ಸಿದ್ದರಾಮ್ಮಯ್ಯನ ಅವ್ಯವಹಾರಗಳನ್ನು ಬಹಿರಂಗಪಡಿಸಿದ ಹೆಚ್.ಡಿ.ಕೆ!

ಸಮಯಕ್ಕೆ ಸರಿಯಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಜನರ ಹಿತವನ್ನು ಬದಿಗಿಟ್ಟು ವಿರೋಧ ಪಕ್ಷದಲ್ಲಿ ಇದ್ದೇನೆ ಎಂಬ ಏಕೈಕ ಕಾರಣಕ್ಕೆ ಅಧಿಕಾರದಲ್ಲಿರುವ ಪಕ್ಷದ ಪ್ರತಿ ನಡೆಗಳ ಬಗ್ಗೆ ತಿರುಳಿಲ್ಲದ ವಿರೋಧಗಳನ್ನು ವ್ಯಕ್ತಪಡಿಸುವ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ನಿಂದನೆಗಳಿಗೆ ಹೆಚ್.ಡಿ ಕುಮಾರಸ್ವಾಮಿ ತಿರುಗೇಟಿ ನೀಡಿದ್ದಾರೆ.

ಇಂದು ಜೆಡಿಎಸ್ ಪಕ್ಷ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾ ಘೋಷ್ಠಿಯಲ್ಲಿ ಕುಮಾರಸ್ವಾಮಿ ದೇಶ ಹಾಗು ರಾಜ್ಯದಲ್ಲಿ ಮಂಡನೆಯಾಗುತ್ತಿರುವ ಹಲವು ಕಾಯ್ದೆಗಳ ಬಗ್ಗೆ ತಮ್ಮ ಪಕ್ಷದ ನಿಲುವಗಳಿಗೆ ಪುನಃ ಸ್ಪಷ್ಟೀಕರಣ ನೀಡಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ಸಲಹೆಗಳನ್ನು ನೀಡಿದ್ದಾರೆ.

ಸರ್ಕಾರೀ ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಸರ್ಕಾರೀ ನೌಕರರನ್ನಾಗಿ ಪರಿಗಣಿಸಬೇಕೆಂದು ಪ್ರತಿಭಟನೆ ಮಾಡುತ್ತಿರುವವರಿಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ತಿಳಿ ಹೇಳಿ, ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರನ್ನು ವಿಧಾನ ಸೌಧಕ್ಕೆ ಆಹ್ವಾನಿಸಿ ಅವರ ಸಮಸ್ಯೆಯನ್ನು ಆಲಿಸುವಂತೆ ತಮ್ಮ ಕರ್ತವ್ಯ ನೆನಪಿಸಿದ್ದಾರೆ.

ಹಾಗು ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ಬಗ್ಗೆ ಮಾಹಿತಿಯ ಕೊರತೆಯಿಂದ ಹಲವು ಜನರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಇದರಿಂದ ಕೃಷಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ, ನಾನು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ ರೈತರ ಹಿತವನ್ನು ಬೆಂಬಲಿಸುತ್ತಿದ್ದೇನೆ ಅಷ್ಟೇ ಎಂದು ಹೇಳಿ, ಗೋ ಹತ್ಯೆ ನಿಷೇದ ಕಾಯ್ದೆಯನ್ನು ವಿರೋಧಿಸುವ ಬಿಜೆಪಿಯ ಓಲೈಕೆ ರಾಜಕಾರಣವನ್ನು ಟೀಕಿಸಿದರು.

ಇನ್ನುಕುಮಾರಸ್ವಾಮಿ ತಮ್ಮ ಬೇನಾಮಿ ಆಸ್ತಿಯನ್ನು ಕಾಪಾಡಿಕೊಳ್ಳಲು ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯ ಬೇನಾಮಿಯಲ್ಲಿ ನೆಡೆಸುತ್ತಿರುವ ಶುಗರ್ ಫ್ಯಾಕ್ಟರಿ ಪಬ್, ಅರ್ಕಾವತಿ ಬಡಾವಣೆಗಳಂತಹ ಅವ್ಯವಹಾರಗಳನ್ನು ಬೀದಿಗೆಳೆದು, ತಾವು ಬೇನಾಮಿ ಆಸ್ತಿಯ ವ್ಯವಹಾರ ಮಾಡಿರುವುದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಎಸೆದು ಟೀಕಿಸುವರರ ಬಾಯಿ ಮುಚ್ಚಿಸಿದ್ದಾರೆ.

Leave a Reply