ಇನ್ನೊಂದು ವಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ಬರೋ ಬರಿ 90 ರೂ ಗಳು!

ಕಳೆದ 16 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ₹ 2.07 ಹಾಗು ಡೀಸೆಲ್ ಬೆಲೆ ₹ 2.86 ರಷ್ಟು ಬೆಲೆ ಏರಿಕೆ ಕಂಡು ಸದ್ಯ ಪ್ರತಿ ಲೀಟರ್ ಪೆಟ್ರೋಲ್ ಗೆ ರೂ. 85.78 ಹಾಗು ಡೀಸೆಲ್ ಗೆ ರೂ. 77.6 ಆಗಿದೆ. ಇದಲ್ಲದೆ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಕೂಡ 50 ರೂ ಗಳಷ್ಟು ಬೆಲೆ ಏರಿಕೆ ಕಂಡಿದೆ.

ಬಿಜೆಪಿ ಸರ್ಕಾರವು ದಿನೇ ದಿನೇ ಇಂಧನದ ವೆಚ್ಚ ಏರಿಕೆ ಮಾಡುತ್ತಿರುವುದಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಇಳಿಕೆಯಾದಾಗಲೂ ಸಹ ದೇಶದಲ್ಲಿ ಇಂಧನದ ಬೆಲೆ ಕಡಿಮೆ ಮಾಡದೇ ಜನ ಸಾಮಾನ್ಯರ ಪರಿಸ್ಥಿಯನ್ನು ಇಕ್ಕಟ್ಟಿಗೆ ನೂಕುತ್ತಿದೆ.

ಹೀಗೆ ಮುಂದುವರೆದರೆ ಇನ್ನೊಂದು ವಾರದಲ್ಲಿ ತೈಲ ಬೆಲೆ ಪ್ರತಿ ಲೀಟರ್ ಗೆ 90 ರೂ ಗಳಾದರೂ ಅಚ್ಚರಿಯಿಲ್ಲ ಎಂದು ಹಣಕಾಸು ತಜ್ಞರು ಹೇಳಿದ್ದಾರೆ. ದೇಶದ ಜನ ಇದೇನಾ ಸ್ವಾಮಿ ನೀವು ಭರವಸೆ ನೀಡಿದ್ದ ಅಚ್ಛೇ ದಿನ್ ಎಂದು ಕೇಳುವಂತ್ತಾಗಿದೆ.

Leave a Reply