ತೈಲ, ಅಡುಗೆ ಅನಿಲ ಆಯ್ತು ಈಗ ಟಿ.ವಿ, ಫ್ರಿಜ್ ಬೆಲೆಗಳಲ್ಲೂ ಏರಿಕೆ

ಐದು ವರ್ಷಗಳ ನೀರಸ ಪ್ರದರ್ಶನದ ಬಳಿಕವೂ ಭಯಾನಕ ಬಹುಮತದೊಂದಿಗೆ 2019 ರಲ್ಲಿ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಲಗಾಮು ಹಿಡಿಯುವಲ್ಲಿ ಯಶಸ್ವಿಯಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೊದಲನೇ ಬಾರಿಗೆ ಅಧಿಕಾರಕ್ಕೆ ಬಂದಾಗಲಿನಿಗಿಂತಲೂ ಹೆಚ್ಚಾಗಿ ಎಲ್ಲಾ ಸಧ್ಯ ರೀತಿಯ್ಗಳಲ್ಲೂ ದೇಶದ ಪ್ರಜೆಗಳ ಜೀವನವನ್ನು ಹದಗೆಟ್ಟಿಸಿದೆ. ಅದರಲ್ಲಿ ಬೆಲೆ ಏರಿಕೆ ಸಹ ಒಂದು.

ದೇಶದಲ್ಲಿ ತೈಲ ಬೆಲೆಯನ್ನು ಲೀಟರ್ಗೆ 30 ಕ್ಕೆ ಇಳಿಸುತ್ತೇವೆ ಎಂದು ಅಧಿಕಾರಕ್ಕೆ ಬರುವ ಮುನ್ನ ಆಶ್ವಾಸನೆ ನೀಡಿದ ಬಿಜೆಪಿ ಪಕ್ಷದ ಆಡಳಿತಾವಧಿಯಲ್ಲಿ ಎಂದೂ ಕಂಡು ಕೇಳರಿಯದ ಮಟ್ಟಿಗೆ ತೈಲ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಹಾಗು ಅಡುಗೆ ಅನಿಲದ ದರವೂ ಸಹ ಮಧ್ಯಮ ವರ್ಗದ ಜನರಿಗೂ ಕೈಗೆಟಕದ ಮಟ್ಟಿಗೆ ತಲುಪುತ್ತಿದೆ. ಈಗ ಟಿವಿ, ಫ್ರಿಡ್ಜ್, ವಾಷಿಂಗ್ ಮಷೀನ್ ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಗಳು ಸಹ ಏರಿಕೆಯಾಗುತ್ತಿವೆ.

ಸಾಮಾನ್ಯ ಜನರ ಜೀವನವನ್ನು ಸಾಲು ಸಾಲು ಅಸಮರ್ಥ, ಕಳಪೆ ನಡೆಗಳ ಮೂಲಕ ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಬಿಜೆಪಿ ಸರ್ಕಾರ ಸೂಟು ಬೂಟಿನ ಸರ್ಕಾರ ಎಂದು ಮತ್ತೆ ಸಾಬೀತು ಪಡಿಸಿದೆ. ಸದ್ಯದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಶೇಕಡ 10ರಷ್ಟು ಹೆಚ್ಚಳ ಆಗುತ್ತಿವೆ.

Leave a Reply