ಕಮಿಷನ್ ದಂಧೆ. ಯಡಿಯೂರಪ್ಪನ ಆಫೀಸು ರಿಯಲ್ ಎಸ್ಟೇಟ್ ದಂಧೆಗೆ ಸಮ’ ಎಂದು ಕಿಡಿಕಾರಿದ್ದಾರೆ.  

Leave a Reply