ಗ್ರಾ.ಪಂ ಚುನಾವಣೆಯಲ್ಲೂ ಬಿಜೆಪಿಯಿಂದ ಯಂತ್ರ ದುರ್ಬಳಿಕೆ!

ದೇಶ ರಾಜಕೀಯದಲ್ಲಿ ಕೆಲವೇ ವರ್ಷಗಳ ಮುನ್ನ ಹಾತೆ ಹುಳದಂತಿದ್ದ ಭಾರತೀಯ ಜನತಾ ಪಕ್ಷವು ಈಗ ಪ್ರತಿ ಚುನಾವಣೆಯಲ್ಲೂ ಎದುರಾಳಿ ಪಕ್ಷಗಳಿಗೆ ಶೋಷಣೆಗೆ ಒಳಗಾಗಿರುವವರಂತೆ ಅನಿಸುವಷ್ಟು ಪ್ರಾಬಲ್ಯ ಸಾಧಿಸುತ್ತಿದ್ದೆ. ಈ ಹಿಂದಿನ ವಾಕ್ಯದಲ್ಲಿ ಶೋಷಣೆ ಎಂಬ ಪದ ಕೇವಲ ಬಿಜೆಪಿ ಪಕ್ಷದ ಶಕ್ತಿಯನ್ನು ವರ್ಣಿಸಲು ಉಪಯೋಗಿಸಿದ ರೂಪಕ ಮಾತ್ರವಲ್ಲ, ಅದು ವಾಸ್ತವಾಂಶ ಕೂಡ ಹೌದು.

ಬಿಜೆಪಿ ಅಧಿಕಾರಕ್ಕೆ ಬಂದಾಗಲಿನಿಂದಲೂ ಬಹುತೇಕ ಮಾಧ್ಯಮಗಳನ್ನು ಕಲ್ಮಶಗೊಳಿಸಿದ್ದರೂ, ಬೆರಳೆಣಿಕೆಯಷ್ಟು ಮಾಧ್ಯಮಗಳು ಬಿಜೆಪಿ ಪಕ್ಷದ ಅಧಿಕಾರ ದಾಹಕ್ಕೆ ಕನ್ನಡಿಯಾಗಿರುವ ಅವರ ಚುನಾವಣಾ ಕುತಂತ್ರಗಳನ್ನು ವರದಿ ಮಾಡುವಲ್ಲಿ ಕೊಂಚ ಮಟ್ಟಿಗೆ ಯಶಸ್ವಿಯಾಗಿದೆ.

ಇಂದಿನ ಕರಾವಳಿ ಅಲೆ ದಿನಪತ್ರಿಕೆಯಲ್ಲಿ ವರದಿಯಾಗಿರುವ ‘ಪಂ ಚುನಾವಣೆಯಲ್ಲಿ ಬಿಜೆಪಿಯಿಂದ ಆಡಳಿತ ಯಂತ್ರ ದುರ್ಬಳಿಕೆ ಆರೋಪ’ ಎಂಬ ಲೇಖನದಡಿ, ಬಿಜೆಪಿ ಪಕ್ಷವು ಪ್ರತಿಸ್ಪರ್ಧಿಗಳ ನಾಮ ಪತ್ರಗಳನ್ನು ಕ್ಷುಲ್ಲಕ ಕಾರಣಗಳನ್ನು ನೀಡಿ ತಿರಸ್ಕರಿಸುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿರುವ ಪ್ರಕರಣದ ಮೇಲೆ ಬೆಳಕು ಚೆಲ್ಲಲಾಗಿದೆ.

ಹೀಗೆ ಹಲವಾರು ಚುನಾವಣೆಗಳಲ್ಲಿ ಬಿಜೆಪಿ ತನ್ನ ಅಧಿಕಾರ ದುರ್ಬಳಿಕೆ ಮಾಡಿರುವ ಉದಾಹರಣೆಗಳಿವೆ. ತನ್ನ ರಾಜಕೀಯ ದುರುದ್ದೇಶಗಳಿಂದ ದೇಶದ ಕಾನೂನಿಗೆ ಅಪಮಾನ ಮಾಡುತ್ತಿರುವ ಬಿಜೆಪಿ ಪಕ್ಷದ ದುಷ್ಟ ರಾಜಕಾರಣಕ್ಕೆ ಕೊನೆ ಹಾಡುವುದು ಈಗ ಅನಿವಾರ್ಯವಾಗಿದೆ!

Leave a Reply