ಸಿದ್ದರಾಮಯ್ಯಗೆ ಗೌಡರ ಗುದ್ದು!

ಇಂದು ಜೆಡಿಎಸ್ ಪಕ್ಷದ ಅಧಿಕೃತ ಕಚೇರಿ, ಬೆಂಗಳೂರಿನ ಜೆಪಿ ಭವನದಲ್ಲಿ ಪಕ್ಷದ ಜನಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾಧ್ಯಮ ಘೋಷ್ಠಿ ನೆಡೆಸುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಯುವಕರು ನಾಚುವಂತೆ ಲವಲವಿಕೆಯಿಂದ ಜನಸೇವೆಯಲ್ಲಿ ಸಕ್ರಿಯರಾಗಿರುವ ದೇವೇಗೌಡರು ಇಂದು ‘ಬಾಸ್ ಮೋಡ್’ ನಲ್ಲಿ ತಾವು ಬೇರಿನಿಂದ ಪುಷ್ಟೀಕರಿಸಿರುವ ಪಕ್ಷದ ಬಗ್ಗೆ ಲಜ್ಜೆ ಗೆಟ್ಟು ನಾಲಿಗೆ ಹರಿಬಿಡುತ್ತಿರುವವರಿಗೆ ಟಾಂಗ್ ಕೊಟ್ಟಿದ್ದಾರೆ.

ಪದೇ ಪದೇ ಕಾಲು ಕೆರೆದುಕೊಂಡು ಕುಮಾರಸ್ವಾಮಿ ಅವರನ್ನು ಕೆಣುಕುತ್ತಿದ್ದ ಸಿದ್ದರಾಮಯ್ಯನವರು, ಮೈತ್ರಿ ಸರ್ಕಾರದ ಅಧಿಕಾರಾವಧಿಯಲ್ಲಿ ಮಾಡುತ್ತಿದ್ದ ಕುಚೇಷ್ಠಿಗಳ ಬಗ್ಗೆ ಕುಮಾರಸ್ವಾಮಿ ಅವರು ಬಯಲು ಮಾಡಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಸಿಲುಕಿಕೊಂಡ ಸಿದ್ದರಾಮಯ್ಯ ನಿರಂತರವಾಗಿ ತಿರುಳಿಲ್ಲದ ವಿಷಕಾರಿ ವ್ಯಂಗ್ಯ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದರೆ. ಇದರ ಬಗ್ಗೆ ಇಂದಿನ ಮಾಧ್ಯಮಘೋಷ್ಠಿಯಲ್ಲಿ ದೇವೇಗೌಡರು ಮಾತನಾಡಿದ್ದಾರೆ.

“ಜೆಡಿಎಸ್ ಪಕ್ಷದ ಜೊತೆ ಸೇರಿದ ಕಾರಣ ಸೋಲು ಅನುಭವಿಸುತ್ತಿದ್ದೇವೆ ಎಂದು ಹೇಳುವ ಕಾಂಗ್ರೆಸ್ 2013 ರಲ್ಲಿ 122 ಕ್ಷೇತ್ರ ಗೆದ್ದ ನಂತರ 2018 ರಲ್ಲಿ 78 ಕ್ಷೇತ್ರಗಳಿಗೆ ಇಳಿಯಲು ಜೆಡಿಎಸ್ ಕಾರಣ ನಾ? ಆತ್ಮಸಾಕ್ಷಿಯಾಗಿ ಮುಸಲ್ಮಾನರನ್ನು ದಾರಿ ತಪ್ಪಿಸಿದ ಪಕ್ಷ ಯಾವುದು ಎಂದು ಹೇಳಲಿ ನೋಡೋಣ. ನನ್ನ ಜಾತ್ಯತೀತ ತತ್ವದ ಬದ್ಧತೆಯನ್ನು ಸವಾಲು ಮಾಡುವುದು ಬೇಡ…ಚರ್ಚೆ ಮಾಡಲು ಸಾಕಷ್ಟು ವಿಷಯಗಳಿವೆ, ಆದರೆ ನನಗೆ ಯಾರನ್ನು ಅಗೌರವಿಸುವ ಉದ್ದೇಶವಿಲ್ಲ. ಈ ಪಕ್ಷವನ್ನು ಯಾರು ಅಳಿಸಲು ಸಾಧ್ಯವಿಲ್ಲ…” ಎಂದು ಸೂಕ್ಷ್ಮವಾಗಿ ಸಿದ್ದರಾಮಯ್ಯರಿಗೆ ಗೌಡರು ಎಚ್ಚರಿಕೆ ನೀಡಿದರು.

Leave a Reply