ಟೊಯೋಟಾ ಕಂಪನಿ ನಿರ್ದೇಶಕರಿಗೆ ಹೆಚ್.ಡಿ.ಕೆ ಖಡಕ್ ವಾರ್ನಿಂಗ್!

ನವೆಂಬರ್ ತಿಂಗಳಿನಿಂದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಸಂಸ್ಥೆಗೂ 3000 ಕ್ಕೂ ಅಧಿಕ ಸದಸ್ಯರುಳ್ಳ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಾರ್ಮಿಕರ ಒಕ್ಕೂಟಕ್ಕೂ ನಡೆಯುತ್ತಿರುವ ಜಟಾಪಟಿಯನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ.

ಮ್ಯಾನೇಜ್ಮೆಂಟ್ ಗೆ ಒಂದು ಎಚ್ಚರಿಕೆ ಕೊಡಲು ಬಯುಸುತ್ತೇನೆ, ನಮ್ಮ ನೆಲ, ನಮ್ಮ ಜಲ, ನಮ್ಮ ವಿದ್ಯುತ್ ಹಾಗು ಉದ್ಯೋಗ ಸೃಷ್ಟಿಸುವ ಉದ್ದೇಶ ವ್ಯಕ್ತಪಡಿಸಿ ತೆರಿಗೆ ವಿನಾಯಿತಿಗಳನ್ನು ಪಡೆಯುತ್ತಾರೆ. ನಂತರ ಹೊರ ರಾಜ್ಯದವರಿಗೆ ಪರ್ಮನೆಂಟ್ ಉದ್ಯೋಗ ನೀಡುತ್ತಾರೆ, ಸ್ಥಳೀಯರನ್ನು ಹೊರಗುತ್ತಿಗೆ ಕಾರ್ಮಿಕರಾಗಿ ನೇಮಕಾತಿ ಮಾಡುಕೊಳ್ಳುವ ಕೆಟ್ಟ ಪದ್ಧತಿ ಪ್ರಾರಂಭವಾಗಿದೆ. ಎಸಿ ರೂಮ್ ಗಳಲ್ಲಿ ಕುಳಿತು ಕಂಪನಿ ಮಾಲೀಕರನ್ನು ಇಲ್ಲಿನ ಮ್ಯಾನೇಜ್ಮೆಂಟ್ ದಾರಿ ತಪ್ಪಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಅಲ್ಲದೆ ರಾಜ್ಯ ಸರ್ಕಾರವು ಸಹ ಈ ವಿಷಯವನ್ನು ಆಲಿಸಿ, ನಮ್ಮ ಸ್ಥಳೀಯ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನಗಳು ಮಾಡಬೇಕು ಎಂದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ದಿರೆ.

ಯಾವುದೇ ರೀತಿಯ ಬಡ್ತಿಯನ್ನು ನೀಡದೆ ಅಥವಾ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿಕೊಳ್ಳದ ನಿರ್ಮಾಣ ಗುರಿಯನ್ನು ಹೆಚ್ಚಿಸಿ ಅಮಾನವೀಯವಾಗಿ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿದ್ದರೆ ಎಂಬುದು ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಾರ್ಮಿಕರ ಒಕ್ಕೂಟದ ಸಂಸ್ಥೆಯ ಮೇಲಿನ ಆರೋಪ. ಈ ವಿಷಯದಲ್ಲಿ ಕುಮಾರಸ್ವಾಮಿ ಅವರು ಕಾರ್ಮಿಕರ ಪರ ಬ್ಯಾಟ್ ಬೀಸಿರುವುದು ಶ್ಲಾಘನೀಯ.

Leave a Reply