ಉಪಸಭಾಪತಿ ಧರ್ಮೇಗೌಡರ ನಿಧನಕ್ಕೆ ಭಾವುಕರಾದ ಕುಮಾರಸ್ವಾಮಿ

ಜೆಡಿಎಸ್ ಮುಖಂಡರು ಹಾಗೂ ವಿಧಾನ ಪರಿಷತ್ತಿನ ಉಪಸಭಾಪತಿ ಎಸ್.ಎಲ್. ಧರ್ಮೇಗೌಡರು ಆತ್ಮಹತ್ಯೆಗೆ ಶರಣಾಗಿರುವದು ರಾಜ್ಯ ರಾಜಕೀಯದಲ್ಲಿ ಆಘಾತಕಾರಿ ವಾತಾವರಣ ಸೃಷ್ಟಿಸಿದೆ. ಇಂದು (ಡಿ. 29) ರಾತ್ರಿ ಸುಖರಾಯಪಟ್ಟಣದ ತೋಟದ ಮೆನೆಯಿಂದ ತೆರಳಿದ ಧರ್ಮೇಗೌಡರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು “ನನ್ನ ಸ್ವಂತ ಅಣ್ಣ ತಮ್ಮಂದಿರಿಗಿಂತ ಹೆಚ್ಚಾಗಿ ಇದ್ದವರು ಅವರು. ಬಹಳ ಜನ ನಾನು ಇವರಿಬ್ಬರ ಮೇಲೆ ತೋರಿಸುವ ಪ್ರೀತಿಗೆ ನನ್ನನ್ನು ದ್ವೇಷಿಸಲು ಪ್ರಾರಂಭಿಸಿದರು. ಇವರಿಬ್ಬರನ್ನು ಬಿಟ್ಟರೆ ಅವರಿಗೆ (ಕುಮಾರಸ್ವಾಮಿ) ಬೇರೆ ಯಾರು ಕಾಣಲ್ಲ. ಬೋಜೇಗೌಡ, ಧರ್ಮೇಗೌಡನೇ ಅವರಿಗೆ ಮುಖ್ಯ. ಆ ರೀತಿ ನನ್ನನು ದ್ವೇಷ ಮಾಡಲು ಪ್ರಾರಂಭಿಸಿದ್ದು ಇದರಿಂದಲೇನೆ. ನಾನು ಪ್ರೀತಿ ಎಲ್ಲರಿಗೂ ಕೊಟ್ಟೆ, ಆದರೆ ಆ ಇಬ್ಬರು ಅಣ್ಣ ತಮ್ಮಂದರಿಗೆ ಕುಮಾರಣ್ಣ ಬೇಕೋ ನಿಮಗೆ ಶಾಸಕ ಸ್ಥಾನ ಬೇಕೋ ಎಂದು ಕೇಳಿದಾಗ, ಕಾಂಗ್ರೆಸ್ ಗೆ ಹೋಗುವಂತೆ ಒತ್ತಡ ಏನು ಹೇರಿದರು ಕಾಂಗ್ರೆಸ್ ನಾಯಕರು ಅದನ್ನು ನಿರಾಕರಿಸಿ, ಆಗ ನನಗೆ ಕುಮಾರಣ್ಣ ಬೇಕು ಶಾಸಕ ಸ್ಥಾನ ಅಲ್ಲ ಎಂದು 2013 ರಲ್ಲಿ…ಅದೊಂದೇ ಸಾಕು ಆ ಕುಟುಂಬ ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರವಾಗೋಕೆ. ಲಕ್ಷ್ಮಿ ಅನ್ನುವವರನ್ನು ಮಂತ್ರಿ ಮಾಡಲು ಒಂದು ಮಾತು ಕೇಳಿ ದೇವೇಗೌಡರನ್ನು ಎಂದು ಹೇಳಿ ದಿಲ್ಲಿಗೆ ಹೋದ ಅಣ್ಣ ತಮ್ಮಂದಿರು, ಬೆಳಿಗಿನವರೆಗೂ ಅವರು ಕೇಳಲೇ ಇಲ್ಲ. ಕನಿಷ್ಠಪಕ್ಷ ಪ್ರಧಾನಿಗಳ ಜೊತೆ ಕುಳಿತು ಒಂದು ಲೋಟ ಕಾಫಿ ಕುಡಿದೆನಲ್ಲ ನನ್ನ ಭಾಗ್ಯ ಅದು ಎಂದು ಆಚೆ ಬಂದಂತ ಕುಟುಂಬ ಅದು. ನೀರವಾದಿ ಕುಟುಂಬ ಅದು, ಅವರ ತಂದೆಯಿಂದ ಹಿಡಿದು ಪಕ್ಷಕ್ಕೆ ನಿಷ್ಠಾವಂತರು…” ಎಂದು ಹೇಳಿ ಭಾವುಕರಾದ.

Leave a Reply