ಕುಮಾರಸ್ವಾಮಿ ಸಾರಿಗೆ ನೌಕರರನ್ನು ಸರ್ಕಾರೀ ನೌಕರರನ್ನಾಗಿ ಮಾಡಲು ಜನವರಿಯಲ್ಲಿ ಬರೆದ ಪತ್ರ ವೈರಲ್!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ತಮನ್ನು ಸಹ ಸರ್ಕಾರೀ ನೌಕರರನ್ನಾಗಿ ಪರಿಗಣಿಸಬೇಕೆಂಬ ಆಗ್ರಹದೊಂದಿಗೆ ಬೀದಿಗಿಳಿದ ಪ್ರತಿಭಟಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಇದೇ ಕಾರಣದಿಂದಾಗಿ ಕೆ.ಎಸ್.ಆರ್.ಟಿ.ಸಿ ಹಾಗು ಬಿ.ಎಂ.ಟಿ.ಸಿ ಸೇರಿದಂತೆ ಎಲ್ಲಾ ಸರ್ಕಾರೀ ಸಾರಿಗೆ ವಾಹನಗಳು ಬಸ್ ನಿಲ್ದಾಣಗಳೆಲ್ಲ ವಿಶ್ರಾಂತಿ ಪಡೆಯುತ್ತಿವೆ. ಇದರಿಂದಾಗಿ ಸಾರ್ವಜನಿಕರು, ಅದರಲ್ಲೂ ಸರ್ಕಾರೀ ಸಾರಿಗೆ ಮೇಲೆ ದಿನನಿತ್ಯ ಅವಲಂಬಿತರಾದವರಿಗೆ ಖಾಸಗಿ ಸಾರಿಗೆ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ಪ್ರಯಾಣ ಬೆಳೆಸುವ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸಾರಿಗೆ ಒಕ್ಕೂಟದ ಅಧ್ಯಕ್ಷರೊಂದಿಗೆ ಶುಕ್ರವಾರ ನಡೆಸಿದ ಎರಡೂ ಸಂಧಾನ ಸಭೆಗಳು ವಿಫಲವಾಗಿವೆ. ರಾಜ್ಯದಲ್ಲಿ ನಡೆದ 2018ರ ವಿಧಾನ ಸಭಾ ಚುನಾವಣೆಗೂ ಮುನ್ನ ಬಿ.ಎಸ್ ಯಡಿಯೂರಪ್ಪ ರಾಜ್ಯದ ಮೂಲೆ ಮೂಲೆಗೂ ಹೋಗಿ ಮತಯಾಚನೆ ಮಾಡುವಾಗ ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರ ಫಜೀತಿಗೆ ಅಂತ್ಯ ಹಾಡುತ್ತೇನೆ ಎಂದು ಭರವಸೆ ನೀಡಿದ್ದರು. ಬಹುಮತ ಬರದಿದ್ದರೂ ಸಹ ತಿಪ್ಪರಲಾಗ ಹಾಕಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಆದರೂ ಸಹ ಒಂದಾದ ಮೇಲೆ ಒಂದರಂತೆ ಬರುತ್ತಿರುವ ಚುನಾವಣೆಗಳನ್ನು ಗೆಲ್ಲಲು ತಮೆಲ್ಲ ಶಕ್ತಿಯನ್ನು ಹೂಡಿಕೆ ಮಾಡುತ್ತಿರುವ ಸಿ.ಎಂ ಇಲ್ಲಿಯವರೆಗೂ ಇದರ ಬಗ್ಗೆ ಉಸಿರು ಎತ್ತಿಲ್ಲ. ಬಹುಷಃ ವೃದ್ದಾಪ್ಯದ ಪರಿಣಾಮ ಈ ವಿಚಾರವನ್ನು ಮರೆತಿರಬಹುದೇನೋ ಎನ್ನಲಿಕ್ಕೂ ಸಾಧ್ಯವಿಲ್ಲ. ಏಕೆಂದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜನವರಿ ತಿಂಗಳಲ್ಲೇ ಇವರಿಗೆ ಇದರ ಬಗ್ಗೆ ಮುತುವರ್ಜಿ ವಹಿಸಲು ಖುದ್ದಾಗಿ ಅವರೇ ಪತ್ರ ಬರೆದಿದ್ದು, ಈ ಪತ್ರವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಹಳಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಈ ಪತ್ರದಲ್ಲಿ ಕುಮಾರಸ್ವಾಮಿ ಸರ್ಕಾರೀ ಸಾರಿಗೆ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಸಂಕಷ್ಟವನ್ನು ವಿವರಿಸಿ, ಅವರನ್ನು ಪೂರ್ಣ ಪ್ರಮಾಣದ ನೌಕರರನ್ನಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ. ಪತ್ರದ ಪ್ರತಿ ಹೀಗಿದೆ:

Leave a Reply