ನೆರೆ ಪರಿಹಾರ ಒದಗಿಸುವುದಲ್ಲ ನೆರೆ ಹಾವಳಿ ತಡೆಯಲು ಸ್ಥಿರ ಪರಿಹಾರ ಕಂಡುಕೊಳ್ಳಬೇಕು-ಶಿವಲಿಂಗೇಗೌಡರ ಖಡಕ್ ಭಾಷಣ

ಶಾಲೆ ಪಠ್ಯಪುಸ್ತಕದಲ್ಲಿದ್ದ ಯಾವುದೊ ಪದ್ಯವೊಂದರಲ್ಲಿ ಮಳೆಗಾಲದಲ್ಲಿ ಮರ-ಗಿಡಗಳು ಸಂತಸದಿ ಕುಣಿಯುತ್ತವೆ ಎಂದು ಓದಿದ ನೆನಪು ನಮಗೆಲ್ಲರಿಗೂ ಇರುತ್ತದೆ. ಆದರೆ ನಿಜ ಜೇವನದಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಉತ್ತರ ಕರ್ನಾಟಕ, ಕೊಡಗು ಅಥವಾ ಮಲೆನಾಡಿನಲ್ಲಿ ಅತಿಯಾದ ಮಳೆಯುಂಟಾಗಿ ಪ್ರವಾಹದಿಂದ, ಭೂ ಕುಸಿತದಿಂದ ಸಾವಿರಾರು ಜನರು ಮನೆ ಮಠ ಅಷ್ಟೇ ಯಾಕೆ ತಮ್ಮ ಜೀವನೋಪಾಯವನ್ನೇ ಕಳೆದುಕೊಳ್ಳುವ ದುರ್ಘಟನೆಗಳ ಬಗ್ಗೆ ಮಾತ್ರವೇ ಕೇಳುತ್ತಿದ್ದೇವೆ. ಆದರೆ ಪ್ರಕೃತಿ ವಿಕೋಪಕ್ಕೆ ಮನುಷ್ಯನಿಂದ ಅದನ್ನು ಅನುಭವಿಸುವುದನ್ನು ಬಿಟ್ಟು ಇನ್ನೇನು ಮಾಡಲು ಸಾಧ್ಯ ಅನ್ನುತ್ತೀರಾ? ಇದರ ಬಗ್ಗೆ ಜೆಡಿಎಸ್ ಪಕ್ಷದ ನಾಯಕ ಕೆ.ಎಂ ಶಿವಲಿಂಗೇ ಗೌಡರ ಅಭಿಪ್ರಾಯ ಬೇರೆಯದ್ದೇ ಇದೆ.

ಸೋಮವಾರದಿಂದ ಪ್ರಾರಂಭವಾದ ಚಳಿಗಾಲದ ಅಧಿವೇಶನದ ಮೊದಲನೇ ದಿನದಲ್ಲಿ ರಾಜ್ಯದ ಹಾಗು ದೇಶದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವುದಲ್ಲದೆ ತಮ್ಮ ಆಡಳಿತ ವೈಖರಿಯ ಬಗ್ಗೆ ತಮ್ಮದೇ ಪಕ್ಷದ ನಾಯಕರಿಂದ ಸಾಕಷ್ಟು ಬೇಸರ ವ್ಯಕ್ತವಾದದ್ದು ಕಂಡು ಬಂತು. ಹಾಗೆಯೆ ಆರಿಸಿಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡರು ಸಹ ಸಭೆಯಲ್ಲಿ ಮಾತನಾಡಿ ಅವರ ಹೆಸರನ್ನು ಗೂಗಲ್ ನಲ್ಲಿ ಹುಡುಕಿದಾಗ ತಕ್ಷಣ ಕಂಡು ಬರುವ ‘ಶಿವ ಲಿಂಗೇಗೌಡರ ಅದ್ಬುತ ಭಾಷಣ’ ಎಂಬ ವಿಡಿಯೋಗಳ ಪಟ್ಟಿಗೆ ಮತ್ತೊಂದು ಸೇರಿಸುವಂತೆ ಮಾತನಾಡಿದರು.

ನೆರೆ ಸಂತ್ರಸ್ತರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಲು ವಿಫಲವಾದವು ಎಂದು ವಿಪಕ್ಷ ನಾಯಕರು ಟೀಕಿಸುವುದು, ಆಕ್ರೋಶ ವ್ಯಕ್ತಪಡಿಸುವುದು ಡೈನೋಸಾರ್ ಯುಗದಿಂದಲೂ ನೆಡೆದು ಬರುತ್ತಿದೆ. ಆದರೆ ನೆರೆ ಹಾವಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಯಾರು ಸಹ ಯೋಚಿಸುತ್ತಿಲ್ಲ. ಪ್ರತಿ ವರ್ಷ ಸಾವಿರಾರು ಕೋಟಿ ನೆರೆ ಪರಿಹಾರಕ್ಕಾಗಿ ಖರ್ಚು ಮಾಡಿದರೆ ರಾಜ್ಯದ ಆರ್ಥಿಕತೆಯ ಸ್ಥಿತಿ ಏನಾಗುತ್ತದೆ? ಈ ಕುರಿತು ಶಿವಲಿಂಗೇ ಗೌಡರು ಅದ್ಭುತವಾಗಿ ಮಾತನಾಡಿರುವ ವಿಡಿಯೋ ನೀವೇ ವೀಕ್ಷಿಸಿ:

Leave a Reply