ಕಬ್ಬು ಬೆಳೆಗಾರರ ಪುನಶ್ಚೇತನ ಹಾಗು ತೈಲ ಬೆಲೆ ಇಳಿಕೆಗೆ ಹೆಚ್.ಡಿ.ಕೆ ಮಾಸ್ಟರ್ ಪ್ಲಾನ್!

ಕಳೆದ ಹಲವು ವರ್ಷಗಳಿಂದ ಕರ್ನಾಟಕ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳು ತಮಗೆ ಪಾವತಿಸಬೇಕಾಗಿರುವ ಬಾಕಿ ಮೊತ್ತದ ಕುರಿತು, ಸಕ್ಕರೆ ಕಾರ್ಖಾನೆಗಳು ಮುಳುಗುತ್ತಿರುವ ತಮ್ಮ ಉದ್ಯಮದ ಬಗ್ಗೆ ಹೀಗೆ ಎರಡೂ ಪಂಗಡದವರು ತಮ್ಮ ಅಳಲು ತೋಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರವೂ ಸಹ ಹಲವು ಬಾರಿ ಎರಡೂ ಪಂಗಡದವರನ್ನು ಆಹ್ವಾನಿಸಿ ಸಭೆ ನೆಡಿಸಿ ಈ ಸಮಸ್ಯೆಗೊಂದು ಅಂತ್ಯ ಹಾಡಲು ಪ್ರಯತ್ನಿಸಿದರೂ, ಫಲಿತಾಂಶ ಅಷ್ಟರ ಮಟ್ಟಿಗೆ ಇದೆ.

ಅಲ್ಲದೆ ದಿನೇ ದಿನೇ ತೈಲ ಬೆಲೆ ಕಂಡು ಕೇಳರಿಯದ ಮಟ್ಟಿಗೆ ಏರಿಕೆಯಾಗಿ ಸಾಮಾನ್ಯ ಜನರ ಬಿಪಿ ಕೂಡ ಏರುವಂತೆ ಮಾಡಿದೆ. ಈ ಎರಡೂ ಸಮಸ್ಯೆಗಳಿಗೆ ಫಲಿತಾಂಶ ಒಂದೇ – ಎಥನಾಲ್ ಉತ್ಪಾದನೆಯಲ್ಲಿ ಒಂದಷ್ಟು ಮಹತ್ವದ ಬದಲಾವಣೆ ತರುವುದು. ಇದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವಂತ ಮಾಸ್ಟರ್ ಪ್ಲಾನ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಬಳಿಯಿದೆ.

ಈ ಹಿಂದೆಯೂ ಸಹ ದೇಶದ ರೈತರ ಕಷ್ಟಗಳನ್ನು ಆಲಿಸಲು ಪ್ರಧಾನಿ ಮೋದಿ ರೂಪಿಸಿದ್ದ ದೇಶದ ಹತ್ತು ಉನ್ನತ ಮುಖ್ಯಮಂತ್ರಿಗಳ ಮಂಡಳಿಯಲ್ಲಿ ಕುಮಾರಸ್ವಾಮಿ ಅವರಿಗೂ ಸಹ ಒಂದು ಪ್ರಮುಖ ಸ್ಥಾನ ಒದಗಿಸಿದ್ದರು. ರಾಜಕೀಯವಾಗಿ ಎಲ್ಲರಿಗೂ ಭಿನ್ನಾಭಿಪ್ರಾಯಗಳು ಇರುವುದು ಸಹಜ, ಆದರೆ ಒಬ್ಬ ಬುದ್ದಿವಂತ ದಾರ್ಶನಿಕ ಎಂಬುದು ಹಲವು ಬಾರಿ ಸಾಬೀತಾಗಿದೆ. ಹಾಗಾದರೆ ದೇಶವನ್ನು ಕಾಡುತ್ತಿರುವ ಈ ಎರಡು ಪ್ರಮುಖ ಸಮಸ್ಯೆಗಳನ್ನು ನಿವಾರಿಸಲು ಕುಮಾರಸ್ವಾಮಿ ಅವರು ತಯಾರಿಸಿರುವ ನೀಲಿನಕ್ಷೆ ಹೇಗಿದೆ? ನೀವೇ ಓದಿ:

Leave a Reply