2023 ರಲ್ಲಿ ಹೆಚ್.ಡಿ.ಕೆ ಮತ್ತೆ ಸಿಎಂ! ನವಚೈತನ್ಯದೊಂದಿಗೆ ಜೆಡಿಎಸ್ ನೇತಾರ

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೆ.ಪಿ ಭವನದಲ್ಲಿನ ಜೆಡಿಎಸ್ ಪಕ್ಷ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯದ ಹಲವು ಪ್ರಮುಖ ವಿಷಯಗಳೊಡನೆ ಜೆಡಿಎಸ್ ಪಕ್ಷದ ಸ್ಥಿತಿಗತಿಯ ಬಗ್ಗೆ ಮಾತನಾಡಿದರು.

ಕುಮಾರಸ್ವಾಮಿ ಅವರು 2019 ರಲ್ಲಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದ ಬಳಿಕ ಸ್ವಪಕ್ಷ ನಾಯಕರಿಂದ ದ್ರೋಹ, ವಿಪಕ್ಷ ನಾಯಕರ ಕುತಂತ್ರ ಹೀಗೆ ನಾನಾ ಕಾರಣಗಳಿಂದ ಜೆಡಿಎಸ್ ಪಕ್ಷವು ಉಪಚುನಾವಣೆಗಳಲ್ಲಿ ಸೋಲು ಅನುಭವಿಸಿ ಶಕ್ತಿ ಕುಂದುವಂತ್ತಾಗಿದೆ.

ಆದರೆ ಜೆಡಿಎಸ್ ಪಕ್ಷವು ಫೀನಿಕ್ಸ್ ಪಕ್ಷಿಯಂತೆ ಎಂಬುದು ಕರ್ನಾಟಕ ರಾಜಕೀಯ ಇತಹಾಸದ ಪುಟಗಳನ್ನು ತಿರುವಿ ಹಾಕುವಾಗ ಸ್ಪಷ್ಟವಾಗಿ ತಿಳಿಯುತ್ತದೆ. ಪಕ್ಷವು ಇನ್ನೇನು ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ ಎಂದು ವಿಪಕ್ಷ ನಾಯಕಾರು ಕೇಕೆ ಹಾಕಿ ನಕ್ಕು ಮುಗಿಸುವ ಅಷ್ಟರಲ್ಲೇ ಪಕ್ಷವು ಪುಟಿದೆದ್ದಿರುವ ಹಲವು ಉದಾಹರಣೆಗಳಿವೆ. ಈಗ ಈ ಐತಿಹಾಸಿಕ ಘಟನೆ ಮರುಕಳಿಸುವ ಎಲ್ಲಾ ಲಕ್ಷಣಗಳು ಪ್ರಜ್ವಲಿಸುತ್ತಿದೆ.

ಇದೇ ಹುರುಪಿನಲ್ಲಿ ಕುಮಾರಸ್ವಾಮಿ ಅವರು ಮುಂದಿನ ಸಂಕ್ರಾಂತಿ, ಅಂದರೆ ಜನವರಿ 15 ರ ಬಳಿಕ ರೈತ ಪರ ಪಕ್ಷದ ಪುನಶ್ಚೇತನಕ್ಕೆ ಹಲವಾರು ಮಹೋನ್ನತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಧ್ಯಮಘೋಷ್ಠಿಯಲ್ಲಿ ಘೋಷಿಸಿದರು. ಹಾಗು ಇದು ಕೇವಲ ಹಳೆ ಮೈಸೂರು ಭಾಗಗಳಲ್ಲಿ ಮಾತ್ರ ನೆಡೆಯುವುದಿಲ್ಲ, ಉತ್ತರ ಕರ್ನಾಟಕದಿಂದ ಹಿಡಿದು ಕರ್ನಾಟಕದ ಪ್ರತಿ ಭಾಗಗಳಲ್ಲಿಯೂ ಪಕ್ಷ ಸಂಘಟನೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಲಗುತ್ತದೆ ಎಂದು ಹೇಳಿದರು.

One thought on “2023 ರಲ್ಲಿ ಹೆಚ್.ಡಿ.ಕೆ ಮತ್ತೆ ಸಿಎಂ! ನವಚೈತನ್ಯದೊಂದಿಗೆ ಜೆಡಿಎಸ್ ನೇತಾರ

  1. JAGADEESH N says:

    Next cm kumaranna

Leave a Reply